More

    ಅಕಾಲಿಕ ಮಳೆಯಿಂದ ಅವರೆ ಬೆಳೆ ನಾಶ: ಬೆಲೆಯಲ್ಲಿ ಏರು-ಪೇರು, ಆತಂಕದಲ್ಲಿ ಅನ್ನದಾತ

    ಶ್ರೀನಿವಾಸಪುರ: ರೈತರು ತಾಲೂಕಿನಲ್ಲಿ ಏಕಬೆಳೆ ಹಾಗೂ ಮಿಶ್ರ ಬೆಳೆಯಾಗಿ 1560 ಹೆಕ್ಟೇರ್‌ನಲ್ಲಿ ಅವರೆಕಾಯಿ ಬೆಳೆದಿದ್ದು, ಅಕಾಲಿಕ ಮಳೆ ಹಾಗೂ ರೋಗದಿಂದ ಬೆಳೆ ನಾಶವಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

    ರೈತರು ಮಿಶ್ರ ಬೆಳೆಯಲ್ಲಿ ಬೆಳೆದಿರುವ ಅವರೆ ಬೆಳೆ ಶೇ.90 ನಾಶವಾಗಿದೆ. ಕೆಲವು ತೋಟಗಳಲ್ಲಿ ಚೀಡು ಹುಳಗಳು ಬಿದ್ದು ತೋಟಕ್ಕೆ ಔಷಧ ಸಿಂಪಡಿಸಲು ಅವಕಾಶ ಸಿಗದೆ ನಾಶವಾಗಿದ್ದರೆ ಮತ್ತೆ ಕೆಲವೆಡೆ ಅಂಗಮಾರಿ ರೋಗದಿಂದ ಎಲೆ ಉದುರಿ ಬರೀ ಕಡ್ಡಿ ಇರುವುದು ಕಾಣಿಸುತ್ತದೆ. ಮಳೆಯಿಂದ ನೀರು ತುಂಬಿ ತೋಟಗಳಲ್ಲಿಯೇ ಮುಳುಗಿವೆ.

    ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ರೈತರು ನೀರಾವರಿಗೆ ಹಿಂದಿನ ಬೆಳೆಯಾಗಿ ಬೆಳೆದಿರುವ ಏಕ ಬೆಳೆ ಮಾತ್ರ ಸಮೃದ್ಧವಾಗಿ ಬಂದಿದೆ. ನವೆಂಬರ್ ಅಂತ್ಯದೊಳಗೆ ಮಳೆ ಕಡಿಮೆಯಾದ್ದರಿಂದ ತೋಟಗಳಲ್ಲಿ ಹೂವು ಬಿಟ್ಟಿರುವುದು ನೋಡುಗರ ಮನಸೂರೆಗೊಳಿಸಿತ್ತು.

    ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಿಶ್ರ ಬೆಳೆ ಅವರೆ ಶೇ. 30 ಕಡಿಮೆಯಾಗಿದೆ. ಆದರೂ ಮಾರುಕಟ್ಟೆಯಲ್ಲಿ ಸರಿಯಾದ ಬೆಂಲ ಬೆಲೆ ಸಿಗುತ್ತದೋ ಇಲ್ಲವೋ ಎಂಬ ಆತಂಕ ರೈತರಲ್ಲಿ ಮೂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಳಗಿನ ಸಮಯದಲ್ಲಿ ಅವರೆಕಾಯಿ ಕೆಜಿಗೆ 38-43ರವರೆಗೆ ಮಾರಾಟವಾದರೆ, ಅದೇ ಅವರೆಕಾಯಿ ಮಧ್ಯಾಹ್ನದ ವೇಳೆಗೆ ಕೆ.ಜಿಗೆ 25-30ರೂಗೆ ಮಾರಾಟವಾಗುತ್ತದೆ. ಬೆಲೆಯಲ್ಲಿ ಪ್ರತಿ ದಿನವೂ ಏರುಪೇರಾಗುತ್ತಿರುವುದು ರೈತರನ್ನು ಕಂಗಾಲಾಗಿಸಿದೆ.

    ಅಕಾಲಿಕ ಮಳೆಯಿಂದ ಅವರೆ ಬೆಳೆ ನಾಶ: ಬೆಲೆಯಲ್ಲಿ ಏರು-ಪೇರು, ಆತಂಕದಲ್ಲಿ ಅನ್ನದಾತ
    ಶ್ರೀನಿವಾಪುರ ತಾಲೂಕಿನಲ್ಲಿ ರೈತರೊಬ್ಬರ ತೋಟದಲ್ಲಿ ಏಕ ಬೆಳೆ ಅವರೆಕಾಯಿ ಸಮೃದ್ಧವಾಗಿ ಬೆಳೆದಿದೆ.

    ಜನವರಿ ತಿಂಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಹಲವೆಡೆ ಮಳೆ ಹನಿ ಬೀಳುತ್ತಿರುವುದರಿಂದ ಹೂವು ನಾಶವಾಗುವುದಲ್ಲದೆ, ಕಾಯಿಗಳಲ್ಲಿ ಕಪ್ಪು ಚುಕ್ಕೆ ಬಂದು ಹಾಳಾಗುತ್ತದೆ ಎಂಬುದು ರೈತರಲ್ಲಿ ದುಖಃ ಹೆಚ್ಚಿಸಿದೆ. ಆಗಾಗ ಮಳೆಯಾದರೆ ಕಾಯಿಯ ಸೊಗಡು ಕಡಿಮೆಯಾಗಿ ರುಚಿ ಕೂಡಾ ಕಡಿಮೆಯಾಗುತ್ತದೆ. ಕೃಷಿ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಸಲಹೆ, ಸೂಚನೆ ನೀಡಲಾಗಿತ್ತು. ಆದರೂ ಮಳೆ ಹೆಚ್ಚಾಗಿದ್ದರಿಂದ ಸಲಹೆ ಪಾಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಬೆಳೆ ನಾಶದ ಪರಿಹಾರವಾಗಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಸರ್ವೇ ಮಾಡಿ ರೈತರಿಗೆ ಒಂದು ಹೆಕ್ಟೇರ್‌ಗೆ 6800 ರೂ.ಗಳಂತೆ ಪರಿಹಾರ ನೀಡಲಾಗಿದೆ.

    ಒಂದು ಎಕರೆಯಲ್ಲಿ ಮಿಶ್ರ ಬೆಳೆಯಾಗಿ ರಾಗಿ ತೆ ಬೆಳೆದಿದ್ದ ಅವರೆ ಅತಿಯಾದ ಮಳೆ ಹಾಗೂ ಅಂಗಮಾರಿ ರೋಗದಿಂದ ಸಂಪೂರ್ಣ ನಾಶವಾಗಿದೆ. ಈಗ ಬರಿ ಕಡ್ಡಿಗಳು ಕಾಣಿಸುತ್ತಿವೆ.
    ಶ್ರೀನಿವಾಸಗೌಡ, ರೈತ, ಶ್ರೀನಿವಾಸಪುರ

    ಕಳದೆ ವರ್ಷಕ್ಕೆ ಹೋಲಿಸಿದರೆ ಅವರೆ ಬೆಳೆ ಈ ವರ್ಷ ಶೇ. 30 ಕಡಿಮೆಯಾಗಿದೆ. ಅನೇಕ ಬೆಳೆಗಳು ಅತಿಯಾದ ಮಳೆಯಿಂದ ನಾಶವಾಗಿವೆ. ನಷ್ಟ ಅನುಭವಿಸಿ ಕಂಗಾಲಾಗಿದ್ದ ರೈತರಿಗೆ ಸರ್ಕಾರದಿಂದ ಬೆಳೆ ನಷ್ಟ ಸರ್ವೇ ಮಾಡಿ ಹೆಕ್ಟೇರ್‌ಗೆ 6800 ರೂ.ಗಳಂತೆ ಪರಿಹಾರ ನೀಡಲಾಗಿದೆ.
    ಈಶ್ವರ, ಕೃಷಿ ಇಲಾಖೆ ಅಧಿಕಾರಿ, ಶ್ರೀನಿವಾಸಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts