More

    ಅಗೆದಷ್ಟು ಆಳ ಸೋಂಕಿತೆಯ ಟ್ರಾವೆಲ್ ಹಿಸ್ಟರಿ!

    ಅಗೆದಷ್ಟು, ಆಳ, ಸೋಂಕಿತೆಯ, ಟ್ರಾವೆಲ್, ಹಿಸ್ಟರಿ!, ಪ್ರಾಥಮಿಕ, ದ್ವಿತೀಯ, ಸಂಪರ್ಕ, ಹೊಂದಿದ್ದ, 35, ಜನರಿಗೆ, ಕ್ವಾರಂಟೈನ್, ಬೆಳಗಾವಿ, Digging, Depth, Infected, Travel, History !, Primary, Secondary, Connecting, Having, 35, People, Quarantine, Belagavi

    ವಿಜಯವಾಣಿ ಸುದ್ದಿಜಾಲ ಬೆಳಗಾವಿ
    ಮುಂಬೈನಿಂದ ಬೆಳಗಾವಿಗೆ ಬಂದಿದ್ದ ಕರೊನಾ ಸೋಂಕಿತ ಗರ್ಭಿಣಿಯ (ಪಿ-974) ಟ್ರಾವೆಲ್ ಹಿಸ್ಟರಿ ಅಗೆದಷ್ಟು ಆಳವಾಗುತ್ತಿದ್ದು, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ 35 ಜನರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ.
    ಮುಂಬೈನಿಂದ ಆಗಮಿಸಿದ ಸೋಂಕಿತೆ ನಗರದ ವಿವಿಧ ಭಾಗಗಳಲ್ಲಿ ಓಡಾಡಿದ್ದಳು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಲ್ಲದೆ, ಸಂಬಂಧಿಕರ ಕೌಟುಂಬಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಳು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತ ಮಹಿಳೆ ಸಂಚರಿಸಿರುವ ಪ್ರದೇಶಗಳ ಪರಿಶೀಲನೆ ನಡೆಸುತ್ತಿದ್ದಾರೆ. ಸದಾಶಿವ ನಗರದಲ್ಲಿ ನಿರ್ಬಂಧಿತ ಪ್ರದೇಶ ಗುರುತಿಸಲಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
    ಈಗಾಗಲೇ ಸೋಂಕಿತೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ 15 ಜನರು ಮತ್ತು ದ್ವಿತೀಯ ಸಂಪರ್ಕದಲ್ಲಿರುವ 20 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅಲ್ಲದೆ, ಸೋಂಕಿತೆಯನ್ನು ಕರೆದುಕೊಂಡು ಬಂದ ವಾಹನ ಚಾಲಕರು ಮತ್ತು ಅವರನ್ನು ಭೇಟಿಯಾಗಿದ್ದ ವೈದ್ಯರನ್ನು ಕೂಡ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ಬೆಂಗಳೂರು, ಮೈಸೂರು, ಬಾಗಲಕೋಟೆ, ಕಲಬುರ್ಗಿ ಸೇರಿ ವಿವಿಧ ಕಡೆಯಿಂದ ಬೆಳಗಾವಿ ಜಿಲ್ಲೆಗೆ ಆಗಮಿರುವ ಕಾರ್ಮಿಕರು, ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲು ಜಿಲ್ಲಾಡಳಿತವು ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts