More

    ಅಭಿವೃದ್ಧಿ ಕಾಮಗಾರಿಗೆ ಚಾಲನೆ

    ಯಳಂದೂರು: ತಾಲೂಕಿನ ವಿವಿಧ ಗ್ರಾಮಗಳಾದ ಯರಿಯೂರು, ಕಂದಹಳ್ಳಿ, ದುಗ್ಗಹಟ್ಟಿ,ಹೊನ್ನೂರು, ಕೆಸ್ತೂರು ಗ್ರಾಮಗಳಲ್ಲಿ 1.85 ಕೋಟಿ ವೆಚ್ಚದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಶಾಸಕ ಎನ್.ಮಹೇಶ್ ಚಾಲನೆ ನೀಡಿದರು.
    ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಆದ್ಯತೆ ನೀಡುವ ಡಿವ ಮೂಲಕ ವಿಶೇಷ ಒತ್ತನ್ನು ನೀಡಿದ್ದು, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಹಣ ಬಿಡುಗಡೆ ಮಾಡಿಸಲಾಗಿದೆ. ಕ್ಷೇತ್ರವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿಯ ಪರ್ವ ಆರಂಭಗೊಂಡಿದೆ. ಹಿಂದುಳಿದ ವರ್ಗಗಳು, ಲಿಂಗಾಯತ ಸಮುದಾಯ ವಾಸಿಸುವ ಬಡಾವಣೆಗಳ ಅಭಿವೃದ್ಧಿಗೆ ಈ ಹಣವನ್ನು ವಿನಿಯೋಗಿಸಲಾಗುತ್ತಿದೆ ಎಂದರು.
    ಹೊನ್ನೂರು ಗ್ರಾಮದ ಉಪ್ಪಾರರ ಹೊಸ ಬಡಾವಣೆ ಇದುವರೆಗೂ ರಸ್ತೆಯನ್ನೇ ಕಂಡಿಲ್ಲ. ಚರಂಡಿಯಂತೂ ಮರೀಚಿಕೆಯಾಗಿತ್ತು. ಈ ಹಿಂದೆ ಸುರಿದಿದ್ದ ಭಾರೀ ಮಳೆಯಿಂದ ಈ ಭಾಗದ ಜನರು ಅನೇಕ ಬವಣೆಗಳನ್ನು ಅನುಭವಿಸಿದ್ದರು. ಈ ಬಗ್ಗೆ ಪ್ರತಿಭಟನೆಯನ್ನೂ ಮಾಡಿದ್ದರು. ಇದಕ್ಕಾಗಿ ಈಗ ವಿಶೇಷ ಕಾಳಜಿಯನ್ನು ಇಲ್ಲಿಗೆ ವಹಿಸಿದ್ದು 30 ಲಕ್ಷ ರೂ. ಹಣವನ್ನು ವಿನಿಯೋಗಿಸಿ ರಸ್ತೆ ಚರಂಡಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದು ಆರಂಭವಾಗಿದ್ದು ಮುಖ್ಯ ರಸ್ತೆಯಿಂದ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಪ್ರಥಮ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲೂಕಿನಲ್ಲಿ ಭೂಮಿಪೂಜೆ ನೆರವೇರಿಸಿರುವ ಎಲ್ಲಾ ಕಾಮಗಾರಿಗಳನ್ನೂ ಜನವರಿ ಒಳಗೆ ಮುಗಿಸಬೇಕೆಂದು ಸಲಹೆ ನೀಡಲಾಗಿದೆ ಎಂದರು.
    ಇಒ ಉಮೇಶ್ ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ, ಜೆಇ ದಿಲೀಪ್, ಯರಿಯೂರು ಗ್ರಾಪಂ ಅಧ್ಯಕ್ಷ ಪ್ರವೀಣ್, ಕೆಸ್ತೂರು ಗ್ರಾಪಂ ಅಧ್ಯಕ್ಷ ಬಾಲುಪ್ರಸಾದ್ ಪಿಡಿಒಗಳಾದ ಲಲಿತಾ, ಸವಿತಾ, ಮಮತಾ, ನಿರಂಜನ್ ಮುಖಂಡರಾದ ಹೊನ್ನೂರು ಪ್ರಕಾಶ್, ಸತೀಶ್, ಮಾಂಬಳ್ಳಿ ರಾಮು, ಗೋಪಿ, ಮಹದೇವಸ್ವಾಮಿ, ಮಾದೇಶ್ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts