More

    ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಲಿ

    ಗೌರಿಬಿದನೂರು: ಸರ್ಕಾರದ ಸೌಲಭ್ಯ ಪಡೆಯಲು ಸವಿತಾ ಸಮಾಜ ಜಾಗೃತವಾಗಬೇಕು ಎಂದು ತಾಲೂಕು ಸವಿತಾ ಸಮಾಜ ಯುವ ಘಟಕದ ಅಧ್ಯಕ್ಷ ಜಿ.ಆರ್. ಶ್ರೀನಿವಾಸ್ ಹೇಳಿದರು.

    ನಗರದಲ್ಲಿ ನಗರ ಘಟಕದ ಯುವ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ, ಸಮುದಾಯ ಭವನ ನಿರ್ಮಾಣ, ವಿವಿಧ ಅನುದಾನ ಬಳಕೆ ಕುರಿತು ಚರ್ಚಿಸುವ ಸಲುವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.

    ಸವಿತಾ ಸಮಾಜಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿವಿಧ ಸೌಲಭ್ಯ ಒದಗಿಸಲಾಗುತ್ತದೆ. ಆದರೆ ಜಾಗೃತಿಯ ಕೊರತೆಯಿಂದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಘೋಷಿಸಿದ ಪರಿಹಾರ ಪಡೆಯುವಲ್ಲಿ ಅನೇಕರು ವಿಫಲರಾಗಿದ್ದಾರೆ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಮುದಾಯದ ಮುಖಂಡರು ಮಾಡಬೇಕಿದೆ ಎಂದರು.

    ಸಂಘದ ಕಾರ್ಯದರ್ಶಿ ಜಿ.ಎಸ್. ನಾಗೇಶ್ ಮಾತನಾಡಿ, ಸಮುದಾಯದ ಬಂಧುಗಳು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಬಲ ಸಂಘಟನೆಯಾಗಿ ನಾವು ಹೊರಹೊಮ್ಮಿದಾಗ ಸಮಾಜ ನಮ್ಮನ್ನು ಗುರುತಿಸಲಿದೆ. ನಾವು ನಮ್ಮ ಹಕ್ಕುಗಳಿಗಾಗಿ ನಡೆಸುವ ಹೋರಾಟಗಳಿಗೆ ಫಲ ಸಿಗಲಿದೆ ಎಂದು ತಿಳಿಸಿದರು.

    ಸವಿತಾ ಸಮಾಜ ಯುವ ನಗರ ಘಟಕದ ಅಧ್ಯಕ್ಷರಾಗಿ ಆರ್. ಅರುಣ್‌ಕುಮಾರ್, ಉಪಾಧ್ಯಕ್ಷರಾಗಿ ಸಿ. ಆರ್.ವೇಣು, ಕಾರ್ಯದರ್ಶಿ ಆರ್. ಮಂಜುನಾಥ್, ಖಜಾಂಚಿ ಎನ್. ಅಶೋಕ್, ಸಂಚಾಲಕರಾಗಿ ಶಶಿಕುಮಾರ್, ನಿರ್ದೇಶಕರಾಗಿ ಜಗ್ಗೇಶ್ ಮತ್ತು ಮಂಜುನಾಥ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಘದ ಸಂಚಾಲಕ ಆರ್. ಜಿ. ನಾಗರಾಜ್ ಸೇರಿ ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ಸಮುದಾಯ ಬಂಧುಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts