More

    ಅಂತ್ಯ ಸಂಸ್ಕಾರ ನೆರವೇರಿಸುತ್ತಿರುವ ಯುವ ತಂಡ

    ರಾಮಚಂದ್ರ ಕಿಣಿ ಭಟ್ಕಳ: ವ್ಯಕ್ತಿಗೆ ಮುಕ್ತಿ ನೀಡುವ ಪುಣ್ಯದ ಕೆಲಸ ಅಂತ್ಯ ಸಂಸ್ಕಾರ. ಅದರಿಂದ ಹಿಂದೆ ಸರಿಯುವುದರಲ್ಲಿ ಅರ್ಥವಿಲ್ಲ ಎಂಬುದು ಭಟ್ಕಳದ ಮುಸ್ಲಿಂ ಯುಥ್ ಫೆಡರೇಷನ್​ನ ಯುವಕರ ಮಾತು.

    ಭಟ್ಕಳದಲ್ಲಿ ಕರೊನಾದಿಂದ ಇದುವರೆಗೆ 6 ಸಾವು ಸಂಭವಿಸಿದೆ. ಆ ಎಲ್ಲ ಶವಗಳಿಗೆ ಅಲ್ಲದೆ, ಸಾವಿನ ಬಗ್ಗೆ ಶಂಕೆ ಇದ್ದ ಕೆಲವರ ಅಂತ್ಯಕ್ರಿಯೆಯನ್ನೂ ಯುವಕರ ತಂಡ ಕೋವಿಡ್ ನಿಯಮದಂತೆ ಯಾವುದೇ ಗದ್ದಲ ಇಲ್ಲದೆ ನಡೆಸಿದೆ.

    ಮಸ್ಲಿಜೆ ಇಸ್ಲಾಹ ವ-ಜಂಜೀ ಸಹಕಾರದೊಂದಿಗೆ ಯುವಕರು ಪಿಪಿಇ ಕಿಟ್ ಧರಿಸಿ ಧಾರ್ವಿುಕ ವಿಧಿಗಳನ್ನು ನಡೆಸುತ್ತಾರೆ. ನಂತರ ಶವವನ್ನು ಸ್ಮಶಾನಕ್ಕೆ ಕೊಂಡೊಯ್ದು ಬಟ್ಟೆಯ ಮೂಲಕ ಗುಂಡಿಗೆ ಇಳಿಸಿ ದಫನ್ ಮಾಡುತ್ತಿದ್ದಾರೆ. ನಂತರ ಪಿಪಿಇ ಕಿಟ್ ತೆಗೆದು ಅದನ್ನು ಸುಟ್ಟು

    ಬೂದಿಯನ್ನು ಅಲ್ಲಿಯೇ ಮುಚ್ಚಿ ಮನೆಗೆ ಬರುತ್ತಿದ್ದಾರೆ. ಮನೆಗೆ ಹೋಗಿ ಬಿಸಿ ನೀರಿನ ಸ್ನಾನ ಮಾಡಿ ಶುದ್ಧವಾಗುತ್ತಿದ್ದಾರೆ.

    ಸುರಕ್ಷತಾ ಕ್ರಮ: ‘ಸರ್ಕಾರದ ನಿಯಮಾವಳಿಯಂತೆ ಅಧಿಕಾರಿಗಳ ಸಮ್ಮುಖದಲ್ಲೇ ನಾವು ಎಲ್ಲ ಧಾರ್ವಿುಕ ವಿಧಿಗಳನ್ನು ನೆರವೇರಿಸಿ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದೇವೆ. ಮತ್ತು ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂಬುದು ಭಟ್ಕಳ ಮುಸ್ಲಿಂ ಯುಥ್ ಫೆಡರೇಷನ್​ನ ಸದಸ್ಯರ ಅಭಿಪ್ರಾಯ.

    ಸುರಕ್ಷಾ ಕ್ರಮಗಳನ್ನು ಕೈಗೊಂಡು ಅಂತ್ಯಸಂಸ್ಕಾರ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಕರೊನಾದಿಂದ ಮೃತಪಟ್ಟ ಯಾವುದೇ ಧರ್ಮ ಅಥವಾ ಸಮುದಾಯದವರ ಅಂತ್ಯಸಂಸ್ಕಾರಕ್ಕೆ ಎಲ್ಲೇ ತೊಂದರೆ ಇದ್ದರೂ ನಾವು ಬಂದು ಮಾಡಲು ಸಿದ್ಧ. ಅಥವಾ ಪಿಪಿಇ ಕಿಟ್​ಗಳನ್ನು ಬೇಕಾದರೂ ಒದಗಿಸುತ್ತೇವೆ. ಜನ ಹೆದರಿ ಅಂತ್ಯಸಂಸ್ಕಾರಕ್ಕೆ ವಿರೋಧ ಮಾಡುವುದು ಸರಿಯಲ್ಲ. |ಭಟ್ಕಳ ಮುಸ್ಲಿಂ ಯುಥ್ ಫೆಡರೇಷನ್ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts