More

    ಅಕ್ರಮ ಕಟ್ಟಡ ಹಿನ್ನೆಲೆ ಬಾರಿಗೆ ಜಮೀನು ಅಳತೆ

    ಚಿಂತಾಮಣಿ : ನಗರದ ಬೆಂಗಳೂರು ಜೋಡಿ ರಸ್ತೆಯ ಪೂರ್ವದಿಕ್ಕಿನ ಮಾಳಪಲ್ಲಿ ಸರ್ವೆ ನಂ 63 ವತ್ತು 65ರ ಜಮೀನನ್ನು ಮೂರನೇ ಬಾರಿಗೆ ಸರ್ವೆ ಮಾಡಿದ ಜಿಲ್ಲಾ ಭೂ ಮಾಪನ ಇಲಾಖೆಯ ಅಧಿಕಾರಿಗಳ ತಂಡ ಅಳತೆ ಮಾಡಿದ ಜಮೀನಿನ ಜಾಗ ಗುರುತಿಸುವಲ್ಲಿ ಯಶಸ್ವಿಯಾದರು.
    ನಗರದ ಅಶ್ವಿನಿ ಬಡಾವಣೆಯ ಮಂಜುನಾಥ್ ಮತ್ತು ಪೌರಕಾರ್ಮಿಕರ ಬಡಾವಣೆಯ ನಿವಾಸಿ ಕೆ.ಎನ್.ಅನಿಲ್ ಕುಮಾರ್ ಎಂಬವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ನಗರದ ಮಾಳಪಲ್ಲಿ ಸರ್ವೆ ನಂ 63 ವತ್ತು 65ರ ಜಮೀನು ಪರಿವರ್ತನೆಯಾಗಿದ್ದು ನಿವೇಶನಗಳನ್ನು ವಿಂಗಡಣೆ ಮಾಡುವಾಗ ಸರಕಾರಿ ಖರಾಬು ಜಮೀನು ಸೇರಿಸಿ ವಿಂಗಡಣೆ ಮಾಡಿ ಮಾರಾಟ ಮಾಡಿದಲ್ಲದೆ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಜಗೀದಿಶ್ ಹಾಗೂ ಇತರರ ವಿರುದ್ಧ ದೂರು ಸಲ್ಲಿಸಿದ್ದರು. ಅಲ್ಲದೆ ಕೋರ್ಟ್ ಮೆಟ್ಟಿಲೇರಿದ್ದರು.
    ವಿಚಾರಣೆ ನಡೆಸಿದ ಕೋರ್ಟ್ ಜಮೀನು ಅಳತೆ ಮಾಡಿ ವರದಿ ನೀಡುವಂತೆ ಭೂಮಾಪನ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಹೀಗಾಗಿ ಅಧಿಕಾರಿಗಳು ಅಳತೆ ಮಾಡಿ ಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ.
    ಭೂಮಾಪನ ಇಲಾಖೆ ಸೂಪರ್ ವೈಸರ್ ಶ್ರೀನಿವಾಸರೆಡ್ಡಿ, ಮಣಿಕಂಡ ರಮೇಶ್, ಚಂದ್ರಮೂರ್ತಿ, ಸಿಬ್ಬಂದಿ ರಘುಪತಿ, ತಹಸೀಲ್ದಾರ್ ಡಿ.ಹನುಮಂತರಾಯಪ್ಪ, ಕಸಬಾ ಹೋಬಳಿ ಕಂದಾಯ ಅಧಿಕಾರಿ ಅಂಬರೀಶ್, ನಗರಸಭೆಯ ಪೌರಾಯುಕ್ತ ಚೇತನ್ ಎಸ್.ಕೊಳವಿ, ಕಂದಾಯ ಅಧಿಕಾರಿ ರಮೇಶ್ ಹಾಗೂ ಇತರರು ಇದ್ದರು.

    ಕೋರ್ಟ್ ನೀಡಿದ ಸೂಚನೆ ಮೇರೆಗೆ ಜಮೀನಿನನ್ನು ಮೂರು ಬಾರಿ ಅಳತೆ ಮಾಡಲಾಗಿದೆ. ಮೂರನೇ ಬಾರಿ ಮಾಡಿದ ಅಳತೆಯಲ್ಲಿ ಸರ್ವೆ ನಂ ಹಾಗೂ ವಿಸ್ತೀರ್ಣದ ಗಡಿ ಗುರುತಿಸಿದ್ದೇವೆ. ಕೂಡಲೇ ಕೋರ್ಟ್‌ಗೆ ಮಾಹಿತಿ ಸಲ್ಲಿಸಲಾಗುವುದು.
    ಮಂಜುನಾಥ, ಚಿಕ್ಕಬಳ್ಳಾಪುರ ಜಿಲ್ಲಾ ಭೂ ಮಾಪನ ಅಧಿಕಾರಿ.

    ಭೂಮಾಪನ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿ ಜಮೀನು ಗುರುತು ಮಾಡಿದ್ದಾರೆ. ಇದರಲ್ಲಿ ಖರಾಬು ಎಷ್ಟು ಇದೆ ಎಂಬುದನ್ನು ಅಧಿಕಾರಿಗಳು ಹೇಳಬೇಕು, ನನ್ನಗೆ ಗೊತ್ತಿರುವ ಪ್ರಕಾರ ಸರ್ವೆ ನಂಬರ್ 63ರಲ್ಲಿ 15 ಗುಂಟೆ ಇದೆ, ಅದರಲ್ಲಿ ರಸ್ತೆ ಮತ್ತು ಕಾಲುವೆಗೆ ಜಮೀನು ನಿಗದಿಪಡಿಸಿಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಏನು ವರದಿ ಸಲ್ಲಿಸುತ್ತಾರೆ ಕಾದುನೋಡಬೇಕು.
    ಜಗದೀಶ್,ಚಿಂತಾಮಣಿ,ದೂರುದಾರ.

    ಭೂಮಾಪನ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿ ಒಟ್ಟು ಜಮೀನು ಗುರುತು ಮಾಡಿದ್ದಾರೆ. ಇದರಲ್ಲಿ ಖರಾಬು ಎಷ್ಟು ಇದೆ ಎಲ್ಲಿ ಇದೆ ಎಂಬುದನ್ನು ತೋರಿಸುವಮತೆ ನಾವು ಕೇಳಿದ್ದರೂ ಅವರು ಮಾಹಿತಿ ನೀಡಿಲ್ಲ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.
    ಅನಿಲ್ ಕುಮಾರ್, ಮೇಲ್ಮನವಿಧಾರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts