More

    ಅಂದಗೆಡುತ್ತಿದೆ ಕಿತ್ತೂರ ಚನ್ನಮ್ಮ ಉದ್ಯಾನ

    ಗಜೇಂದ್ರಗಡ: ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಂದ ಪಟ್ಟಣದ ವೀರರಾಣಿ ಕಿತ್ತೂರ ಚನ್ನಮ್ಮ ಉದ್ಯಾನ ದಿನಗಳೆದಂತೆ ಅಂದಗೆಡುತ್ತಿದೆ. ಉತ್ತಮ ಸೌಲಭ್ಯವಿದ್ದರೂ ನಿರ್ವಹಣೆ ಕೊರತೆಯಿಂದ ಉದ್ಯಾನ ಅಧ್ವಾನವಾಗಿ ಮಾರ್ಪಟ್ಟಿದೆ.

    ಪಟ್ಟಣದ ಹೊರವಲಯದ ಗುಡ್ಡದ ಬಳಿ ಅಂದಾಜು ಒಂದೂವರೆ ಎಕರೆ ಜಾಗದಲ್ಲಿ ಪುರಸಭೆಯಿಂದ ಮಕ್ಕಳಿಗಾಗಿಯೇ ನಿರ್ವಿುಸಲಾಗಿರುವ ಬಾಲವನದಲ್ಲಿ 20ಕ್ಕೂ ಹೆಚ್ಚು ಬಗೆಯ ಹೂವಿನ ಗಿಡಗಳು, ಹುಲ್ಲಿನ ಹಾಸಿನ ಮೇಲೆ ಕಸ ಬೆಳೆದು ನಿಂತಿದೆ. ಎಲ್ಲೆಂದರಲ್ಲಿ ಕಸದ ರಾಶಿ ತುಂಬಿಕೊಂಡಿದೆ. ಮಕ್ಕಳಿಗೆ ಆಟವಾಡಲು ಇದ್ದ ಸಾಮಾನುಗಳೆಲ್ಲವೂ ಹಾಳಾಗಿವೆ. ಬೆಳಗ್ಗೆ ಮತ್ತು ಸಂಜೆ ಕೇಳಿಬರುತ್ತಿದ್ದ ಹಕ್ಕಿಗಳ ಇಂಚರ ಈಗ ಮಾಯವಾಗಿದೆ.

    ಕುಡುಕರ ಸ್ಥಳ: ಸಂಜೆಯಾದೊಡನೆ ಮದ್ಯವ್ಯಸನಿಗಳ ಹಿಂಡು ಉದ್ಯಾನಕ್ಕೆ ದಾಂಗುಡಿ ಇಡುತ್ತದೆ. ಉದ್ಯಾನದಲ್ಲಿ ಮದ್ಯಸೇವಿಸಿ ಪ್ಯಾಕೆಟ್ ಹಾಗೂ ನೀರಿನ ಬಾಟಲಿಗಳನ್ನು ಅಲ್ಲಿಯೇ ಎಸೆದು ಹೋಗುತ್ತಾರೆ. ಇದರಿಂದಾಗಿ ಪರಿಸರ ಪ್ರೇಮಿಗಳು ಉದ್ಯಾನಕ್ಕೆ ಕಾಲಿಡದಂತಹ ವಾತಾವರಣ ನಿರ್ವಣವಾಗಿದೆ.

    ಗಬ್ಬೆದ್ದು ನಾರುವ ಶೌಚಗೃಹ: ಉದ್ಯಾನದಲ್ಲಿ ಶುಚಿತ್ವ ಕಾಪಾಡುವಲ್ಲಿ ಪುರಸಭೆ ಎಡವಿದೆ. ವಾಯವಿಹಾರಕ್ಕಾಗಿ ರ್ಪಾಂಗ್ ಟ್ರ್ಯಾಕ್ ನಿರ್ವಿುಸಲಾಗಿದೆ. ಆದರೆ, ಟ್ರ್ಯಾಕ್ ಪಕ್ಕದಲ್ಲಿ ಕಸ ಕಡ್ಡಿಗಳ ರಾಶಿ ಬಿದ್ದಿದ್ದರೂ ತೆರವುಗೊಳಿಸಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಪುರುಷ ಮತ್ತು ಮಹಿಳಾ ಶೌಚಗೃಹಗಳು ದುರ್ನಾತ ಬೀರುತ್ತಿವೆ. ಅಲ್ಲದೆ, ಶೌಚಗೃಹದ ತುಂಬೆಲ್ಲ ಕಸ-ಕಡ್ಡಿ, ನೀರಿನ ಬಾಟಲಿ, ಇತರೆ ತ್ಯಾಜ್ಯಗಳಿಂದ ತುಂಬಿ ಸಂಪೂರ್ಣ ನಿರುಪಯುಕ್ತವಾಗಿದೆ.

    ಉದ್ಯಾನವವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ರೂಪುರೇಷಗಳನ್ನು ಸಿದ್ಧಪಡಿಸಲಾಗುತ್ತದೆ. ಉದ್ಯಾನದಲ್ಲಿ ಮದ್ಯಪಾನ ಮಾಡುವುದು ಗಮನಕ್ಕೆ ಬಂದಿಲ್ಲ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
    | ಮಹಾಂತೇಶ ಬೀಳಗಿ, ಮುಖ್ಯಾಧಿಕಾರಿ ಗಜೇಂದ್ರಗಡ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts