More

    ಅಂತಿಮ ಸ್ವರೂಪ ಕಾಣದ ಕಬ್ಬಿನ ಬಿಕ್ಕಟ್ಟು

    ಬಾಗಲಕೋಟೆ: ಪ್ರತಿ ಟನ್ ಕಬ್ಬಿಗೆ ೩೫೦೦ ರೂ. ನೀಡಬೇಕು, ಬಾಕಿ ಬಿಲ್ ಪಾವತಿಸಿ ಪ್ರಸಕ್ತ ಸಾಲಿನ ಹಂಗಾಮ ಆರಂಭಿಸಬೇಕು ರೈತರ ಬೇಡಿಕೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು, ಕಬ್ಬು ಬೆಳೆಗಾರರೊಂದಿಗೆ ನಡೆದ ಸಭೆಯಲ್ಲಿ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
    ಇಲ್ಲಿನ ಜಿಲ್ಲಾಡಳಿತ ಭವನ ನೂತನ ಅಡಿಟೋರಿಯಂ ಹಾಲನ್‌ನಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅಧ್ಯಕ್ಷತೆಯಲ್ಲಿ ೫ ಗಂಟೆಗೂ ಹೆಚ್ಚು ಕಾಲ ಸುಧೀರ್ಘವಾಗಿ ಚರ್ಚೆ ನಡೆಸಲಾಯಿತು. ಕಾರ್ಖಾನೆ ಮಾಲೀಕರು, ಕಬ್ಬು ಬೆಳೆಗಾರರ ನಡುವೆ ಸ್ಪಷ್ಟವಾದ ನಿರ್ಧಾರಕ್ಕೆ ತರುವ ಪ್ರಯತ್ನವಾದರು ಫಲಪ್ರದವಾಗಲಿಲ್ಲ. ಕೆಲವು ಕಾರ್ಖಾನೆ ಮಾಲೀಕರು ತಮ್ಮ ಭಾಗದ ರೈತರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು. ಸಭೆಯಲ್ಲಿ ಅಂತಿಮವಾದ ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ.
    ಇದರಿಂದ ಆಕ್ರೋಶ ಕಬ್ಬು ಬೆಳೆಗಾರರು ಯಾವುದೇ ಕಾರಣಕ್ಕೂ ಕಾರ್ಖಾನೆ ಮಾಲೀಕರ ಹಠಮಾರಿ ಧೋರಣೆ ಸಹಿಸುವದಿಲ್ಲ. ನ್ಯಾಯಯುತವಾಗಿ ದೊರೆಯಬೇಕಾದ ಬೆಲೆ, ಬಾಕಿ ಬಿಲ್ ಆಗುವ ವರೆಗೆ ಕಾರ್ಖಾನೆ ಆರಂಭಕ್ಕೆ ಅವಕಾಶ ನೀಡುವದಿಲ್ಲ. ಸರ್ಕಾರ ಮಧ್ಯಸ್ಥಿತಿಕೆ ವಹಿಸಿ ಬಿಕ್ಕಟ್ಟು ನಿವಾರಣೆ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
    ಸಭೆ ಬಳಿಕ ಜಿಲ್ಲಾಡಳಿತ ಭವನ ಎದುರು ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆ, ಜಿಲ್ಲಾಡಳಿತ, ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಬಸವಂತಪ್ಪ ಕಾಂಬಳೆ ಮಾತನಾಡಿ, ಸಭೆಯಲ್ಲಿ ಕಾರ್ಖಾನೆ ಮಾಲೀಕರು ಹಠಮಾರಿ ಧೋರಣೆ ಅನುಸರಿಸಿದರು. ಸರಿಯಾಗಿ ಬಿಲ್ ನೀಡುಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಗೊಬ್ಬರ, ಬೀಜದ ಬೆಲೆ ಹೆಚ್ಚಳವಾಗಿದೆ. ಆದ್ದರಿಂದ ಬೆಲೆ ಹೆಚ್ಚಳ ಮಾಡಬೇಕು. ಕಳೆದ ವರ್ಷ ಎರಡನೇ ಕಂತಿನ ೩೦೦ ರೂ. ಬಿಲ್ ಮಾಡಬೇಕು. ಕಾರ್ಖಾನೆ ಮಾಲೀಕರು, ಸರ್ಕಾರ ಎಸ್‌ಎಪಿ ಕಾನೂನು ಕೊಲೆ ಮಾಡಿವೆ. ಎಫ್ಆರ್‌ಪಿ ಹೆಸರಿನಲ್ಲಿ ಮೋಸ ಮಾಡಲಾಗುತ್ತಿದೆ. ಎಫ್ಆರ್‌ಪಿ ಅನ್ವಯ ಮಾಡುವುದಾದರೇ ಎಸ್‌ಎಪಿ ಜಾರಿ ಮಾಡಬೇಕು. ಇಲ್ಲವಾದಲ್ಲಿ ಪ್ರತಿ ಟನ್‌ಗೆ ೩೫೦೦ ರೂ. ಬೆಲೆ ನೀಡಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ರೈತರ ರನ್ನ ಸಕ್ಕರೆ ಕಾರ್ಖಾನೆ ಮಾದರಿಯಲ್ಲಿ ಕನಿಷ್ಠ ಪ್ರತಿ ಟನ್ ೨೯೦೦ ರೂ. ಬೆಲೆ ನೀಡಬೇಕು ಎನ್ನುವುದು ಆಗ್ರಹಿಸಿದವು. ಆದರೇ ಕಾರ್ಖಾನೆಯವರು ಒಪ್ಪಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಇನ್ನೂ ಜಿಲ್ಲಾಧಿಕಾರಿಗಳು ಕರೆದ ಸಭೆಯಲ್ಲಿ ಮಾಲೀಕರು ಬರುವದಿಲ್ಲ. ಅವರ ಪ್ರತಿನಿಧಿಗಳನ್ನು ಕಳುಹಿಸುತ್ತಾರೆ. ಅವರು ನಮ್ಮೊಂದಿಗೆ ಚರ್ಚೆ ಮಾಡಿ ಸ್ಪಷ್ಟ ನಿರ್ಧಾರ ಮಾಡುವದಿಲ್ಲ. ನಮ್ಮ ಮಾಲೀಕರು, ಆಡಳಿತ ಮಂಡಳಿಯೊಂದಿಗೆ ಮಾತನಾಡುತ್ತೇವೆ ಎನ್ನುತ್ತಾರೆ. ಇದು ಅವಮಾನಕರ ಸಂಗತಿ. ಸಭೆಗೆ ಖುದ್ದು ಮಾಲೀಕರು ಆಗಮಿಸಿ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಎಸಿ ಶ್ವೇತಾ ಬಿಡಿಕರ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಸೇರಿದಂತೆ ವಿವಿಧ ಇಲಾಖೆ ಅಽಕಾರಿಗಳು ಹಾಗೂ ರೈತ ಸಂಘದ ಮುಖಂಡರಾದ ಸಿದ್ದಪ್ಪ ಬಳಗಾನೂರ, ಈರಪ್ಪ ಹಂಚಿನಾಳ, ಬಸವಂತಪ್ಪ ಕಾಂಬಳೆ, ವಿಠ್ಠಲ ತುಂಬರಮಟ್ಟಿ, ಸುರೇಶ ಚಿಂಚಲಿ, ಸಂಗಪ್ಪ ನಾಗರೆಡ್ಡಿ, ಪರಶುರಾಮ ಮಂಟೂರ, ರಾಜು ನದಾಫ ಸಿದ್ದಪ್ಪ ಬನಜಗೋಳ ಇದ್ದರು.

    ಜಿಲ್ಲೆಯ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರಲ್ಲಿ ಒಡೆದಾಳುವ ನೀತಿ ಮಾಡುವುದು ನಿಲ್ಲಿಸಲಿ. ಕಬ್ಬು ಬೆಳೆಗಾರರ ಒಂದೇ ಇದ್ದೇವೆ. ಕನಿಷ್ಠ ೨೯೦೦ ರೂ. ಬೆಲೆ ನಿಗದಿ ಮಾಡಬೇಕು. ಇಲ್ಲವಾದಲ್ಲಿ ಕಾರ್ಖಾನೆ ಮಾಲೀಕರನ್ನು ಹೇಗೆ ಬೆಂಡು ಮಾಡಬೇಕು ಎನ್ನುವುದು ಗೊತ್ತಿದೆ. ಇದೇ ನೆಲ-ಜಲದಲ್ಲಿ ನಾವು ಬದುಕಿದ್ದೇವೆ. ಕಾರ್ಖಾನೆ ಮಾಲೀಕರ ಕಿವಿ ಹಿಂಡಿ ಬೆಲೆ ಕೊಡಿಸುವ ಪ್ರಯತ್ನ ಸರ್ಕಾರ ಮಾಡಬೇಕು. ೨೦೧೬-೧೭ ರಲ್ಲಿ ೩೦೦೦ ರೂ.೩೧೦೦ ಬೆಲೆ ನೀಡಲಾಗಿತ್ತು. ಇಂದು ಅದಕ್ಕಿಂತ ಕಡಿಮೆ ಬೆಲೆ ನೀಡುತ್ತೇವೆ ಎಂದರೇ ಹೇಗೆ? ಗೊಬ್ಬರ, ಬೀಜದ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಬೆಲೆ ಹೆಚ್ಚಳ ಮಾಡಬೇಕು. ಬಾಕಿ ಪಾವತಿಸಬೇಕು.

    * ಈರಪ್ಪ ಹಂಚಿನಾಳ ರೈತ ಸಂಘದ ಮುಖಂಡ

    ಬಾಕ್ಸ್:
    ಬಾಗಲಕೋಟೆ: ಸಕ್ಕರೆ ಕಾರ್ಖಾನೆ ಮಾಲಿಕರು ಮತ್ತು ರೈತರ ಜೊತೆ ನಡೆದ ಕಬ್ಬಿನ ಬೆಲೆ ನಿರ್ಧಾರ ಸಭೆಯಲ್ಲಿ ಸಹಮತ ವ್ಯಕ್ತವಾಗದ ಕಾರಣ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಎರಡು ದಿನಗಳ ಮಟ್ಟಿಗೆ ಸಭೆಯನ್ನು ಮುಂದೂಡಲಾಯಿತು.
    ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿ ಕರೆಯಲಾಗಿದ್ದ ಕಬ್ಬಿನ ನಿರ್ಧಾರ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿಯೂ ಸಾಕಷ್ಟು ಚರ್ಚೆಗಳು ನಡೆದರುಬೆಲೆ ನಿಗಧಿ ವಿಷಯದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ನವೆಂಬರ 3ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts