More

    ಅಪಾಯದಲ್ಲಿ ನಗರ ಚಿಕ್ಕಪೇಟೆ ಸೇತುವೆ

    ಹೊಸನಗರ: ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿರುವ ನಗರ ಚಿಕ್ಕಪೇಟೆ ಸೇತುವೆ ಅಪಾಯದಂಚಿನಲ್ಲಿದ್ದು ಕಲ್ಲುಗಳು ಕಳಚುತ್ತಿವೆ. ಶಿವಮೊಗ್ಗ ಜಿಲ್ಲೆಯಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಸಂರ್ಪಸುವ ಸೇತುವೆ ಇದಾಗಿದ್ದು ಒಂದು ವೇಳೆ ಕುಸಿದಲ್ಲಿ ಸಂಚಾರಕ್ಕೆ ತೊಂದರೆಯಾಗಲಿದೆ.

    ಚಿಕ್ಕಪೇಟೆ-ನಗರ ಸೇತುವೆ ಬುಡದಿಂದ ಸುಮಾರು 8-10 ಅಡಿವರೆಗೂ ಕಲ್ಲುಗಳು ಕಳಚಿವೆ. ಇದು ವ್ಯಾಪಕ ಮಳೆಬೀಳುವ ಪ್ರದೇಶ ಮಾತ್ರವಲ್ಲ, ಲಿಂಗನಮಕ್ಕಿ ಹಿನ್ನೀರು ಪ್ರದೇಶವೂ ಹೌದು. ಅತಿಯಾದ ಮಳೆ ಬೀಳುವ ಕಾರಣ ಸೇತುವೆಗೆ ಅಪಾಯ ನಿಶ್ಚಿತ.

    ಪ್ರಮುಖ ಸಂಪರ್ಕ ಕೊಂಡಿ: ನಗರ ಚಿಕ್ಕಪೇಟೆಯಲ್ಲಿ ಐದು ದಶಕದ ಹಿಂದೆ ಚಿಕ್ಕಪೇಟೆ ಹಾಗೂ ಕೊಲ್ಲೂರು ಅವಳಿ ಸೇತುವೆಗಳು ನಿರ್ವಣಗೊಂಡವು. ದಶಕದ ಹಿಂದೆ ಅವಳಿ ಸೇತುವೆಯಲ್ಲಿ ಒಂದಾದ ಕೊಲ್ಲೂರು ಸೇತುವೆ ಕುಸಿದು ಕೊಲ್ಲೂರು-ಸಿಗಂದೂರು ಸಂಪರ್ಕ ಕಡಿತಗೊಂಡಿತ್ತು. ಇದೀಗ ಚಿಕ್ಕಪೇಟೆ ಸೇತುವೆ ಕುಸಿದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ದಕ್ಷಿಣ ಕನ್ನಡ, ಉಡುಪಿ, ಕೊಲ್ಲೂರು, ಸಿಗಂದೂರು ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಭೀತಿ ಎದುರಾಗಿದೆ.

    ಅಧಿಕಾರಿಗಳಿಂದ ಪರಿಶೀಲನೆ: ಶಾಸಕ ಆರಗ ಜ್ಞಾನೇಂದ್ರ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರವಾಗಿ ಹೊಸನಗರ ಲೋಕೋಪಯೋಗಿ ಇಲಾಖೆಯ ಎಇಇ ಶೇಷಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತುರ್ತು ಕಾಮಗಾರಿ ಸಂಬಂಧ ಮೇಲಧಿಕಾರಿಗೆ ತಿಳಿಸುವುದಾಗಿ ಭರವಸೆ ನೀಡಿದರು.

    ಚಿಕ್ಕಪೇಟೆ ಸೇತುವೆ ತುಂಚಿ ಹಳೆಯದಾಗಿದ್ದು, ಕುಸಿಯುತ್ತಿರುವ ಬಗ್ಗೆ ಈಗಾಗಲೇ ಮಾಹಿತಿ ಬಂದಿದೆ. ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಿರ್ಬಂಧ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.

    | ಆರಗ ಜ್ಞಾನೇಂದ್ರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts