More

    ಅಖಂಡ ದೇವದುರ್ಗ ಹೋರಾಟ ಯಶಸ್ವಿ

    ದೇವದುರ್ಗ: ಅವೈಜ್ಞಾನಿಕವಾಗಿ ರಚನೆಯಾದ ಅರಕೇರಾ ತಾಲೂಕು ರದ್ದು ಮಾಡಿ ಅಖಂಡ ದೇವದುರ್ಗ ಉಳಿಸುವಂತೆ ಒತ್ತಾಯಿಸಿ ಸೋಮವಾರ ಅಖಂಡ ದೇವದುರ್ಗ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಯಶಸ್ವಿಯಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಒಮ್ಮತದ ತೀರ್ಮಾನಕೈಗೊಳ್ಳಲಾಗಿದೆ.

    ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡ ಸಾವಿರಾರು ಹೋರಾಟಗಾರರು, ವಿವಿಧ ಬಡಾವಣೆ ಮೂಲಕ ಮಿನಿವಿಧಾನಸೌಧದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ಸೌಧದ ಮುಂಭಾಗದಲ್ಲಿ ಏಕಪಥ ರಸ್ತೆ ಬಂದ್ ಮಾಡಿ ಹಿಂದಿನ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ದೇವದುರ್ಗ ತಾಲೂಕು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದು, ಅಭಿವೃದ್ಧಿ ಮಾಡುವ ಬದಲು ತಾಲೂಕು ಒಡೆದು ಜನರ ಭಾವನೆಗೆ ಧಕ್ಕೆ ತರಲಾಗಿದೆ. ರಾಜಕೀಯ ಉದ್ದೇಶದಿಂದಲೇ ಅರಕೇರಾ ತಾಲೂಕು ಅವೈಜ್ಞಾನಿಕವಾಗಿ ರಚನೆ ಮಾಡಲಾಗಿದೆ. ಇದು ಅಖಂಡತೆಗೆ ದಕ್ಕೆಯಾಗಲಿದೆ.

    ದೇವದುರ್ಗ, ಗಬ್ಬೂರು, ಜಾಲಹಳ್ಳಿ ಹೋಬಳಿ ಸಮೀಪದ ಹಲವು ಗ್ರಾಮಗಳನ್ನು ಅರಕೇರಾಗೆ ಸೇರಿಸಿದ್ದು 40-60ಕಿಮೀ ದೂರವಾಗಲಿವೆ. ಮಾಜಿ ಶಾಸಕ ಕೆ.ಶಿವನಗೌಡ ನಾಯಕ ವೈಯಕ್ತಿಕ ಪ್ರತಿಷ್ಠೆಗೆ ತಾಲೂಕು ರಚನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಅಖಂಡ ದೇವದುರ್ಗ ತಾಲೂಕು ಉಳಿಸುವ ದೃಷ್ಟಿಯಿಂದ ಅರಕೇರಾ ತಾಲೂಕು ರದ್ದುಮಾಡಬೇಕು. ಹಿಂದಿನ ಬಿಜೆಪಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಬೇಕು.

    ಅರಕೇರಾ ತಾಲೂಕು ಪ್ರಶ್ನಿಸಿ ಸಲ್ಲಿಸಿದ ಆಕ್ಷೇಪಣೆ ಅರ್ಜಿಗಳಿಗೆ ಲಿಖಿತ ಉತ್ತರ ನೀಡಬೇಕು. ಅಖಂಡ ಹೋರಾಟಗಾರರ ಮೇಲೆ ದಾಖಲಾದ ಕೇಸ್ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸಿಎಂಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಿದರು.

    ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಸಮಿತಿ ಸಂಚಾಲಕರಾದ ಶಿವರಾಜ ಕೊತ್ತದೊಡ್ಡಿ, ರಾಮನಗೌಡ ರಾಮದುರ್ಗ, ಹನುಮಂತಪ್ಪ ಕಾಕರಗಲ್, ಹನುಮಂತ್ರಾಯ ಚಿಕ್ಕಗುಡ್ಡ, ನರಸಣ್ಣ ನಾಯಕ, ರಂಗಣ್ಣ ಕೋಲ್ಕರ್, ಮೇಲಪ್ಪ ಬಾವಿಮನಿ, ಮಲ್ಲನಗೌಡ, ಭೀಮಣ್ಣ, ಶಿವಪ್ಪ ಪಲಕನಮರಡಿ, ಉಮಾಪತಿಗೌಡ, ಹೈದರ್‌ಅಲಿ ಇತರರಿದ್ದರು.

    ಇದನ್ನೂ ಓದಿ: ನಟ ಸುದೀಪ್ ವಿರುದ್ಧ ಎನ್​. ಕುಮಾರ್ ತೀವ್ರ ಬೇಸರ; ಶಿವಣ್ಣ ಅವರನ್ನು ಭೇಟಿ ಮಾಡದೆ ಹೋಗುವುದಿಲ್ಲ ಎಂದ ನಿರ್ಮಾಪಕರ ತಂಡ

    ಬೆಂಗಳೂರಿಗೆ ಹೋಗಲು ತೀರ್ಮಾನ

    ಅಖಂಡ ದೇವದುರ್ಗ ತಾಲೂಕು ಉಳಿಸುವ ದೃಷ್ಟಿಯಿಂದ ಪ್ರತಿಭಟನೆ ನಡೆಸಿದ ಹೋರಾಟಗಾರರು, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಒಮ್ಮತದ ನಿರ್ಣಯ ಕೈಗೊಂಡರು.

    ವಿವಿಧ ಸಂಘಟನೆಗಳ ಹೋರಾಟಗಾರರು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪಕ್ಷಾತೀತವಾಗಿ ಬೆಂಬಲಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಅಗತ್ಯ ದಾಖಲೆ ಸಂಗ್ರಹಿಸಿ ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡ ಅವೈಜ್ಞಾನಿಕ ತೀರ್ಮಾನ ಹಾಗೂ ಆದೇಶ ಹಿಂಪಡೆಯಲು ಒತ್ತಾಯಿಸಲು ಶೀಘ್ರ ಬೆಂಗಳೂರಿಗೆ ತೆರಳು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts