More

    ಅಪ್ಪಣ್ಣ ಅಭಿವೃದ್ಧಿ ನಿಗಮ ಅಧಿವೇಶನದಲ್ಲಿ ಚರ್ಚೆ

    ಹುಮನಾಬಾದ್: ಹಡಪದ ಸಮಾಜ ಎಲ್ಲ ರೀತಿಯಿಂದಲೂ ಹಿಂದುಳಿದಿದ್ದು, ಈ ಸಮಾಜದ ಸವರ್ಾಂಗೀಣ ಅಭಿವೃದ್ಧಿಗಾಗಿ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಅಧಿವೇಶನದಲ್ಲಿ ಚಚರ್ಿಸಿ ಸಕರ್ಾರದ ಮೇಲೆ ಒತ್ತಡ ಹೇರುವುದಾಗಿ ಶಾಸಕ ರಾಜಶೇಖರ ಪಾಟೀಲ್ ಭರವಸೆ ನೀಡಿದರು.

    ಪಟ್ಟಣದ ಸಕರ್ಾರಿ ನೌಕರರ ಭವನದಲ್ಲಿ ಮಂಗಳವಾರ ತಾಲೂಕು ಹಡಪದ ಅಪ್ಪಣ್ಣ ಸಮಾಜದ ಸಂಘದ ವತಿಯಿಂದ ಏರ್ಪಡಿಸಿದ್ದ ಶರಣ ಶ್ರೀ ಹಡಪದ ಅಪ್ಪಣ್ಣನವರ 888ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರ ಆಪ್ತಕಾರ್ಯದಶರ್ಿಯಾಗಿ ಸೇವೆ ಸಲ್ಲಿಸಿದ ಅಪ್ಪಣ್ಣನವರು ಅನೇಕ ವಚನಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

    ಸಮಾಜದ ಜನರ ನಿಗಮ ಸ್ಥಾಪನೆ ಬೇಡಿಕೆ ಸೂಕ್ತವಾಗಿದ್ದು, ತಾಲೂಕು ಮಟ್ಟದಿಂದ ರಾಜ್ಯಮಟ್ಟದ ವರೆಗೆ ಸಂಘಟಿತರಾಗಿ ಸಕರ್ಾರದ ಮುಂದೆ ಬೇಡಿಕೆ ಮಂಡಿಸಲು ಸಿದ್ಧರಾಗುವ ಅವಶ್ಯಕವಾಗಿದೆ. ಅಪ್ಪಣನವರ ಗವಿಗೆ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಲು ಶ್ರೀಗಳು ಹಾಗೂ ನಾನು ಸೇರಿ ಅಧಿಕಾರಿಗಳೊಂದಿಗೆ ಚಚರ್ಿಸಿ ಪ್ರಯತ್ನಿಸಲಾಗುವುದು ಎಂದರು.

    ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ನೇತೃತ್ವ ವಹಿಸಿದ್ದ ಹುಲಸೂರು ಶ್ರೀ ಶಿವಾನಂದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿ, ಬಸವಣ್ಣ ಎಂದರೆ ಅಪ್ಪಣ್ಣ, ಅಪ್ಪಣ ಎಂದರೆ ಬಸವಣ್ಣ. ಹಡಪದ ಎನ್ನುವುದು ಕಾಯಕದಿಂದ ಬಂದಿದೆಯೇ ವಿನಹ ಜಾತಿಯಲ್ಲ. ಎಲ್ಲರೂ ಸೇರಿ ಬಸವಾದಿ ಶರಣರ ತೇರು ಎಳೆಯೋಣ ಎಂದರು.
    ಸಮಾಜದ ತಾಲೂಕು ಅಧ್ಯಕ್ಷ ಶಿವಶಂಕರ ಹಡಪದ ಅಧ್ಯಕ್ಷತೆ ವಹಿಸಿ ಮಾತನಾಡಿ, 2017ರಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರು ಸಮಾಜಕ್ಕೆ ನಿಗಮ ಹಾಗೂ ಪ್ರವರ್ಗ-1ಕ್ಕೆ ಸೇರಿಸಿ, ಎಸ್ಟಿ ವರ್ಗಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ನೀಡಿದ ಭರವಸೆ ಇಂದಿಗೂ ಈಡೇರಿಲ್ಲ. ಸಮಾಜದ ಬೇಡಿಕೆಗಳನ್ನು ಈಡೇರಿಸಲು ಶಾಸಕರು ಸಕರ್ಾರದ ಮೇಲೆ ಒತ್ತಡ ಹೇರುವಂತೆ ಕೋರಿದರು.

    ಪುರಸಭೆ ಅಧ್ಯಕ್ಷೆ ರೀತು ಶಮರ್ಾ, ಪ್ರಮುಖರಾದ ವಸಂತ ಚಿದ್ರಿ, ಸಿದ್ರಾಮ ವಾಘಮಾರೆ, ಶಿವರಾಜ ಚೀನಕೇರಾ, ಅರುಣ ಕುಣರ್ೆ, ಶಕೀಲ್ ಪಟೇಲ್ ಓತಗಿ, ಶಾಂತಕುಮಾರ, ವೆಂಕಟೇಶ ಹಡಪದ, ರೇವಣಸಿದ್ದಪ್ಪ ಹಡಪದ, ಸೋನಾಲಿ ನೀಲಕಂಠೆ, ಭಗವಂತ ಜೇವಗರ್ಿ ಇತರರಿದ್ದರು. ಮಲ್ಲಿಕಾಜರ್ುನ ನೀಲಕಂಠೆ ಸ್ವಾಗತಿಸಿದರು. ಉಮೇಶ ಹಡಪದ ಹುಡಗಿ ವಂದಿಸಿದರು. ಗೋರಖನಾಥ ಹಡಪದ ನಿರೂಪಣೆ ಮಾಡಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸಮಾಜ ವಿದ್ಯಾಥರ್ಿಗಳು ಹಾಗೂ ಸಮಾಜದ ಕಾರ್ಯಕ್ಕೆ ಶ್ರಮಿಸಿದ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಪಟ್ಟಣದಲ್ಲಿ ಸಮಾಜದ ಜನರಿಗೆ ಸಮುದಾಯ ಭವನಕ್ಕೆ ನಿವೇಶನ ಒದಗಿಸಿಕೊಡಲು ಜಿಲ್ಲಾಧಿಕಾರಿಗೆ ತಿಳಿಸಿದ್ದು, ಸಕರ್ಾರದಿಂದ ನಿವೇಶನ ಮಂಜೂರಾತಿ ದೊರಕಿಸಿಕೊಡುವ ಜತೆಗೆ ಅದಕ್ಕೆ ತಗುಲುವ ವೆಚ್ಚ ನಾನು ವೈಯಕ್ತಿಕವಾಗಿ ಭರಿಸಿ ಕಟ್ಟಡ ನಿಮರ್ಾಣಕ್ಕೆ ಅನುದಾನ ನೀಡುತ್ತೇನೆ.
    | ರಾಜಶೇಖರ ಪಾಟೀಲ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts