More

    ಅದ್ದೂರಿ ಹಬ್ಬ ಆಚರಣೆಗೆ ನಿರ್ಧಾರ

    ಸುರಪುರ : ಈ ಬಾರಿಯ ೩೭ನೇ ನಾಡಹಬ್ಬ ಉತ್ಸವ ಅದ್ದೂರಿ ಆಚರಣೆಗೆ ನಿರ್ಧರಿಸಲಾಗಿದ್ದು, ಸಗರ ನಾಡಿನ ಪ್ರತಿಯೊಬ್ಬರೂ ಈ ಉತ್ಸವದ ಯಶಸ್ಸಿಗೆ ಕೈಜೋಡಿಸಬೇಕು ಎಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ ಮನವಿ ಮಾಡಿದರು.

    ಇಲ್ಲಿನ ಗರುಡಾದ್ರಿ ಕಲಾ ಮಂದಿರದಲ್ಲಿ ಬುಧವಾರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾನುವಾರದಿಂದ ೨೩ರವರೆಗೆ ನಾಡಹಬ್ಬ ಉತ್ಸವ ಜರುಗಲಿದೆ. ೧೫ರಂದು ಅಂದು ಬೆಳಗ್ಗೆ ೧೧ಕ್ಕೆ ನಾಡದೇವಿ ಭಾವಚಿತ್ರ ಹಾಗೂ ವಿವಿಧ ಶಾಲೆ ಮತ್ತು ಸಂಘ-ಸAಸ್ಥೆಗಳೊAದಿಗೆ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಗರುಡಾದ್ರಿ ಕಲಾ ಮಂದಿರದವರೆಗೆ ಮೆರವಣಿಗೆ ನಡೆಯಲಿದೆ ಎಂದರು.

    ಕಲಾ ಮಂದಿರದಲ್ಲಿ ನಾಡದೇವಿ ಸ್ಥಾಪನೆ, ಪೂಜೆ ಹಾಗೂ ಅನ್ನಪ್ರಸಾದ ವಿತರಣೆ ನಡೆಯಲಿದೆ. ಸಂಜೆ ನಡೆಯುವ ಸಾಂಸ್ಕೃತಿಕ ಕರ‍್ಯಕ್ರಮವನ್ನು ರಾಜಾ ಪಾಮ ನಾಯಕ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸುವರು. ರಾಜಾ ಮುಕುಂದ ನಾಯಕ, ರಾಜಾ ಹರ್ಷವರ್ಧನ ನಾಯಕ, ಕಿಶೋರಚಂದ ಜೈನ, ಪ್ರಕಾಶ ಸಜ್ಜನ್, ಸುರೇಶ ಸಜ್ಜನ್ ಸೇರಿ ಅನೇಕರು ಭಾಗವಹಿಸಲಿದ್ದಾರೆ. ಅ.೨೩ರಂದು ಸಮಾರೋಪ ಸಮಾರಂಭ ನಡೆಯಲಿದೆ.

    ಸಮಿತಿ ಗೌರವಾಧ್ಯಕ್ಷ ರಾಜಾ ಪಾಮ ನಾಯಕ, ಬಸವರಾಜ ನಿಷ್ಠಿ ದೇಶಮುಖ, ಜಯಲಲಿತಾ ಪಾಟೀಲ್, ಗೋವರ್ಧನ ಝಂವ್ಹಾರ ಇದ್ದರು. ಬಸವರಾಜ ಜಮದ್ರಖಾನಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ ಸ್ವಾಗತಿಸಿದರು. ರಾಜಶೇಖರ ದೇಸಾಯಿ ವಂದಿಸಿದರು. ಶಿವಕುಮಾರ ಮಸ್ಕಿ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts