More

    ಅಂಧ ಶ್ರದ್ಧೆಯಿಂದ ಸಂಸ್ಕೃತಿ ನಾಶ

    ಮುಂಡರಗಿ: ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಶರಣ ಚರಿತಾಮೃತ ಪ್ರವಚನದ ಮಂಗಲೋತ್ಸವ ನಿಮಿತ್ತ ಪಟ್ಟಣದಲ್ಲಿ ಸೋಮವಾರ ಯಡೆಯೂರ ಶ್ರೀ ಸಿದ್ದಲಿಂಗೇಶ್ವರ ಶಿವಯೋಗಿಗಳ ಭಾವಚಿತ್ರ ಹಾಗೂ ಶರಣರ ವಚನ ಧರ್ಮ ಗ್ರಂಥದ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.

    ಶ್ರೀಮಠದ ಪೀಠಾಧಿಪತಿ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಮಂಗಳವಾಧ್ಯಗಳೊಂದಿಗೆ ಶ್ರೀಮಠದಿಂದ ಹೊರಟ ಮೆರವಣಿಗೆಯು ಪಟ್ಟಣದ ವಿವಿಧ ಭಾಗಗಳಲ್ಲಿ ಸಂಚರಿಸಿ ಪುನಃ ಶ್ರೀಮಠಕ್ಕೆ ಆಗಮಿಸಿತು.

    ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ‘ಹಲವು ಭಾಗಗಳಲ್ಲಿ ಸಂಪ್ರದಾಯಗಳು ಆಚರಣೆಗಳಾಗಿವೆ. ಇನ್ನು ಕೆಲವು ಭಾಗಗಳಲ್ಲಿ ಆಚರಣೆಗಳು ಮೌಢ್ಯತೆಯಿಂದ ಕೂಡಿವೆ. ಅವುಗಳಿಂದ ಸಮಾಜ ಸ್ವಸ್ಥವಾಗಲು ಸಾಧ್ಯವಿಲ್ಲ. ಅಂತಹ ಸಂಗತಿಗಳ ಕುರಿತು ಜನ ಸಾಮಾನ್ಯರಿಗೆ ತಿಳಿವಳಿಕೆ ಹಾಗೂ ಜಾಗೃತಿ ನೀಡುವ ಉದ್ದೇಶದಿಂದ ಶ್ರೀಮಠದಲ್ಲಿ ಪ್ರವಚನ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಎಂದರು.

    ನಮ್ಮಲ್ಲಿರುವ ಅಂಧ ಶ್ರದ್ಧೆಯು ಸಂಸ್ಕೃತಿಯನ್ನು ನಾಶಮಾಡುತ್ತದೆ. ನಮ್ಮ ಆದ್ಯತೆಯಲ್ಲಿ ಮೊದಲು ರಾಷ್ಟ್ರವಿರಬೇಕು. ರಾಷ್ಟ್ರದ ನಂತರ ನಾವು ಧರ್ಮಪಾಲನೆಗೆ ಮುಂದಾಗಬೇಕು. ಧರ್ಮಕ್ಕಿಂತ ರಾಷ್ಟ್ರ ಮುಖ್ಯ ಎನ್ನುವ ಅರಿವು ನಮಗಿರಬೇಕು. ಯುವಕರು ದೇಶ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ದೇಶವಿದ್ದರೆ ನಾವಿರುತ್ತೇವೆ, ನಾವಿದ್ದರೆ ಧರ್ಮವಿರುತ್ತದೆ ಎಂದರು.

    ಮುದಗಲ್ಲ ಕಲ್ಯಾಣಾಶ್ರಮದ ಶ್ರೀ ಮಹಾಂತ ಸ್ವಾಮೀಜಿ, ಡಾ. ಬಸವಾನಂದ ಸ್ವಾಮೀಜಿ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಪಾಲಾಕ್ಷಿ ಗಣದಿನ್ನಿ, ಉಪಾಧ್ಯಕ್ಷ ಶಿವಕುಮಾರ ಬೆಟಗೇರಿ, ಕಾರ್ಯದರ್ಶಿ ಉಮೇಶ ಹಿರೇಮಠ, ಖಜಾಂಚಿ ಪವನ ಚೋಪ್ರಾ, ಎಚ್. ವಿರೂಪಾಕ್ಷಗೌಡ, ಕೊಟ್ರೇಶಪ್ಪ ಅಂಗಡಿ, ದೇವೇಂದ್ರಪ್ಪ ರಾಮೇನಹಳ್ಳಿ, ಶಿವಯೋಗಿ ಕೊಪ್ಪಳ, ಸದಾಶಿವಯ್ಯ ಕಬ್ಬೂರಮಠ, ಗಿರೀಶಗೌಡ ಪಾಟೀಲ, ಅಶೋಕ ಹುಬ್ಬಳ್ಳಿ, ಈರಣ್ಣ ಕಾಸಿಗವಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts