More

    ಅಡುಗೆ, ಆಶಾ ಸಿಬ್ಬಂದಿಗೆ ನಿವೇಶನಕ್ಕೆ ಆದ್ಯತೆ

    ಪಿರಿಯಾಪಟ್ಟಣ: ಕರೊನಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸಿದ ಸೇವೆ ಅನನ್ಯ ಎಂದು ಶಾಸಕ ಕೆ.ಮಹದೇವ್ ಮೆಚ್ಚುಗೆ ವ್ಯಕ್ತಪಡಿಸಿದರು.

    ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಬಿಸಿಯೂಟ ತಯಾರಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಮತ್ತು ಕುಂದುಕೊರತೆ ಸಭೆ ಉದ್ಘಾಟಿಸಿ ಮಾತನಾಡಿದರು. ಕಡಿಮೆ ಸಂಬಳಕ್ಕೆ ದಿನವಿಡೀ ದುಡಿಯುವ ಆಶಾ ಮತ್ತು ಅಡುಗೆ ಸಿಬ್ಬಂದಿ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಯತ್ನಿಸುತ್ತೇನೆ. ಅನೇಕ ಅಡುಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಮನೆಗಳಿಲ್ಲ ಎಂಬ ಮಾಹಿತಿ ಇದೆ. ಅಂತಹವರು ಅರ್ಜಿ ಸಲ್ಲಿಸಿದರೆ ಪ್ರಥಮ ಆದ್ಯತೆ ಮೇಲೆ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

    ತಾಪಂ ಇಒ ಸಿ.ಆರ್.ಕೃಷ್ಣಕುಮಾರ್ ಮಾತನಾಡಿ, ಸಮಾರಂಭಕ್ಕೆ ಆಗಮಿಸಿದ್ದವರಲ್ಲಿ ಅನೇಕರಿಗೆ ಆರೋಗ್ಯ ತಪಾಸಣೆ ನಡೆಸಿದ್ದು ಹಲವರಿಗೆ ರಕ್ತದೊತ್ತಡ, ಮಧುಮೇಹ ಇರುವುದು ಪತ್ತೆಯಾಗಿದೆ. ಮೊದಲು ತಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಶಾಸಕರ ಸಹಕಾರ ಪಡೆದು ಸಮವಸ್ತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

    ಟಿಎಚ್‌ಒ ಡಾ.ಶರತ್‌ಬಾಬು ಮಾತನಾಡಿ, ತಾಲೂಕಿನಲ್ಲಿ 50 ಸಾವಿರ ಜನರಿಗೆ ಬೂಸ್ಟರ್ ಡೋಸ್ ಕೊಡುವುದು ಬಾಕಿ ಇದೆ. ಹಲವು ಅಡುಗೆ ಸಿಬ್ಬಂದಿ ಪಡೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೂ ಬೂಸ್ಟರ್ ಡೋಸ್ ಪಡೆದುಕೊಳ್ಳಿ ಎಂದರು.

    ಬಿಇಒ ಬಸವರಾಜು ಮಾತನಾಡಿ, ಅಡುಗೆ ತಯಾರಕರು ಮಕ್ಕಳನ್ನು ಅಡುಗೆ ಮನೆಯಿಂದ ದೂರ ಇರುವಂತೆ ನೋಡಿಕೊಳ್ಳಿ. ಆಹಾರ ಸಾಮಗ್ರಿಗಳ ಸುರಕ್ಷತೆ ವಹಿಸಬೇಕು. ಪ್ರತಿಯೊಬ್ಬರೂ ಏಪ್ರಾನ್ ಹಾಕಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.

    ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್ ರೂಪಿಸಿರುವ ಅನ್ನಯಜ್ಞ ಬ್ಲಾಗ್‌ಗೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು. ಶಾಸಕ ಕೆ.ಮಹದೇವ್ ಆಶಾ ಮತ್ತು ಅಕ್ಷರ ದಾಸೋಹ ಸಿಬ್ಬಂದಿಗೆ ಉಚಿತವಾಗಿ ಸೀರೆ ವಿತರಿಸಿದರು. ಪುರಸಭೆ ಅಧ್ಯಕ್ಷ ಕೆ.ಮಹೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಜೆಡಿಎಸ್ ಮಹಿಳಾ ಅಧ್ಯಕ್ಷೆ ಪ್ರೀತಿ ಅರಸ್, ತಾಪಂ ಮಾಜಿ ಸದಸ್ಯ ಎ.ಟಿ.ರಂಗಸ್ವಾಮಿ, ಬೆಟ್ಟದಪುರ ಗ್ರಾಪಂ ಅಧ್ಯಕ್ಷ ದೇವರಾಜು, ಜೆಡಿಎಸ್ ಮುಖಂಡ ಇಲಿಯಾಸ್, ತಾಲೂಕು ಅರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ, ಹಿರಿಯ ಸುರಕ್ಷಾ ಅಧಿಕಾರಿಗಳಾದ ಕೆ.ಆರ್.ಪ್ರಕಾಶ್, ಶಾಂತಕುಮಾರಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts