More

    ಅಂಧನ ನೆರವಿಗೆ ಮುಂದಾದ ಅಧಿಕಾರಿಗಳು

    ನರಗುಂದ: ಸಂಕಷ್ಟಕ್ಕೆ ಸಿಲುಕಿದ ಪಟ್ಟಣದ ಅಂಧನ ನೆರವಿಗೆ ಅಧಿಕಾರಿಗಳು ಮುಂದಾಗಿದ್ದು, ಆತ್ಮಸ್ಥೈರ್ಯ ತುಂಬುವ ಜತೆಗೆ ಆತನ ಬಾಳಲ್ಲಿ ಬೆಳಕು ಮೂಡಿಸಲು ಮುಂದಾಗಿದ್ದಾರೆ.

    ಕೆಲವು ವರ್ಷಗಳ ಹಿಂದೆ ವಿಪರೀತ ತಲೆ ಹಾಗೂ ಕೈಕಾಲು ನೋವು ಕಾಣಿಸಿಕೊಂಡ ಪರಿಣಾಮ ಪಟ್ಟಣದ ಹೊರಕೇರಿ ಬಡಾವಣೆಯ ನಿವಾಸಿ ಫಕ್ರುಸಾಬ ಸವಟಗಿ ಅವರ ಎರಡೂ ಕಣ್ಣುಗಳ ದೃಷ್ಟಿಯೇ ಹೊರಟು ಹೋಗಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡಬೇಕಾಗಿದ್ದ ಸಂಬಂಧಿಕರು ಮತ್ತು ಈತನ ಪತ್ನಿ ಸೈನಾಜ್ ಕೂಡ ಈತನಿಂದ ದೂರವಾಗಿದ್ದಾರೆ. ಮನೆಯಲ್ಲಿ ಶೌಚಗೃಹ ಇಲ್ಲದ್ದರಿಂದ ಸಮಸ್ಯೆಯಾಗಿತ್ತು. ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ವಣವಾಗಿತ್ತು. ಈ ಕುರಿತು ಸೆ.2 ರಂದು ‘ದೃಷ್ಟಿಗೆ ಅಂಧಕಾರ; ಬದುಕು ದುಸ್ತರ’ ಎಂಬ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ವಿಸõತ ವರದಿ ಪ್ರಕಟಿಸಲಾಗಿತ್ತು. ಈ ವರದಿಗೆ ಸ್ಪಂದಿಸಿರುವ ನರಗುಂದ ತಾಲೂಕು ಆಹಾರ ನಿರೀಕ್ಷಕ ಅನಿಲ ಪವಾರ ಗುರುವಾರ ಫಕ್ರುಸಾಬ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ರದ್ದಾಗಿರುವ

    ಬಿಪಿಎಲ್ ಕಾರ್ಡ್ ಪ್ರತಿ ಪಡೆದು ಪರಿಶೀಲಿಸಿ, ವಾರದೊಳಗೆ ಕಾರ್ಡ್ ಅನ್ನು ಚಾಲ್ತಿ ಮಾಡುತ್ತೇವೆ ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಫಕ್ರುಸಾಬ ಸವಟಗಿ ಅವರ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಿಕೊಡುತ್ತೇವೆ. ಶೌಚಗೃಹ ನಿರ್ವಿುಸಿಕೊಳ್ಳಲು ಎರಡು ಹಂತಗಳಲ್ಲಿ 15 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಪಟ್ಟಣದ ಕೆಲವೊಂದು ಸಂಘಟನೆಗಳ ಮುಖಂಡರು, ನಾಗರಿಕರು ಅಂಧ ಫಕ್ರುಸಾಬ ಅವರಿಗೆ ಕೈಲಾದ ಸಹಾಯ ಮಾಡುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts