More

    ಅತ್ಯಾಚಾರಿಗಳ ಬಿಡುಗಡೆ ಸಂವಿಧಾನಕ್ಕೆ ಬಗೆದ ಅಪಮಾನ


    ಯಾದಗಿರಿ: ಗುಜರಾತ್ ಸರ್ಕಾರ ಸಾಂವಿಧಾನಿಕ ನಿಯಮವನ್ನು ಉಲ್ಲಂಘಿಸಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರವೆಸಗಿದ ಮತ್ತು ಏಳು ಜನರ ಹತ್ಯೆ ಮಾಡಿದ ಅಪರಾಗಳನ್ನು ಸ್ವಾತಂತ್ರ್ಯ ದಿನದಂದು ಬಿಡಿಗಡೆ ಮಾಡಿದ ಕ್ರಮ ಖಂಡಿಸಿ ನಗರದಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

    2002ರ ಗುಜರಾತ್ ದಂಗೆಗಳ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಿಲ್ಕಿಸ್ ಬಾನೊ, ಬದುಕುಳಿದರೂ ತನ್ನ ಕುಟುಂಬದ ಏಳು ಸದಸ್ಯರನ್ನು ಕಳೆದುಕೊಂಡಿದ್ದರು. 20 ವರ್ಷದ ಹಿಂದೆ ನಡೆದ ಈ ಪಾಶವೀ ಘಟನೆಯಲ್ಲಿ ಆಕೆಯ ಮೂರು ವರ್ಷದ ಮಗುವನ್ನೂ, ಕುಟುಂಬ ಸದಸ್ಯರನ್ನೂ ಹತ್ಯೆ ಮಾಡಲಾಗಿತ್ತು. ತನ್ನ ಕಣ್ಣೆದುರಿನಲ್ಲೇ ಕರುಳ ಕುಡಿಯ ಹತ್ಯೆಯಾಗುವುದನ್ನು ವೀಕ್ಷಿಸಿದ ಬಾನೊ ಪುರುಷಾಪತ್ಯದ ವಿಕೃತ ದೌರ್ಜನ್ಯಕ್ಕೆ ಬಲಿಯಾಗಬೇಕಾಯಿತು ಎಂದು ಪ್ರತಿಭಟನಾಕಾರರು ತಿಳಿಸಿದರು.

    ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ತಾವು ಮಾಡಿದ, ಮಾಡದೆ ಇರುವ ತಪ್ಪಿಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಕ್ಷಾಂತರ ಕೈದಿಗಳ ಪೈಕಿ ಕೆಲವರನ್ನು ಸನ್ನಡತೆಯ ಆಧಾರದ ಮೇಲೆ, ಶಿಕ್ಷೆಯ ಅವ ಕಡಿತಗೊಳಿಸಿ, ಬಿಡುಗಡೆ ಮಾಡುವ ಒಂದು ಪರಂಪರೆಯನ್ನು ಭಾರತ ಅನುಸರಿಸುತ್ತಿದ್ದು, 1952ರಲ್ಲಿ ರೂಪಿಸಿದ ಈ ಕಾಯ್ದೆಯನ್ನು 2014ರಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಕಾಯ್ದೆ ನಿಯಮಗಳಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವ ಶಿಕ್ಷೆಗೊಳಗಾಗಿರುವ ಕೈದಿಗಳಿಗೆ ಸನ್ನಡತೆಯ ಶಿಕ್ಷೆ ಕಡಿತ-ಸನ್ನಡತೆಯ ಕ್ಷಮೆ ಅನ್ವಯಿಸುವುದಿಲ್ಲ. ಆದರೂ ಇಲ್ಲಿ 11 ಜನ ಅಪರಾಗಳನ್ನು ಬಿಡುಗಡೆಗೊಳಿಸಿದ್ದು, ದೇಶದ ಸಂವಿಧಾನಕ್ಕೆ ಬಗೆದ ಅಪಮಾನ ಎಂದು ಆರೋಪಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts