More

    ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ; ಶಾಸಕಿ ಎಂ.ರೂಪಕಲಾ ಸ್ಪಷ್ಟನೆ

    ಬೇತಮಂಗಲ: ರಸ್ತೆಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಾನು ಯಾವುದೇ ರಾಜೀ ಆಗುವುದಿಲ್ಲ. ಸಾರ್ವಜನಿಕರು, ಸ್ಥಳಿಯ ಸಂಸ್ಥೆಗಳು, ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

    ಬೇತಮಂಗಲದ ಹಳೇ ಮದ್ರಾಸ್​ ರಸ್ತೆ ಯನ್ನು ಅಗಲೀಕರಣಗೊಳಿಸಿ, ಉತ್ತಮ ರಸ್ತೆಯನ್ನಾಗಿ ಪರಿವರ್ತಿಸಲು ಕೈಗೊಂಡಿರುವ ಕಾಮಗಾರಿಯನ್ನು ವೀಸಿ, ಬಳಿಕ ಸಾರ್ವಜನಿಕರು ಹಾಗೂ ಸ್ಥಳಿಯ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ಒಟ್ಟು 500ಮೀ ಉದ್ದದ ಚರಂಡಿ, ುಟ್​ಪಾತ್​ ಸೇರಿ ಒಟ್ಟು 40ಅಡಿ ಅಗಲದ ರಸ್ತೆ ನಿರ್ಮಾಣಕ್ಕೆ 1ಕೋಟಿ ರೂ. ವಿಶೇಷ ಅನುದಾನದಲ್ಲಿ ಉತ್ತಮ ರಸ್ತೆ ನಿರ್ಮಾಣವಾಗಲಿದೆ ಎಂದರು.

    ರಸ್ತೆಯ ಎರಡೂ ಬದಿಯ ಕಟ್ಟಡಗಳನ್ನು ಈಗಾಗಲೇ ಲೋಕೋಪಯೋಗಿ ಇಲಾಖೆಯವರು ಗುರುತಿಸಿರುವ ಸ್ಥಳಕ್ಕೆ ಸರಿಯಾಗಿರಬೇಕು. ಅಧಿಕಾರಿಗಳು ಹೊಡೆದು ಉರುಳಿಸುವಾಗ ನಿಮ್ಮ ಕಟ್ಟಡ, ಇತರೆ ವಸ್ತುಗಳು ನಾಶವಾದರೆ ಅದಕ್ಕೆ ನೀವೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದರು.

    ಗ್ರಾಪಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡ ಶಾಸಕಿ ರಸ್ತೆ ಕಾಮಗಾರಿ ಸಂಪೂರ್ಣವಾಗುವವರೆಗೆ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ಸಾರ್ವಜನಿಕರಿಗೆ ಕುಡಿಯುವ ನೀರು ವಿದ್ಯುತ್​ ಸೇರಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

    ಗ್ರಾಪಂ ಸದಸ್ಯ, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ: ಸ್ಥಳದಲ್ಲಿದ್ದ ಕಟ್ಟಡ ಮಾಲೀಕರಲ್ಲಿ ಕೆಲವರು ಹೇಗೂ ರಸ್ತೆ ಮಾಡುತ್ತಿದ್ದೀರಿ ಇನ್ನೂ ಸ್ವಲ್ಪ ದೊಡ್ಡದಾಗಿ ರಸ್ತೆ ಮಾಡಿ ಮೇಡಮ್​ ನಮ್ಮ ಕಟ್ಟಡಗಳು ಇನ್ನೂ ಸ್ವಲ್ಪ ಹೋದರೂ ಪರವಾಗಿಲ್ಲ ಎಂದು ಹೇಳಿದರೆ, ಮತ್ತೆ ಕೆಲವರು ನಮ್ಮ ಕಟ್ಟಡ ಕೇವಲ 1ಅಡಿ ಹೋಗುತ್ತೆ ಅದನ್ನು ಹೊಡೆಯದೇ ಬಿಟ್ಟುಬಿಡಿ ಎಂದರು.

    ಮತ್ತೆ ಕೆಲವರು ಈಗ ಮಾಡುತ್ತಿರುವುದು ಸರಿಯಾಗಿದೆ. ಇದನ್ನೇ ಮುಂದುವರಿಸಿ ಎಂದರು. ಗ್ರಾಪಂ ಸದಸ್ಯ ಶೇಷಾದ್ರಿ ಮಾತನಾಡಿ, ನಮಗೆ ನೋಟಿಸ್​ ನೀಡಿಲ್ಲ ಅಥವಾ ನಾವೇ ಖಾಲಿ ಮಾಡಲು ಇನ್ನೂ ಸಮಯ ಬೇಕು ಎಂದರು.

    ಎಲ್ಲದಕ್ಕೂ ಉತ್ತರಿಸಿದ ಶಾಸಕಿ ಪ್ರಾರಂಭದಲ್ಲಿ ಒಟ್ಟು 20ಮೀ ರಸ್ತೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ನೂರಾರು ವರ್ಷಗಳಿಂದ ಈ ರಸ್ತೆಯಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ನೋವಾಗಬಾರದು ಎಂಬ ಮಾನವೀಯತೆ ದೃಷ್ಟಿಯಿಂದ 12 ಮೀ ರಸ್ತೆ ಮಾಡುತ್ತಿದ್ದು ಎಲ್ಲರೂ ಸಹಕರಿಸಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts