More

    ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ

    ರಾಣೆಬೆನ್ನೂರ: ಅತಿಥಿ ಉಪನ್ಯಾಸಕರನ್ನು ಖಾಯಂ ನೌಕರನ್ನಾಗಿ ನೇಮಕ ಮಾಡಿಕೊಳ್ಳುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಇಲ್ಲಿಯ ಸರ್ಕಾರಿ ಪದವಿ ಕಾಲೇಜ್​ನ ಅತಿಥಿ ಉಪನ್ಯಾಸಕರು ಮಂಗಳವಾರ ಕಾಲೇಜ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

    ಸರ್ಕಾರ ಆರಂಭಿಸಿರುವ 1242 ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲಿ ಅತಿಥಿ ಉಪನ್ಯಾಸಕರಿಗೆ ಕೃಪಾಂಕ ನೀಡಬೇಕು. ಅವರಿಗೆ ವಯೋಮಿತಿ ಸಡಿಲಿಕೆ ಮಾಡಬೇಕು. 15ರಿಂದ 20 ವರ್ಷಗಳಿಂದ ದುಡಿದರೂ ಈವರೆಗೂ ಯಾರೋಬ್ಬರನ್ನು ಖಾಯಂ ಮಾಡಿಕೊಂಡಿಲ್ಲ.

    ತಿಂಗಳಿಗೆ ಕೇವಲ 11 ಸಾವಿರ ರೂ. ಸಂಬಳ ನೀಡಿ ದುಡಿಸಿಕೊಳ್ಳಲಾಗುತ್ತಿದೆ. ಇದರಿಂದ ಸಂಸಾರ ಸಾಗಿಸುವುದು ಕಷ್ಟಕರವಾಗಿದೆ. ಪ್ರತಿ ವರ್ಷ ಅತಿಥಿ ಶಿಕ್ಷಕರ ಸಂದರ್ಶನ ನಡೆಸುವುದನ್ನು ಕೈ ಬಿಟ್ಟು ಒಂದು ನೇಮಕವಾದರನ್ನು ಮುಂದುವರಿಸಬೇಕು. ಸೇವಾ ಭದ್ರತೆ ನೀಡಬೇಕು. ಬೇರೆ ಬೇರೆ ರಾಜ್ಯದಲ್ಲಿ ಈಗಾಗಲೇ ಅತಿಥಿ ಉಪನ್ಯಾಸಕರನ್ನು ಖಾಯಂ ನೌಕರರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ನಮ್ಮ ರಾಜ್ಯದಲ್ಲೂ ಆದಷ್ಟು ಬೇಗ ಖಾಯಂ ನೌಕರರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರ ತರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಪ್ರಾಚಾರ್ಯ ಲಿಂಗರಾಜ ಸಂಗಳದ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಪ್ರಮುಖರಾದ ಡಾ. ಸೋಮಲಿಂಗಪ್ಪ ಚಿಕ್ಕಳ್ಳವರ, ಎಂ.ಐ. ಸೊನ್ನದ, ಕವಿತಾ ಪಾಟೀಲ, ಶಿವಾನಂದ ಗುಜ್ಜರ, ಪುಟ್ಟಪ್ಪ ಲಮಾಣಿ, ವೀರೇಶ ರ್ಬಾ, ಮಮತಾ ನವಲೆ, ಸಂಜೀವ ಕಟ್ಟಿಮನಿ, ಉಷಾ ಎಸ್.ಎನ್., ಶಿಲ್ಪಾ ಗೌಡರ, ಅಶ್ವಿನಿ ಡಿ.ಬಿ. ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts