More

    ಅನುದಾನ ದುರ್ಬಳಕೆ ತನಿಖೆ ನಡೆಸಿ

    ಮುದ್ದೇಬಿಹಾಳ: ತಾಲೂಕಿನ ಕೆಲವು ಸಂಘಗಳು ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಪಂಗಡದವರಿಗಾಗಿ ಮೀಸಲಿರುವ ಸಮುದಾಯ ಭವನ ಕಟ್ಟಡಕ್ಕೆ ಅನುದಾನ ಪಡೆದು ನಿಗದಿತ ಉದ್ದೇಶಕ್ಕೆ ಬಳಸದೆ ದುರ್ಬಳಕೆ ಮಾಡಿಕೊಂಡಿರುವ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮಾಜದ ಯುವ ಮುಖಂಡರು ಶುಕ್ರವಾರ ಇಲ್ಲಿನ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು.

    ಹುಲ್ಲೂರಿನ ಚನ್ನಬಸವ ಎಜುಕೇಷನ್ ಮತ್ತು ರೂರಲ್, ಕಲ್ಚರಲ್ ಸೊಸೈಟಿ, ಕುಂಟೋಜಿಯ ಮಹರ್ಷಿ ವಾಲ್ಮೀಕಿ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಘ, ಆಲಕೊಪ್ಪರದ ಶ್ರೀರಾಮ ವಾಲ್ಮೀಕಿ ಗ್ರಾಮೀಣ ಅಭಿವೃದ್ಧಿ ಸಂಘ ಸೇರಿ ಒಟ್ಟು 5ಕ್ಕೂ ಹೆಚ್ಚು ಸಂಘಗಳಿಗೆ ಸರ್ಕಾರದಿಂದ ಅನುದಾನ ಮಂಜೂರಾಗಿದೆ.

    ಆದರೆ ಅನುದಾನವನ್ನು ಸಮುದಾಯ ಭವನ ಕಟ್ಟಡ ಕಟ್ಟಲು ಬಳಸದೆ ಅನ್ಯ ಕಟ್ಟಡ ಕಟ್ಟಲು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ದಲಿತಪರ ಸಂಘಟನೆಗಳೊಂದಿಗೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಶಿವರಾಯಪ್ಪ ಕನ್ನೊಳ್ಳಿ, ಮಹಾಂತೇಶ ತಮದಡ್ಡಿ, ಪ್ರಕಾಶ ಹಾದಿಮನಿ, ಸಿದ್ದು ನಾಯ್ಕೋಡಿ, ಹಣಮಂತ ಬೆಳ್ಳಕ್ಕಿ ಇದ್ದರು. ಮನವಿ ಸ್ವೀಕರಿಸಿದ ತಹಸೀಲ್ದಾರರು, ಮನವಿ ಪತ್ರದೊಂದಿಗೆ ಅಗತ್ಯ ದಾಖಲಾತಿಗಳು ಇಲ್ಲದಿರುವುದನ್ನು ಕಂಡು ಇಂಥ ಮನವಿ ಪತ್ರಗಳಿಗೆ ಮನ್ನಣೆ ಇರುವುದಿಲ್ಲ. ದಾಖಲೆ ಸಮೇತ ನೀಡಿದರೆ ಈ ಕುರಿತಾದ ತನಿಖೆಗೆ ಶಿಾರಸು ಮಾಡಬಹುದು. ಅನುದಾನ ಯಾವ ಯೋಜನೆಯಡಿ ಬಂದಿದೆ ಎನ್ನುವ ಸ್ಪಷ್ಟ ಮಾಹಿತಿ ಮತ್ತು ದುರ್ಬಳಕೆ ಆಗಿದೆ ಎನ್ನುವ ಕುರಿತಾದ ದಾಖಲೆ ಇದ್ದರೆ ಕೊಡುವಂತೆ ಕೇಳಿದರು.

    ಇದರಿಂದ ವಿಚಲಿತರಾದಂತೆ ಕಂಡ ಕನ್ನೊಳ್ಳಿ ಅವರು ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಈ ಕುರಿತು ಸಲ್ಲಿಸಿದ ಅರ್ಜಿಯ ಪರಿಶೀಲನೆ ನಡೆಸಿದ್ದು ಅದನ್ನು ಪುನರ್ ಪರಿಶೀಲಿಸಿ ತನಿಖೆ ತ್ವರಿತಗೊಳಿಸುವಂತೆ ಸಂಬಂಧಿಸಿದವರಿಗೆ ತಿಳಿಸಬೇಕು ಎಂದು ಹೇಳಿ ತಮ್ಮ ಬಳಿ ಇದ್ದ ಅನುದಾನ ಮಂಜೂರಾತಿಯ ಆದೇಶ ಪತ್ರದ ಝರಾಕ್ಸ್ ಪ್ರತಿಗಳನ್ನು ಮನವಿ ಪತ್ರದೊಂದಿಗೆ ಲಗತ್ತಿಸಿ ಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts