More

    ಅಭಿವೃದ್ಧಿಯೇ ಬಿಜೆಪಿ ಸಿದ್ಧಾಂತ

    ಚಿಕ್ಕಮಗಳೂರು: ಬಿಜೆಪಿಯು ಹಿಂದುತ್ವ, ದೇಶ ಎನ್ನುವ ಸಿದ್ಧಾಂತಕ್ಕಾಗಿ ರಾಜಕಾರಣ ಮಾಡುತ್ತದೆ. ಜಾತಿ ನಮ್ಮ ಸಿದ್ಧಾಂತವಲ್ಲ, ಅಭಿವೃದ್ಧಿಯೇ ಗುರಿ. ನಿರಂತರ ಹೋರಾಟ ಮಾಡಿದ ಕಾರಣಕ್ಕೆ 630 ಕೋಟಿ ರೂ. ವೆಚ್ಚದ ಮೆಡಿಕಲ್ ಕಾಲೇಜು ನಿರ್ಮಾಣ ಸಾಧ್ಯವಾಗಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

    ಬಂಡಿಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ವಣಕ್ಕೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಬದಲಾಗುತ್ತಿದೆ. ನೀವೂ ನಮ್ಮ ಜತೆ ಬಲವಾಗಿ ನಿಂತುಕೊಂಡರೆ ಇನ್ನಷ್ಟು ಕೆಲಸ ಮಾಡುವ ಹುಮ್ಮಸ್ಸು ಬರುತ್ತದೆ. ಕಾಂಕ್ರೀಟ್ ರಸ್ತೆ ಬೇಕೆಂಬುದು ಬಂಡಿಹಳ್ಳಿ ಗ್ರಾಮದ ಬಹುದಿನಗಳ ಬೇಡಿಕೆಯಾಗಿತ್ತು. 10 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಬಂಡಿಹಳ್ಳಿ-ಕುರುವಂಗಿ ರಸ್ತೆಗೂ 50 ಲಕ್ಷ ರೂ. ಮಂಜೂರು ಮಾಡಿಸಿದ್ದೇನೆ. ಸಮುದಾಯ ಭವನ ನಿರ್ವಿುಸಲು ಮೊದಲ ಕಂತಾಗಿ 10 ಲಕ್ಷ ರೂ. ಕೊಡುತ್ತೇನೆ. ಮುಂದುವರಿದ ಕಾಮಗಾರಿಗೆ ಮತ್ತೆ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

    ಚಿಕ್ಕನಹಳ್ಳಿಯಲ್ಲಿ ಬೋರ್​ವೆಲ್ ತೆಗೆಸಿದರೂ ನೀರು ಸಿಗದಿದ್ದರಿಂದ ಕರ್ತಿಕೆರೆ ಗ್ರಾಪಂ ವ್ಯಾಪ್ತಿಯ ಎಲ್ಲ ಭಾಗದಲ್ಲಿಯೂ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ಹಾಕಿಸಿ ನೀರು ಕೊಡುವ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

    ಗ್ರಾಮದಲ್ಲಿ ಸಮುದಾಯ ಭವನ ನಿರ್ವಣವಾಗಬೇಕು. ಬೊಮ್ಮನಕಟ್ಟೆ ಒಡೆದು ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿ ರೈತರಿಗೆ ನಷ್ಟವಾಗುತ್ತಿರುವುದರಿಂದ ನಾಲೆ ನಿರ್ವಿುಸಬೇಕು. ಸಿಮೆಂಟ್ ರಸ್ತೆ, ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.

    ತಾಪಂ ಮಾಜಿ ಅಧ್ಯಕ್ಷ ನೆಟ್ಟೆಕರೆಹಳ್ಳಿ ಜಯಣ್ಣ, ಜಿಪಂ ಮಾಜಿ ಸದಸ್ಯ ಬೀಕನಹಳ್ಳಿ ಸೋಮಶೇಖರ್, ಗ್ರಾಪಂ ಅಧ್ಯಕ್ಷ ಯತೀಶ್, ಸದಸ್ಯ ಪುಟ್ಟಸ್ವಾಮಿ ಶೆಟ್ಟಿ, ಮುಖಂಡರಾದ ಕೋಟೆ ರಂಗನಾಥ್, ಕನಕರಾಜ್ ಅರಸ್ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts