More

    ಅಧ್ಯಯನದಿಂದ ಧರ್ಮದ ಸಾಕ್ಷಾತ್ಕಾರ

    ಚಿತ್ರದುರ್ಗ: ಬಸವಾದಿ ಪ್ರಮಥರು ಜೀವನೋದ್ಧಾರಕ್ಕಾಗಿ ಕಾಯಕ, ಆತ್ಮೋದ್ಧಾರಕ್ಕಾಗಿ ಶಿವಯೋಗ, ಜೀವನ್ಮುಕ್ತಿಗಾಗಿ ದಾಸೋಹವನ್ನು ಮಾಡಿದ್ದಾರೆ ಎಂದು ಶಿವಮೊಗ್ಗ ಪ್ರಭುದೇವ ಜ್ಞಾನಕೇಂದ್ರದ ಶ್ರೀ ಬಸವನವಲಿಂಗ ಶರಣರು ಹೇಳಿದರು.
    ಮುರುಘರಾಜೇಂದ್ರ ಬೃಹನ್ಮಠದಲ್ಲಿ ಬಸವೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿ, ಬಸವ ಧರ್ಮ, ಅಂತರಂಗ ಬಹಿರಂಗ ಒಂದೇ ಆಗಿರುವ ಧರ್ಮ. ಇದು ಅನುಭವ ಧರ್ಮವಾಗಿದ್ದು, ವಚನ ಸಾಹಿತ್ಯವನ್ನು ಓದಿದವರಿಗೆ ಸಾಕ್ಷಾತ್ಕಾರವಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ಬಸವಧರ್ಮ ಗ್ರಂಥ ಇರಬೇಕು ಎಂದರು.
    ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಬಸವ ತತ್ತ್ವಗಳನ್ನು ಮುರುಘಾಮಠ ಅನೂಚಾನವಾಗಿ ಪಾಲಿಸಿಕೊಂಡು ಬಂದಿದೆ. ಅದನು ಮುಂದುವರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಸವ ತತ್ವಗಳು ಮತ್ತು ಅವರ ಭಾವಚಿತ್ರಗಳು ದಲಿತರ ಮನೆಗೂ ತಲುಪಬೇಕು ಎಂದು ಹೇಳಿದರು.
    ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ, ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿದರು. ಶ್ರೀ ಬಸವನಾಗಿದೇವ ಸ್ವಾಮೀಜಿ, ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಎಸ್.ಎನ್.ಚಂದ್ರಶೇಖರ್, ಸುರೇಶ್‌ಬಾಬು, ಕೆಇಬಿ ಷಣ್ಮುಖಪ್ಪ ಇದ್ದರು.
    ಎಸ್‌ಜೆಎಂ ಆಂಗ್ಲಮಾಧ್ಯಮ ಶಾಲೆ ಮತ್ತು ಎಸ್‌ಜೆಎಂ ಪದವಿ ಕಾಲೇಜು ವಿದ್ಯಾರ್ಥಿಗಳು ವಚನ ನೃತ್ಯ ಮಾಡಿದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
    ಬಸವ ಪ್ರಜ್ಞೆ: ಬಸವ ಪ್ರಜ್ಞೆಯ ಅಗತ್ಯ ಕೇವಲ ಬಾಯಿ ಮಾತಿನಲ್ಲಿರಬಾರದು. ಬಸವ ಅನ್ನುವುದೇ ಅದ್ಭುತ ಚೈತನ್ಯ ಎಂದು ಬಸವಚಿಂತಕ ಅಶೋಕ ಬರಗುಂಡಿ ಹೇಳಿದರು.
    ಮುರುಘರಾಜೇಂದ್ರ ಮಠದಲ್ಲಿ ಬಸವೇಶ್ವರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಚಿಂತನಾ ಗೋಷ್ಠಿಯಲ್ಲಿ ‘ಶರಣ ಸ್ಥಲದ ನೆಲೆಯಲ್ಲಿ ಬಸವಣ್ಣ’ ವಿಷಯ ಕುರಿತು ಮಾತನಾಡಿದರು.
    ಸಮ್ಮುಖ ವಹಿಸಿದ್ದ ತಿಂಥಿಣಿ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ, ಮಠದ ಅಡಳಿತಾಧಿಕಾರಿ ಶಿವಯೋಗಿ ಸಿ.ಕಳಸದ, ಪತ್ರಕರ್ತ ಕೃಷ್ಣಪ್ಪ ಮಾತನಾಡಿದರು.
    ಹಾವೇರಿ ವಿವಿ ಕುಲಪತಿ ಡಾ.ಸುರೇಶ್ ಎಚ್.ಜಂಗಮಶೆಟ್ಟಿ, ಶ್ರೀ ಮೋಕ್ಷಪತಿ ಸ್ವಾಮೀಜಿ, ಶ್ರೀ ಬಸವ ರಮಾನಂದ ಸ್ವಾಮೀಜಿ, ಶರಣೆ ನಂದಾತಾಯಿ, ಶರಣೆ ಜಯದೇವಿ ತಾಯಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಶ್ರೀ ಬಸವಭೂಷಣ ಸ್ವಾಮೀಜಿ, ಶ್ರೀ ಇಮ್ಮಡಿ ಷಡಕ್ಷರ ಸ್ವಾಮೀಜಿ, ಶ್ರೀ ಮುರುಘೇಶ ದೇವರು, ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ನಿಶ್ಚಲ ನಿರಂಜನ ಸ್ವಾಮೀಜಿ, ಶ್ರೀ ಬಸವಪ್ರಭು ಕೇತೇಶ್ವರ ಸ್ವಾಮೀಜಿ, ಶ್ರೀ ಪೂರ್ಣಾನಂದ ಸ್ವಾಮೀಜಿ, ಶ್ರೀ ಬಸವಲಿಂಗ ಶರಣರು, ಶ್ರೀ ಗೋವಿಂದಪ್ಪ ಸ್ವಾಮೀಜಿ, ಶ್ರೀ ಮುನಿರಾಜ ಸ್ವಾಮೀಜಿ, ಶ್ರೀ ನಂದಾದೇವರು, ಎಸ್.ಎನ್.ಚಂದ್ರಶೇಖರ್, ಚಿತ್ರದುರ್ಗ ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts