More

    ಅಕ್ರಮವಾಗಿ ಜಲ್ಲಿಕಲ್ಲು, ಮರಳು ಸಾಗಣೆ

    ಅಣ್ಣಿಗೇರಿ: ಪಟ್ಟಣದಲ್ಲಿ ಪ್ರತಿದಿನ 50ಕ್ಕೂ ಹೆಚ್ಚು ವಾಹನಗಳು ಜಲ್ಲಿಕಲ್ಲು ಹಾಗೂ ಮರಳನ್ನು ಅಕ್ರಮವಾಗಿ ಸಾಗಿಸುತ್ತಿವೆ. ಅತ್ಯಧಿಕ ಭಾರ ಹೊತ್ತು ಸಂಚರಿಸುವ ವಾಹನಗಳಿಂದ ಪಟ್ಟಣದ ರಸ್ತೆಗಳು ಹದಗೆಟ್ಟು ಹೋಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಲಾರಿ, ಟಿಪ್ಪರ್​ಗಳಲ್ಲಿ ಹೆಚ್ಚು ತೂಕದ ಜಲ್ಲಿಕಲ್ಲು, ಮರಳನ್ನು ಅಕ್ರಮವಾಗಿ ಪಟ್ಟಣದಿಂದ ವಿವಿಧ ಜಿಲ್ಲೆಗೆ ಸಾಗಿಸಲಾಗುತ್ತಿದೆ. ಜಲ್ಲಿಕಲ್ಲು ತುಂಬಿದ 30ಕ್ಕೂ ಹೆಚ್ಚು ವಾಹನಗಳು ಹಾಗೂ ಮರಳು ತುಂಬಿದ 50ಕ್ಕೂ ಹೆಚ್ಚು ಗಾಡಿಗಳು ನಿತ್ಯ ಸಂಚರಿಸುತ್ತಿವೆ.

    ಅಧಿಕ ಭಾರ ಹೊತ್ತು ಓಡಾಡುವ ಲಾರಿ, ಟಿಪ್ಪರ್​ಗಳಿಂದ ಪಟ್ಟಣದ ರಸ್ತೆಗಳು ಹಾಳಾಗುತ್ತಿವೆ. ಅಲ್ಲದೆ, ವ್ಯಾಪಾರ-ವಹಿವಾಟು, ಮತ್ತಿತರ ಕೆಲಸಗಳಿಗೆ ಬಂದ ಜನರಿಂದ ಬಸ್ ನಿಲ್ದಾಣ ಮುಂಭಾಗದಲ್ಲಿ ಜನದಟ್ಟಣೆ ಇರುತ್ತದೆ. ಆದರೆ, ಲಾರಿ, ಟಿಪ್ಪರ್ ಮಾಲೀಕರು, ಚಾಲಕರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅತಿವೇಗವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರೆ ಇದು ನಮಗೆ ಸಂಬಂಧಪಡುವುದಿಲ್ಲ. ಬೇಕಾದ್ರೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಇನ್ನು ಮುಂದಾದರೂ ಜಲ್ಲಿಕಲ್ಲು, ಮರಳನ್ನು ಅಕ್ರಮವಾಗಿ ಸಾಗಿಸುವ ವಾಹನಗಳನ್ನು ತಡೆದು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಅಣ್ಣಿಗೇರಿ ಪಟ್ಟಣದಲ್ಲಿ ಅಕ್ರಮವಾಗಿ ಸಂಚರಿಸುತ್ತಿರುವ ಜಲ್ಲಿಕಲ್ಲು, ಮರಳು ತುಂಬಿದ ವಾಹನಗಳ ಬಗ್ಗೆ ಆರ್​ಟಿಒಗೆ ತಿಳಿಸಿದ್ದೇನೆ. ಅಂತಹ ವಾಹನಗಳನ್ನು ತಡೆದು ಸಂಬಂಧಿಸಿದ ಅಧಿಕಾರಿಗಳಿಗೆ ಒಪ್ಪಿಸುತ್ತೇನೆ.

    | ಕೊಟ್ರೇಶ್ವರ ಗಾಳಿ ಅಣ್ಣಿಗೇರಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts