More

    ಅಧಿಕಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಿ

    ಅಥಣಿ ಗ್ರಾಮೀಣ: ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಸತತ ಮಳೆಯಾಗುತ್ತಿದೆ. ಆದರೆ, ಈವರೆಗೆ ಮಹಾರಾಷ್ಟ್ರದ ಡ್ಯಾಂಗಳು ಭರ್ತಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ತಾಲೂಕಿನ ಹಲ್ಯಾಳ, ದರೂರ ಗ್ರಾಮದ ಮಧ್ಯದ ಕೃಷ್ಣಾ ನದಿ ಸೇತುವೆಗೆ, ರಡ್ಡೇರಹಟ್ಟಿ, ಜಿರೋ ಪಾಯಿಂಟ್ ಹಾಗೂ ಹಿಪ್ಪರಗಿ ಅಣೆಕಟ್ಟೆಗೆ ಬುಧವಾರ ಭೇಟಿ ನೀಡಿ ನೀರಿನ ಹರಿವಿನ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂಜಾಗ್ರತಾ ಕ್ರಮವಾಗಿ ಜನರ ರಕ್ಷಣೆಗಾಗಿ ಕಳೆದ ವರ್ಷ ನಿರ್ಮಿಸಿದ ಕಾಳಜಿ ಕೇಂದ್ರಗಳನ್ನು ಪರಿಶೀಲಿಸಲಾಗಿದೆ. ನದಿ ಪಾತ್ರದ ಜನರು ಅಧಿಕಾರಿಗಳಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.

    ಎಸ್ಪಿ ಡಾ. ಸಂಜೀವ ಪಾಟೀಲ, ಸಿಇಒ ದರ್ಶನ ಎಚ್.ವಿ., ಚಿಕ್ಕೋಡಿ ಎಸಿ ಸಂತೋಷ ಕಾಮಗೊಂಡ, ಡಿವೈಎಸ್‌ಪಿ ಎಸ್.ವಿ.ಗಿರೀಶ, ತಹಸೀಲ್ದಾರ್ ಸುರೇಶ ಮುಂಜೆ, ಇಒ ಶೇಖರ ಕರಿಬಸಪ್ಪಗೋಳ, ಜಿಪಂ ಎಇಇ ಈರಣ್ಣ ವಾಲಿ, ಮಹಾದೇವ ಪಾಟೀಲ, ಪಿಎಸ್‌ಐ ಕುಮಾರ ಹಾಡಕಾರ, ಕಂದಾಯ ನಿರೀಕ್ಷಕ ಶಿವಾನಂದ ಮೆಣಸಂಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts