More

    ಅನ್ನ ಬೇಡ್ವಂತೆ, ಹಿಟ್ಟು ಕೊಡಬೇಕಂತೆ

    ಚಿಂಚೋಳಿ(ಕಲಬುರಗಿ) : ಅನ್ನ, ಸಾಂಬಾರು ಸೇರಿ ಇನ್ನಿತರ ತಿನಿಸುಗಳನ್ನು ಕೋಟ್ರೆ ಬೇಡ ಅಂತಾರೆ, ಕೇವಲ ಹಿಟ್ಟನ್ನು ಮಾತ್ರ ಪಡೆಯುತ್ತಾರೆ. ಇಂತಹ ವಿಚಿತ್ರ ಭಿಕ್ಷೆಯಿಂದ ತಾಲೂಕಿನ ಜನರು ಭಯದಲ್ಲಿದ್ದಾರೆ.
    ಅವಳಿ ಪಟ್ಟಣದಲ್ಲಿ ಭಿಕ್ಷಾಟನೆ ಹಾವಳಿ ಹೆಚ್ಚಾಗಿದ್ದು, ರಾಜಸ್ತಾನ, ಉತ್ತರ ಪ್ರದೇಶ ಮೂಲದ ಯುವಕರು, ವೃದ್ಧರು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಕೇವಲ ಹಿಟ್ಟನ್ನು ಭಿಕ್ಷೆ ಪಡೆಯುತ್ತಿದ್ದಾರೆ. ಇದೇ ಜನರನ್ನು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. 3 ದಿನಗಳಿಂದ ಚಂದಾಪುರದ ಭವಾನಿ ನಗರ, ವಾಲ್ಮೀಕಿ ನಗರ, ಗಣೇಶ ನಗರ, ಬಸವ ನಗರ, ರಾಮ ನಗರ ಸೇರಿ ವಿವಿಧೆಡೆ ಮನೆ- ಮನೆಗಳಿಗೆ ರಾಜಸ್ಥಾನ ಮೂಲದ ಯುವಕರು, ವೃದ್ಧರು ಭೇಟಿ ನೀಡಿ ಜೋಳ, ಗೋಧಿ ಹಿಟ್ಟನ್ನು ಮಾತ್ರ ಭಿಕ್ಷೆಯಾಗಿ ಪಡೆಯುತ್ತಿದ್ದಾರೆ.
    ಕೆಲವರು ಮನೆಯಲ್ಲಿ ತಯಾರಿಸಿದ ಅಡುಗೆ ಪದಾರ್ಥಗಳು ನೀಡುತ್ತಿದ್ದರೆ ತೆಗೆದುಕೊಳ್ಳುತ್ತಿಲ್ಲ. ಕೇವಲ ಹಿಟ್ಟು ಮಾತ್ರ ಕೊಡಿ ಎಂದು ಬೇಡುತ್ತಿದ್ದಾರೆ. ಅಲ್ಲದೆ ಹೆಸರು, ವಿಳಾಸ ಕೇಳಿದರೂ ಸಮರ್ಪಕವಾಗಿ ನೀಡುತ್ತಿಲ್ಲ. ಬಹುತೇಕ ಕಡೆ ಮಹಿಳೆಯರೇ ಮನೆಯಲ್ಲಿದ್ದು, ಏನಾದರೂ ಹೆಚ್ಚು ಕಮ್ಮಿ ಆದರೆ ಹೆಂಗೆ ಎಂಬ ಭಯ ಉಂಟಾಗಿದೆ.
    ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಸೂಕ್ತ ತನಿಖೆ ನಡೆಸಬೇಕಿದೆ. ಅಲ್ಲದೆ ವಿಚಿತ್ರ ಭಿಕ್ಷೆ ಬೇಡುತ್ತಿರುವ ಜನರ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಜನರು ಆಗ್ರಹಿಸಿದ್ದಾರೆ. ಕಲಬುರಗಿ, ಚಿಂಚೋಳಿ, ಭಿಕ್ಷೆ, kalaburagi, Chincholi,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts