More

    ಅದ್ದೂರಿ ಆಚರಣೆಗೆ ಕೋಟೆನಾಡಲ್ಲಿ ಸಿದ್ಧತೆ..!

    ಬಾಗಲಕೋಟೆ: ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಗಣೇಶ ಉತ್ಸವಕ್ಕೆ ಕೋವಿಡ್ ಸೋಂಕಿನ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ಕಾರ್ಮೋಡ ಆವರಿಸಿತ್ತು. ಸರ್ಕಾರದ ಹತ್ತಾರು ಕಟ್ಟಳೆಗಳ ನಡುವೆ ಹಬ್ಬ ಆಚರಣೆ ಮಾಡುವುದು ಕಷ್ಟಕರವಾಗಿತ್ತು. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಅದ್ದೂರಿ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ ಆರಂಭಗೊಂಡಿವೆ…!
    ಜಿಲ್ಲಾ ಕೇಂದ್ರ ಬಾಗಲಕೋಟೆ, ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ, ಲೋಕಾಪುರ, ಬೀಳಗಿ, ಬಾದಾಮಿ, ಕಲಾದಗಿ, ಹುನಗುಂದ, ಇಳಕಲ್ಲ, ಕಮತಗಿ, ಗುಳೇದಗುಡ್ಡ, ಅಮೀನಗಡ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಬ್ಬಕ್ಕೆ ಭರ್ಜರಿ ತಯಾರಿ ನಡೆದಿದೆ. ಜಿಲ್ಲಾಡಳಿತ, ಆಯಾ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಶಾಂತತಾ ಸಭೆ ನಡೆಸಿ ಶಾಂತಿಯುತವಾಗಿ ಹಬ್ಬ ಆಚರಿಸಲು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಆಚರಣಾ ಸಮಿತಿಗಳು ಕಾರ್ಯ ಚುರುಕುಗೊಂಡಿವೆ.
    ಜಿಲ್ಲೆಯಲ್ಲಿ ಮಾರುಕಟ್ಟೆಗೆ ಹೊಸ ಬಗೆ ಗಣೇಶ ಮೂರ್ತಿಗಳು ಲಗ್ಗೆ ಇಟ್ಟಿವೆ. ಚಿಕ್ಕದಿಂದ ದೊಡ್ಡ ಮೂರ್ತಿಗಳು ಆಗಮನವಾಗಿವೆ. ಸಾರ್ವಜನಿಕರು, ಆಚರಣಾ ಸಮಿತಿಗಳು ದೊಡ್ಡ ಮೂರ್ತಿಗಳ, ಸಾರ್ವನಿಕರು ಮನೆಗಳಲ್ಲಿ ಸ್ಥಾಪಿಸಲು ಸಣ್ಣ ಮೂರ್ತಿಗಳನ್ನು ಬುಕ್ಕಿಂಗ್ ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಅಲಂಕಾರಿಕ ವಸ್ತುಗಳು ರಾರಾಜಿಸುತ್ತೀವೆ. ಶಾಮೀಯಾನ, ವಿದ್ಯುತ್ ದೀಪಾಲಂಕರ ಸೌಂಡ್ ಸಿಸ್ಟಮ್ ಕೆಲಸಗಾರರು ಹಾಗೂ ಬ್ಯಾಂಜ್ಯೂ, ಬ್ಯಾಂಡ್ ಕಲಾವಿದರಲ್ಲಿ ಉದ್ಯೋಗ ದೊರೆಯುವ ಭರವಸೆ ಮೂಡಿದೆ. ಉಳಿದಂತೆ ಹಬ್ಬಕ್ಕಾಗಿ ವಿಶೇಷ ತಿಂಡಿ ತಿನಿಸು ತಯಾರಿಸಲು ಅಂಗಡಿಕಾರರು, ಮಾರುಕಟ್ಟೆ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಚೇತರಿಕೆಗೆ ಕಾಯುತ್ತಿದ್ದಾರೆ.
    ಜಿಲ್ಲೆಯ ಮತ್ತೆ ಪಿಒಪಿ ಸದ್ದು:
    2017 ರಲ್ಲಿ ಪರಿಸರ ಮಾರಕ ಪಿಒಪಿ ಗಣೇಶ ಮೂರ್ತಿಗಳನ್ನು ಸರ್ಕಾರ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾಂಪ್ರದಾಯಕ ಮೂರ್ತಿ ಬಳಸಲಾಗುತ್ತಿದೆ. ಅದರಂತೆ ಕಳೆದ ನಾಲ್ಕು ವರ್ಷದಿಂದ ಕಠಿಣವಾಗಿ ಕ್ರಮ ತೆಗೆದುಕೊಂಡ ಪರಿಣಾಮ ಪಿಒಪಿ ಹಾವಳಿ ಬಹುತೇಕ ಕ್ಷಣಿಸಿತ್ತು. ಈ ಸಾರಿ ಮುಧೋಳ, ಗುಳೇದಗುಡ್ಡ, ಲೋಕಾಪುರ, ಜಮಖಂಡಿ ಸೇರಿದಂತೆ ಎಲ್ಲೆಡೆ ಪಿಒಪಿ ಮೂರ್ತಿಗಳು ಮಾರಾಟವಾಗುತ್ತೀವೆ. ಆದರೇ ಬಾಗಲಕೋಟೆಯಲ್ಲಿ ಮಾತ್ರ ಅವಕಾಶ ನೀಡುತ್ತಿಲ್ಲ. ಇದರಿಂದ ಮೂರ್ತಿ ತಯಾರಕರ ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲರಿಗೂ ಒಂದೇ ನಿಯಮ ಪಾಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
    ಇನ್ನು ಬಾಲಕೋಟೆ ಜಿಲ್ಲೆಯಲ್ಲಿ ಬಹುತೇಕ ಎಲ್ಲ ಗಣೇಶ ಮೂರ್ತಿ ತಯಾರಕರು ಪಿಒಪಿ ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ. ಆದರೇ ಬೆಳಗಾವಿ ಜಿಲ್ಲೆಯ ಗೋಕಾಕ ಹಾಗೂ ಅಧಿಕ ಪ್ರಮಾಣದಲ್ಲಿ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ.
    ಜಿಲ್ಲೆಯಲ್ಲಿ 1833 ಸಾರ್ವಜನಿಕ ಮೂರ್ತಿ ಸ್ಥಾಪನೆ :
    ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ ಬಾಗಲಕೋಟೆ-ನವನಗರದಲ್ಲಿ 111, ಬಾಗಲಕೋಟೆ ಗ್ರಾಮೀಣ ಭಾಗದಲ್ಲಿ 213, ಇಳಕಲ್ಲ, ಅಮೀನಗಡ ಸೇರಿ ಹುನಗುಂದ ತಾಲೂಕು ವ್ಯಾಪ್ತಿಯಲ್ಲಿ 237,ಗುಳೇದಗುಡ್ಡ, ಕೆರೂರ ಸೇರಿ ಬಾದಾಮಿ ತಾಲೂಕು ವ್ಯಾಪ್ತಿಯಲ್ಲಿ 267, ಜಮಖಂಡಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ 268, ತೇರದಾಳ ವ್ಯಾಪ್ತಿಯಲ್ಲಿ 272, ಲೋಕಾಪುರ, ಮಹಾಲಿಂಗಪೂರ ಹಾಗೂ ಮುಧೋಳ ಭಾಗದ 323 ಸ್ಥಳಗಳು ಸೇರಿದಂತೆ ಬಾಗಲಕೋಟೆ ಜಿಲ್ಲೆಯಲ್ಲಿ ಅಂದಾಜು 1833 ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆ ಮಾಡಿ ವಿಸರ್ಜಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts