More

    ಅಪಾಯ ಆಹ್ವಾನಿಸುತ್ತಿವೆ ಹಳೆ ಕಟ್ಟಡ

    ಕಾರವಾರ: ನಗರದ ಪೊಲೀಸ್ ಹೆಡ್ ಕ್ವಾಟ್ರಸ್ ಸಮೀಪ ತೀರ ಹಳೆಯದಾದ ಕಟ್ಟಡವೊಂದು ಬೀಳುವ ಹಂತದಲ್ಲಿದ್ದು, ಅಕ್ಕ ಪಕ್ಕದ ಮನೆಯವರು ಆತಂಕದಲ್ಲಿದ್ದಾರೆ.

    ಕೋಡಿಬಾಗದಲ್ಲಿ ಪೋಲ್ ಬೋರ್ಜಸ್ ಎಂಬುವವರ ಹೆಸರಿನ ಕಟ್ಟಡದಲ್ಲಿ ಯಾರೂ ವಾಸವಿಲ್ಲ. ಮೂಲ ಮಾಲೀಕರು ಮೃತಪಟ್ಟಿದ್ದು, ಅವರ ಮಕ್ಕಳು ಮುಂಬೈನಲ್ಲಿ ವಾಸವಿದ್ದಾರೆ ಎನ್ನಲಾಗಿದೆ. ಆದರೆ, ಕಟ್ಟಡದ ಮೇಲೆ ಗಿಡ ಗಂಟಿ ಬೆಳೆದು ಕಳೆದ ಎರಡು ದಶಕಗಳಿಂದ ಪಾಳು ಬಿದ್ದಿದೆ. ಕಾರವಾರ-ಕೋಡಿಬಾಗ ಮುಖ್ಯ ರಸ್ತೆಯಲ್ಲಿಯೇ ಇರುವುದರಿಂದ ಯಾವುದೇ ಕ್ಷಣದಲ್ಲೂ ಬೀಳುವ ಸಾಧ್ಯತೆ ಇದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

    ಇದೊಂದೇ ಅಲ್ಲ: ನಗರದಲ್ಲಿ ಪಾಳು ಬಿದ್ದು, ಅಪಾಯದ ಹಂತದಲ್ಲಿರುವ ಕಟ್ಟಡ ಇದೊಂದೇ ಅಲ್ಲ, ಕಳೆದ ವರ್ಷ ಮಳೆಗಾಲದಲ್ಲಿ ಬಸ್ ನಿಲ್ದಾಣದ ಸಮೀಪ ಹಳೆಯ ಕಟ್ಟಡವೊಂದು ಕುಸಿದು ಆಟೋ ಜಕಂಗೊಂಡಿತ್ತು. ತೀರ ಅಪಾಯದಲ್ಲಿರುವ ಇನ್ನೂ 17 ಕಟ್ಟಡಗಳಿವೆ ಎಂದು ನಗರಸಭೆ ಕಳೆದ ವರ್ಷ ಗುರುತಿಸಿತ್ತು. ಕಟ್ಟಡದ ಮಾಲೀಕರಿಗೆ ನೋಟಿಸ್ ಜಾರಿ ಮಾಡಿತ್ತು. ಮಾಲೀಕರು ಸ್ಥಳದಲ್ಲಿ ಇಲ್ಲದಿದ್ದಲ್ಲಿ ಬಾಗಿಲಿಗೆ ನೋಟಿಸ್ ಹಚ್ಚಲಾಗಿದೆ. ಆದರೂ ಏನೂ ಪ್ರಯೋಜನವಾಗುತ್ತಿಲ್ಲ. ಈನ್ನು ಹಲವು ಕಟ್ಟಡಗಳು ತೆರವಾಗಿಲ್ಲ.

    ಕಟ್ಟಡ ಮುಖ್ಯ ರಸ್ತೆಯಲ್ಲೇ ಇದೆ. ಅಲ್ಲದೆ, ಪಕ್ಕದಲ್ಲೇ ಹಲವು ಮನೆಗಳಿದೆ. ಅಪಾಯ ಸಂಭವಿಸಿದಲ್ಲಿ ಅದಕ್ಕೆ ನಗರಸಭೆ ಹೊಣೆಗಾರರಾಗಬೇಕಾಗಬಹುದು. ಈ ಸಂಬಂಧ ನಾನು 2003 ರಲ್ಲಿಯೂ ನಗರಸಭೆಗೆ ದೂರು ನೀಡಿದ್ದೆ. ಈಗ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ. ಸದಾನಂದ ವಿಶ್ರಾಮ ಮಾಂಡ್ಲೇಕರ್ ಕೋಡಿಬಾಗ, ಕಾರವಾರ

    ನಗರದಲ್ಲಿ ಶಿಥಿಲಾವಸ್ಥೆ ತಲುಪಿದ ಹಲವು ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಕೆಲವನ್ನು ನಗರಸಭಯಿಂದಲೇ ಕೆಡವಿದ್ದೇವೆ. ಕೆಲವು ಪ್ರಕರಣಗಳ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಹಾಗೇ ಬಿಡಲಾಗಿದೆ. ಇನ್ನೂ ಕೆಲವು ಕಟ್ಟಡಗಳಿರುವುದು ಗಮನಕ್ಕೆ ಇದೆ. ಸದ್ಯ ಕೋವಿಡ್ ಕಾರಣಕ್ಕೆ ನಗರಸಭೆಯ ಕಲವು ವಿಭಾಗಗಳು ಬಂದಾಗಿವೆ. ತುರ್ತು ಕಾರ್ಯಗಳನ್ನು ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಇನ್ನೊಮ್ಮೆ ನೋಟಿಸ್ ನೀಡಿ, ಶಿಥಿಲವಾದ ಎಲ್ಲ ಕಟ್ಟಡಗಳನ್ನು ತೆರವು ಮಾಡಲು ಕ್ರಮ ವಹಿಸಲಾಗುವುದು. | ಪ್ರಿಯಾಂಗಾ ಎಂ. ನಗರಸಭೆ ಪ್ರಭಾರ ಪೌರಾಯುಕ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts