More

    ಅಭಿವೃದ್ಧಿ ವಿಷಯದಲ್ಲಿ ತಕರಾರು ಬೇಡ, ಜತೆಗಿರಿ

    ಹೊಸನಗರ: ಹೋಬಳಿ ಕೇಂದ್ರ ನಗರದಲ್ಲಿ ನೂತನ ಬಸ್ ನಿಲ್ದಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ ಎಂದು ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
    ಆರಗ ಜ್ಞಾನೇಂದ್ರ ಬರುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ ಕರುಣಾಕರ ಶೆಟ್ಟಿ, ನೂತನ ನಿಲ್ದಾಣಕ್ಕೆ ಅವಕಾಶ ನೀಡಿದ ನಿಮಗೆ ಗೌರವ ಸಲ್ಲಿಸುತ್ತೇನೆ. ನಿಮ್ಮನ್ನು ಅಭಿನಂದಿಸಲು ಪಂಚಾಯಿತಿಯಲ್ಲೂ ನಿರ್ಣಯ ಮಾಡಲಾಗಿದೆ. ಆದರೆ ಗ್ರಾಪಂ ಅಧ್ಯಕ್ಷರಿಗೆ ಮಾಹಿತಿ ನೀಡದೆ ಶಂಕುಸ್ಥಾಪನೆ ನಡೆಸುತ್ತಿರುವುದು ಸರಿಯಲ್ಲ ಎಂದರು.
    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರಗ, ಈ ಬಗ್ಗೆ ನಮ್ಮ ಪಿಎ ಮತ್ತು ಪಿಡಿಒ ಮಾಹಿತಿ ನೀಡಿz್ದÁರೆ. ಹೀಗಿದ್ದು ಒಂದು ಒಳ್ಳೆಯ ಕಾರ್ಯಕ್ರಮಕ್ಕೆ ಕಿರಿಕಿರಿ ಮಾಡೋದು ಸರಿಯಲ್ಲ. ನಿಲ್ದಾಣಕ್ಕೆ ಅವಕಾಶ ನೀಡಿದ ಸಚಿವನಾದ ನನಗೆ ನೀಡುವ ಗೌರವ ಇದೇನಾ ಎಂದು ಪ್ರಶ್ನಿಸಿದರು. ಅಭಿವೃದ್ಧಿ ವಿಚಾರದಲ್ಲಿ ತಕರಾರು ಬೇಡ, ಜತೆಗಿರಿ ಎಂದರು. ಆದರೂ ಕರುಣಾಕರ ಶೆಟ್ಟಿ ಅಲ್ಲಿಂದ ಹೊರನಡೆದರು. ಬಳಿಕ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಜಿಪಂ ಮಾಜಿ ಸದಸ್ಯ ಸುರೇಶ ಸ್ವಾಮಿರಾವ್, ಸಚಿವರ ಆಪ್ತ ಸಹಾಯಕ ಬಸವರಾಜ ಹೊದಲ, ಪ್ರಮುಖರಾದ ಎನ್.ವೈ.ಸುರೇಶ್, ಕೆ.ವಿ.ಕೃಷ್ಣಮೂರ್ತಿ ಇತರರಿದ್ದರು.
    ವಿವಿಧ ಕಾಮಗಾರಿ ಉದ್ಘಾಟನೆ-ಶಂಕುಸ್ಥಾಪನೆ: ಮೂಡುಗೊಪ್ಪ, ಕರಿಮನೆ, ಅಂಡಗದೋದೂರು ಗ್ರಾಪಂ ವ್ಯಾಪ್ತಿಯಲ್ಲಿ ಮಂಗಳವಾರ ಸಚಿವ ಆರಗ ಜ್ಞಾನೇಂದ್ರ ಅವರು ರೂ. 25 ಕೋಟಿ ವೆಚ್ಚದ 30ಕ್ಕೂ ಹೆಚ್ಚು ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು. ಅಂಡಗದೋದುರು ಗ್ರಾಪಂನ ಮಕ್ಕಿಮನೆ ರಸ್ತೆ ಗುದ್ದಲಿ ಪೂಜೆ, ಬೇಳೂರು ಆಚಾರ್ಯ ಕಾಕನಿ, ಹೆಣ್ಣೆಬೈಲು ರಸ್ತೆ, ಬೇಳೂರು ಶಾಲಾ ಉದ್ಘಾಟನೆ, ಅರೋಡಿ ಕುಂಟಳ್ಳಿ ರಸ್ತೆಗೆ ಗುದ್ದಲಿ ಪೂಜೆ, ನಗರ ಸುಳುಗೊಡು, ಚಕ್ಕಾರು, ದುಬಾರತಟ್ಟಿ ರಸ್ತೆ, ನಗರ ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ, ಹಾಸ್ಟೆಲï, ಚಿಕ್ಕಪೇಟೆ ಅಂಗನವಾಡಿ ಉದ್ಘಾಟನೆ, ಬೈರೋಜಿಬ್ಯಾಣ ರಸ್ತೆ, ಕರಿಮನೆ ಗ್ರಾಪಂನ ಸಂದೋಡಿ ಸೇತುವೆ, ಮಳಲಿ ಗ್ರಾಮದ ಸಂಪಗೋಡು ರಸ್ತೆ ಉದ್ಘಾಟನೆ, ಕರಿಮನೆ ಶಾಲೆ ಉದ್ಘಾಟನೆ, ಕಿಳಂದೂರು ರಸ್ತೆ ಮತ್ತು ಜಲಜೀವನ ಕುಡಿಯುವ ನೀರಿನ ಉದ್ಘಾಟನೆ,  ಅಂಡಗದೋದುರು ಗ್ರಾಪಂನ ಅಮ್ತಿ, ಬಾಳೆಮನೆ ರಸ್ತೆ, ಮೇಲಿನಮನೆ ಸುಬ್ಬಣ್ಣನ ಮನೆ ಹತ್ತಿರ ಕಾಲುಸುಂಕ, ದಿಡಿಗೆ ಮನೆ, ಮೇಲಿನಮನೆ, ಕುನ್ನಳ್ಳಿ ಮತ್ತು ಗಿರಿಜಮ್ಮನ ಮನೆಗೆ ಹೋಗುವ ರಸ್ತೆಗಳು, ಹೊಳೆಕೊಪ್ಪ ಜಂಬ್ಳಿ, ರ್ಯಾವೆ ಕಣಕಿ, ಬಿಳುಕೊಪ್ಪ, ಅಗ್ಗೆಬೈಲು ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts