More

    ಅಪಘಾತ ತಡೆಗೆ ಚಾಲನಾ ತರಬೇತಿ ಮುಖ್ಯ

    ಚಿಕ್ಕೋಡಿ: ರಸ್ತೆ ಅಪಘಾತ ತಡೆಯಲು ವಾಹನ ಚಾಲನಾ ತರಬೇತಿ ಬಹುಮುಖ್ಯ. ಕಾರಣ, ಚಾಲನಾ ತರಬೇತಿ ಪಡೆಯುವವರಿಗೆ ಪರಿಪೂರ್ಣ ತರಬೇತಿ ನೀಡಬೇಕು ಎಂದು ಆರ್‌ಟಿಒ ವಿಶಾಲ ಜಿ.ಪಿ. ಹೇಳಿದರು.

    ಇಲ್ಲಿನ ಆರ್‌ಟಿಒ ಕಚೇರಿಯಲ್ಲಿ ಚಿಕ್ಕೋಡಿ ತಾಲೂಕು ಮೋಟರ್ ಡ್ರೈವಿಂಗ್ ಶಾಲೆಯ ಮಾಲೀಕರ ಅಸೋಸಿಯೇಷನ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡ್ರೈವಿಂಗ್ ಶಾಲೆ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಿದರೆ ಅಪಘಾತ ಪ್ರಮಾಣ ಕಡಿಮೆಯಾಗುತ್ತದೆ. ಕಾರಣ, ಮೋಟರ್ ಡ್ರೈವಿಂಗ್ ಶಾಲೆಗಳು ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ರಸ್ತೆ ನಿಯಮಗಳ ಬಗ್ಗೆ ಪರಿಪೂರ್ಣ ಮಾಹಿತಿ ನೀಡಬೇಕು ಎಂದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಆರ್‌ಟಿಒ ಕಚೇರಿಯವರಿಗೆ ಚಾಲನಾ ತರಬೇತಿ ವಾಹನಗಳ ರ‌್ಯಾಲಿ ಮೂಲಕ ರಸ್ತೆ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

    ಅಪ್ಪಾಸಾಹೇಬ ಬ್ಯಾಳಿ, ಹಿರಿಯ ಮೋಟಾರ್ ನಿರೀಕ್ಷಕ ಮಹೇಶ ಹಣುಮಶೇಠ, ಆರ್‌ಟಿಒ ಕಚೇರಿ ಮೇಲ್ವಿಚಾರಕ ಉಮೇಶ ಗಂಗನಹಳ್ಳಿ, ಅಸೋಸಿಯೇಷನ್ ಅಧ್ಯಕ್ಷ ಎಂ.ಆರ್.ಮುನ್ನೋಳ್ಳಿಕರ ಮಾತನಾಡಿದರು. ಕಚೇರಿ ಸಿಬ್ಬಂದಿ ಗೋಪಾಲ ಕುಂಗಾರೆ, ಅಸೋಸೆಷನ್ ಉಪಾಧ್ಯಕ್ಷ ನಿಯಾಜ್ ಬಡೆಖಾನ್, ಕಾರ್ಯದರ್ಶಿ ವಿನಾಯಕ ಚೌಗಲೆ, ಖಜಾಂಚಿ ರಾಜು ಚಂದಗಡೆ, ಸದಸ್ಯರಾದ ಬಜರಂಗ ಮೋರೆ, ಸ್ವಪ್ನಿಲ್ ಅವಳೇಕರ, ಅಮಿತ ಬಾಳನಾಯಿಕ, ಜಾವೇದ ಘಾಲವಾಡೆ, ವಿನಾಯಕ ಮಾಳಿ, ಶಫಿ ಕಂಕಣವಾಡಿ, ಸೂರಜ ನಾರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts