More

    ಅಭಿವೃದ್ಧಿ, ನೈರ್ಮಲ್ಯ ಕ್ರಿಯಾಯೋಜನೆ 15ರೊಳಗೆ ತಯಾರಿಸಿ

    ಎನ್.ಆರ್.ಪುರ: ಗ್ರಾಮದ ಅಭಿವೃದ್ಧಿ ಹಾಗೂ ನೈರ್ಮಲ್ಯ ಕ್ರಿಯಾಯೋಜನೆಯನ್ನು ಸೆ.15ರೊಳಗೆ ತಯಾರಿಸಬೇಕು. ಗಾಂಧಿ ಜಯಂತಿ ದಿನದಂದು ಪ್ರತಿ ಗ್ರಾಪಂನಲ್ಲೂ ವಿಶೇಷ ಗ್ರಾಮಸಭೆ ನಡೆಸಿ ತಾಪಂ ಇಒ, ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒ ಅವರಿಂದ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಜಿಪಂ ಎಚ್​ಆರ್​ಡಿ ಸಮಾಲೋಚಕ ರತ್ನಾಕರ ಹೇಳಿದರು.

    ತಾಪಂ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ಜಿಪಂ ಹಾಗೂ ತಾಪಂ ಆಶ್ರಯದಲ್ಲಿ ತಾಲೂಕಿನ ಎಲ್ಲ ಗ್ರಾಪಂ ಅಧ್ಯಕ್ಷರು, ಪಿಡಿಒ ಹಾಗೂ ಡೇಟಾ ಎಂಟ್ರಿ ಆಪರೇಟರ್​ಗಳಿಗೆ ಆಯೋಜಿಸಿದ್ದ ಗ್ರಾಮ ನೈರ್ಮಲ್ಯ ಯೋಜನೆ ತಯಾರಿಕೆ ತರಬೇತಿಯಲ್ಲಿ ಮಾಹಿತಿ ನೀಡಿದರು. ಗ್ರಾಮದ ಶುಚಿತ್ವ ಹಾಗೂ ನೈರ್ಮಲ್ಯಕ್ಕಾಗಿ ಪ್ರತಿಯೊಬ್ಬರೂ ಸ್ವಚ್ಛತಾ ಚಳವಳಿಯ ಹರಿಕಾರರಾಗಬೇಕು. ವೈಯಕ್ತಿಕ ಶೌಚಗೃಹ, ಸಮುದಾಯ ಶೌಚಗೃಹ, ಘನ-ದ್ರವ ಮತ್ತು ಮಲ ತ್ಯಾಜ್ಯ ನಿರ್ವಹಣೆ, ಗೋಬರ್​ಧನ್, ವೈಯಕ್ತಿಕ ಸ್ವಚ್ಛತೆ ಮುಂತಾದ ಚಟುವಟಿಕೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ತಾಪಂ ಹಾಗೂ ಎಲ್ಲ ಗ್ರಾಪಂ ಅಧ್ಯಕ್ಷರು, ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

    ಜಿಪಂ ಐಇಸಿ ಸಂಯೋಜಕ ಸುರೇಶ್ ಮಾತನಾಡಿ, ಸ್ವಚ್ಛ ಭಾರತ್ ಮಿಷನ್ ಯೋಜನೆಯು ದೇಶದ ಅಭಿವೃದ್ಧಿಯ ಪ್ರತೀಕ. ಜಿಲ್ಲೆಯ ಪ್ರತಿಯೊಬ್ಬರೂ ಸ್ವಚ್ಛತೆ, ಆರೋಗ್ಯ, ಶೌಚಗೃಹ ಬಳಕೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಅರಿವು ಹೊಂದಿರಬೇಕು. ಗ್ರಾಮಗಳ ನೈರ್ಮಲ್ಯದ ವಸ್ತುಸ್ಥಿತಿ ಗುರುತಿಸಿ, 2024ರೊಳಗಾಗಿ ಬಯಲು ಬಹಿರ್ದೆಸೆಮುಕ್ತ ಗ್ರಾಮವಾಗಿ ಘೊಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts