More

    ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ : ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

    ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ : ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮಅದಮಾರು ಪರ್ಯಾಯ ವೈಭವದ ಶೋಭಯಾತ್ರೆ : ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮಅದಮಾರು ಪರ್ಯಾಯ ವೈಭವದ ಶೋಭಯಾತ್ರೆ : ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು ವೈಭವದ ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ನಗರದಲ್ಲಿ ನೆರೆದಿದ್ದರು.ನಗರದ ಜೋಡುಕಟ್ಟೆಯಿಂದ, ಕೋರ್ಟ್‌ರಸ್ತೆ, ಡಯಾನ ಸರ್ಕಲ್, ತೆಂಕಪೇಟೆ ಮೂಲಕ ಸಾಗಿದ ಪರ್ಯಾಯ ಮೆರವಣಿಗೆ ಕೃಷ್ಣಮಠ ರಥಬೀದಿಗೆ ಸಾಗಿತು. ನಗರದಲ್ಲಿ ಲಕ್ಷಾಂತರ ಮಂದಿ ಜನರು ಅತ್ತಿಂದಿತ್ತ ಓಡಾಡುತ್ತ, ರಾತ್ರಿಯಿಡೀ ಜಾಗರಣೆ ಮಾಡುವ ಮೂಲಕ ಅದಮಾರು ಪರ್ಯಾಯ ವೈಭವ ಸಂಭ್ರಮಿಸಿದರು. ರಾತ್ರಿ 10 ಗಂಟೆ ವೇಳೆಗೆ ನಗರದ ವಿವಿದೆಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡು ಮಧ್ಯರಾತ್ರಿ 12, 1 ಗಂಟೆ ಸುಮಾರಿಗೆ ಮುಕ್ತಾಯಗೊಂಡಿತು. ನಗರವೆಲ್ಲಾ ಅಲಂಕಾರಗೊಂಡು ಕಣ್ಮನ ಸೆಳೆಯುತಿತ್ತು, ನಗರದಲ್ಲಿ ಸ್ವಾಗತ ಕಮಾನು, ಗೂಡುದೀಪ, ಕೇಸರಿ ಭಗವಧ್ವಜ, ಪ್ಲಾಸ್ಟಿಕ್ ರಹಿತ ಬ್ಯಾನರ್, ಫ್ಲೆಕ್ಸ್ ರಾರಾಜಿಸುತಿದ್ದವು. ಬಣ್ಣ, ಬಣ್ಣದ ವಿದ್ಯುತ್ ದೀಪಗಳು ಪರ್ಯಾಯ ಮೆರವಣಿಗೆಗೆ ಮೆರುಗು ನೀಡಿದವು. ಭದ್ರತೆಗೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts