More

    ಅಪಘಾತದಲ್ಲಿ ತಾಯಿ- ಮಗ ಸಾವು

    ಅಂಕೋಲಾ: ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ತಾಯಿ- ಮಗ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ರಾಮನಗುಳಿಯಲ್ಲಿ ಭಾನುವಾರ ನಸುಕಿನ ವೇಳೆ ಸಂಭವಿಸಿದೆ. ಅಚವೆ ಗ್ರಾಪಂ ವ್ಯಾಪ್ತಿಯ ಅಂಗಡಿಬೈಲ್​ನ ಹರಿಹರ ರವಿ ಸಿದ್ದಿ (25), ಬೇಬಿ ರವಿ ಸಿದ್ದಿ (47) ಮೃತಪಟ್ಟವರು. ಇವರು ಕೊಡ್ಲಗದ್ದೆಯಲ್ಲಿ ನಡೆದ ಯಕ್ಷಗಾನ ವೀಕ್ಷಿಸಿ, ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಸಿಪಿಐ ಕೃಷ್ಣಾನಂದ ನಾಯಕ, ಎಎಸ್​ಐ ಅಶೋಕ ತಳಗಪ್ಪನವರ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts