More

    ಅನುದಾನ ತರುವಲ್ಲಿ ವಿಫಲ

    ಬಾಗಲಕೋಟೆ: ಕೇಂದ್ರ ಸರ್ಕಾರದಿಂದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದ್ದರು ಬಾಗಲಕೋಟೆ ಜಿಲ್ಲೆಗೆ ಮಾತ್ರ ಸಂಸದರು ಅನುದಾನ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.

    ನಾಲ್ಕು ಅವಧಿ ವರೆಗೆ ಆಯ್ಕೆಯಾಗಿರುವ ಸಂಸದ ಪಿ.ಸಿ.ಗದ್ದಿಗೌಡರ ಜನರ ಸಮಸ್ಯೆ ಆಲಿಸಿ ಪರಿಹರಿಸುವಲ್ಲಿ ಆಸಕ್ತಿ ತೋರುವದಿಲ್ಲ. ಬಾಗಲಕೋಟೆ ಕುಡಚಿ ರೈಲು ಮಾರ್ಗ ಹಲವು ವರ್ಷಗಳಿಂದ ನಡೆಯುತ್ತಿದ್ದರು ಅಂತಿಮಘಟ್ಟವನ್ನು ತಲುಪಿಲ್ಲ. ಈ ಬಗ್ಗೆ ಗದ್ದಿಗೌಡರ ಗಮನ ಹರಿಸಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಟೀಕಾ ಪ್ರಹಾರ ನಡೆಸಿದರು.
    ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾಗಿ 25 ವರ್ಷ ಪೂರೈಸಿದೆ. ಆದರೇ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ. ಕೃಷಿ ಕ್ಷೇತ್ರದಲ್ಲಿ ರೈತರು ನೆಮ್ಮದಿಯಾಗಿ ಬದುಕುತ್ತಿಲ್ಲ. ಉದ್ಯಮಗಳಿಂದ ಸ್ಥಳೀಯರಿಗೆ ಉದ್ಯೋಗ ದೊರಕಿಲ್ಲ. ಸಂಪನ್ಮೂಲಗಳು ಇದ್ದರು ಹೊಸ ಉದ್ಯಮಗಳ ಸ್ಥಾಪನೆಯಾಗಿಲ್ಲ. ಕೈಗಾರಿಕೆ, ನೇಕಾರಿಕೆ, ರೈತರನ್ನು ಪ್ರೋತ್ಸಾಹಿಸುವಂತಹ ಕೆಲಸ ಆಗುತ್ತಿಲ್ಲ. ನಿರುದ್ಯೋಗ ನಿವಾರಿಸುವಲ್ಲಿ ಯಶಸ್ವಿಯಾಗಿಲ್ಲ. ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ಮಾರುಕಟ್ಟೆ ಸಿಕ್ಕಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಿನ್ನಡೆಗೆ ಸಂಸದರ ನಿರಾಸಕ್ತಿಯೇ ಪ್ರಮುಖ ಕಾರಣ ಎಂದು ದೂರಿದರು.

    ರೈಲು ಮಾರ್ಗ ಅಭಿವೃದ್ಧಿ ಹೊಂದಿದಾಗ ಮಾತ್ರ ಕೈಗಾರಿಕೆಗಳು ಬೆಳವಣಿಗೆ ಹೊಂದುತ್ತವೆ. ಬಾಗಲಕೋಟೆ ಮಾರ್ಗವಾಗಿ ರೈಲು ಹಳಿ ಇದ್ದರು ಮಹಾ ನಗರಗಳಿಗೆ ರೈಲು ಸಂಪರ್ಕ ಸರಿಯಾಗಿ ಇಲ್ಲ. ಜಿಲ್ಲಾ ಕೇಂದ್ರಸ್ಥಾನ ಬಾಗಲಕೋಟೆ ನಗರವನ್ನು ಸ್ಮಾರ್ಟ ಸೀಟಿಯಾಗಿ ಅಭಿವೃದ್ಧಿ ಪಡಿಸುವ ಎಲ್ಲ ಅವಕಾಶಗಳು ಇದ್ದರು ಸಂಸದ ಗದ್ದಿಗೌಡರ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಆರೋಪಿಸಿದರು.

    ಇನ್ನು ಅಹವಾಲು ಸಲ್ಲಿಸಲು ಬಂದ ಸಂದರ್ಭದಲ್ಲಿ ಶಾಸಕ ಅರವಿಂದ ಲಿಂಬಾವಳಿಯವರು ಮಹಿಳೆಯರನ್ನು ಅವಮಾನ ಮಾಡಿರುವುದು ಖಂಡನೀಯ. ತಕ್ಷಣವೇ ಅವರ ರಾಜೀನಾಮೆಯನ್ನು ಬಿಜೆಪಿ ರಾಜ್ಯಾಧ್ಯಕ್ಷರು ಪಡೆದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
    ನನ್ನ ಕುಟುಂಬದ ವೈಯಕ್ತಿಕ ವಿಷಯ ಕುರಿತು ಇತ್ತೀಚಿಗೆ ಮಾಧ್ಯಮದಲ್ಲಿ ಬಂದಿದೆ. ಈ ವಿಷಯ ವಿಚಾರಣೆ ನಡೆಯುತ್ತಿದೆ. ಶೀಘ್ರದಲ್ಲೇ ಅದರ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸುತ್ತೇನೆ ಎಂದರು.

    ಕಾಂಗ್ರೆಸ್ ಮುಖಂಡರಾದ ಎ.ಎ.ದಂಡಿಯಾ, ಚಂದ್ರಶೇಖರ ರಾಠೋಡ, ರೇಣುಕಾ ನ್ಯಾಮಗೌಡರ, ರಜಾಕ್ ಹಳ್ಳೂರ, ಕಾಶೀನಾಥ ಹುಡೇದ, ಶ್ರೀನಿವಾಸ ಬಳ್ಳಾರಿ ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts