More

    ಅಂಧನಿಗೆ ದೊರಕಿತು ಮೂಲಸೌಲಭ್ಯ

    ನರಗುಂದ: ಮೂಲಸೌಲಭ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಪಟ್ಟಣದ ಅಂಧನ ನೆರವಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸ್ಪಂದಿಸಿದೆ. ಪ್ರಾಧಿಕಾರದ ಆದೇಶಕ್ಕೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಅಂಧನಿಗೆ ಬೇಕಾದ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿದ್ದಾರೆ.

    ತಲೆ, ಕೈಕಾಲು ನೋವು ಕಾಣಿಸಿಕೊಂಡ ಪರಿಣಾಮ ಪಟ್ಟಣದ ಹೊರಕೇರಿ ಬಡಾವಣೆಯ ನಿವಾಸಿ ಫಕ್ರುಸಾಬ ಸವಟಗಿ ಅವರ ಎರಡು ಕಣ್ಣುಗಳ ದೃಷ್ಟಿ ಹೊರಟು ಹೋಗಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡಬೇಕಾಗಿದ್ದ ಈತನ ಪತ್ನಿ ಸೈನಾಜ್ ಕೂಡ ಈತನಿಂದ ದೂರವಾಗಿದ್ದರು. ಮೂಲಸೌಲಭ್ಯಗಳಿಲ್ಲದೆ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ವಣವಾಗಿತ್ತು.

    ಈ ಕುರಿತು ಸೆ.2 ರಂದು ‘ದೃಷ್ಟಿಗೆ ಅಂಧಕಾರ; ಬದುಕು ದುಸ್ತರ’ ಎಂಬ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದನ್ವಯ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಅಂಧ ಫಕ್ರುಸಾಬನ ಮನೆಗೆ ನಿರಂತರ ನೀರು ಸರಬರಾಜು ಯೋಜನೆಯಡಿ ನಲ್ಲಿ (ನಳದ) ಸಂಪರ್ಕ ಕಲ್ಪಿಸಿದ್ದಾರೆ. ಸ್ವಚ್ಛ ಭಾರತ ಯೋಜನೆಯಡಿ ಕೇವಲ ಒಂದು ವಾರದಲ್ಲಿ ಶೌಚಗೃಹ ನಿರ್ವಿುಸಿಕೊಟ್ಟಿದ್ದಾರೆ. ಅಕ್ಟೋಬರ್​ನಿಂದ ಪಡಿತರ ವಿತರಿಸುವುದಾಗಿ ಆಹಾರ ನಿರೀಕ್ಷಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts