More

    ಅಂತರಗಂಗೆ ಬೆಟ್ಟದ ಸಂರಕ್ಷಣೆಗೆ ಪರಿಸರಪ್ರಿಯರ ಪಟ್ಟು: ಅರಣ್ಯ ಇಲಾಖೆ ವೈಫಲ್ಯಕ್ಕೆ ಪೂರ್ವಭಾವಿ ಸಭೆಯಲ್ಲಿ ಆಕ್ರೋಶ

    ಕೋಲಾರ: ಅಪಾರ ನೈಸರ್ಗಿಕ ಸಂಪತ್ತು ಹೊಂದಿರುವ ಹಾಗೂ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಅಂತರಗಂಗೆ ಬೆಟ್ಟವನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸವಾನ ಮನಸ್ಕರು ಜನಪ್ರತಿನಿಧಿ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

    ನಗರದ ಪತ್ರಕರ್ತರ ಸಂದ ಭವನದಲ್ಲಿ ಸೋಮವಾರ ಹಿರಿಯ ಪತ್ರಕರ್ತ ಪಾ.ಶ್ರೀ.ಅನಂತರಾಮ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂ ಸಂಸ್ಥೆಗಳ 100ಕ್ಕೂ ಹೆಚ್ಚು ಪ್ರತಿನಿಧಿಗಳು, ಬೆಟ್ಟ ಕಲುಷಿತಗೊಳ್ಳುತ್ತಿರುವುದಕ್ಕೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಹಾಗೂ ಇಚ್ಛಾಶಕ್ತಿಯ ಕೊರತೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬೆಟ್ಟದಲ್ಲಿರುವ ಗಿಡಮೂಲಿಕೆ, ಕಲ್ಲಿನ ಬಸವನ ಬಾಯಿಂದ ಹರಿಯುತ್ತಿರುವ ಗಂಗೆ, ಮಹಾಭಾರತದ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಕಾಶಿ ವಿಶ್ವನಾಥ ದೇವಾಲಯ, ನೈಜತೆಯಿಂದ ಕೂಡಿರುವ ಶಿಲ್ಪ ಸೌಂದರ್ಯ ಸಂಶೋಧಕರು, ವಿದ್ಯಾರ್ಥಿಗಳು, ಕಲಾವಿದರು, ಜನಪದರು, ಸಾಹಿತಿಗಳಿಗೆ ಜ್ಞಾನ ಸಂಪಾದಿಸಲು ದೊಡ್ಡ ಕೊಡುಗೆ ನೀಡುತ್ತಾ ಬಂದಿದೆ. ಅರಣ್ಯ ಇಲಾಖೆ ಬೆಟ್ಟವನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳದಿರುವುದರಿಂದ ಅಪವಿತ್ರದ ಜತೆಗೆ ನೈಸರ್ಗಿಕ ಸಂಪತ್ತು ಬೆಂಕಿಗೆ ಆಹುತಿಯಾಗುತ್ತಿರುವುದರಿಂದ ಸಮಿತಿ ರಚಿಸಲು ನಿರ್ಣಯ ಕೈಗೊಳ್ಳಲಾಯಿತು.

    ಪ್ರತಿನಿಧಿಗಳಿಂದ ಸಲಹೆ ಸೂಚನೆ: ಬೇಸಿಗೆಯಲ್ಲಿ ಬೆಂಕಿ ಬೀಳುವುದನ್ನು ತಪ್ಪಿಸಲು ಅರಣ್ಯ ಇಲಾಖೆಯಿಂದ ವಾಚರ್‌ಗಳನ್ನು ನೇಮಿಸಬೇಕು, ಪ್ಲಾಸ್ಟಿಕ್ ಮತ್ತು ನೀಲಗಿರಿ ನಿಷೇಧ, ಪರಿಸರ ಸಂರಕ್ಷಣೆ ಅರಿವು ಮೂಡಿಸಲು ಸೂಚನಾ ಫಲಕ, ಪುಂಡರ ಹಾವಳಿ ನಿಯಂತ್ರಣಕ್ಕೆ ಸಿಸಿ ಕ್ಯಾಮರಾ, ಚೆಕ್ ಡ್ಯಾಂ ನಿರ್ವಾಣ, ಕಾಶಿ ವಿಶ್ವನಾಥ ದೇವಾಲಯದ ಜೀರ್ಣೋದ್ಧಾರ, ಪ್ರವಾಸಿಗರಿಗೆ ಅಗತ್ಯ ಸೌಲಭ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮ, 2 ತಿಂಗಳಿಗೊಮ್ಮೆ ಧ್ವನಿ ಬೆಳಕು ಕಾರ್ಯಕ್ರಮ, ಭಾವೈಕ್ಯತಾ ಶಿಬಿರ, ಸ್ವಚ್ಛ ಭಾರತ್ ಯೋಜನೆಯಡಿ ವಾರಕ್ಕೊಮ್ಮೆ ಸ್ವಚ್ಛತಾ ಆಂದೋಲನ, ಪ್ರಾಣಿ, ಪಕ್ಷಿಗಳಿಗೆ ಉಪಯೋಗವಾಗಬಲ್ಲ ಗಿಡ ಮರಗಳನ್ನು ಬೆಳೆಸುವುದು, ಮುಖ್ಯವಾಗಿ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿ ಪೊಲೀಸ್ ಹೊರ ಠಾಣೆ ಮರುಸ್ಥಾಪಿಸಿ ಪ್ರವಾಸಿಗರು ಪ್ಲಾಸ್ಟಿಕ್ ಕವರ್, ಸಿಗರೇಟ್, ಬೀಡಿ, ಬೆಂಕಿ ಪೊಟ್ಟಣ, ವಾದಕ ವಸ್ತುಗಳನ್ನು ಕೊಂಡೊಯ್ಯುವುದನ್ನು ತಡೆದರೆ ಪ್ರವಾಸಿಗರನ್ನು ಆಕರ್ಷಿಸಲು ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ಹಾಜರಿದ್ದ ವಿವಿಧ ಸ್ತರಗಳ ಗಣ್ಯರು ಸಲಹೆ ನೀಡಿ, ಜಿಲ್ಲಾಧಿಕಾರಿಗಳ ಗಮನ ಸೆಳೆಯುವಂತೆ ತಿಳಿಸಿದರು.

    ಕರ್ನಾಟಕ ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮಂಜುಳಾ ಭೀಮರಾವ್, ಪರಿಸರವಾದಿ ಇಂದಿರಾರೆಡ್ಡಿ, ಪರಿಸರ ಲೇಖಕ ಎಚ್.ಎ.ಪುರುಷೋತ್ತಮ್, ಸ್ವರ್ಣಭೂಮಿ ಫೌಂಡೇಷನ್ ಅಧ್ಯಕ್ಷ ವಿ.ಶಿವಕುವಾರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮುನಿರಾಜು, ಪರಿನಿರ್ವಾಣ ಗತಿ ಸಂರಕ್ಷಣಾ ವಿಧಿ ಜಿಲ್ಲಾ ಸಂಚಾಲಕ ಮಹೇಶ್ ರಾವ್ ಕದಂ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಸಂಟಕ ವಿ.ಬಾಬು, ಪರಿಸರ ಪ್ರೇಮಿ ವಂದೇವಾತರಂ ಸೋಮಶಂಕರ್, ನಗರಸಭೆ ವಾಜಿ ಉಪಾಧ್ಯಕ್ಷ ವಿ.ಕೆ.ರಾಕೇಶ್, ರೈತ ಮುಖಂಡರಾದ ಅಬ್ಬಣಿ ಶಿವಪ್ಪ, ಕೆ.ನಾರಾಯಣಗೌಡ, ನಳನಿಗೌಡ, ಕೆ.ಆನಂದಕುವಾರ್, ಕ್ಯಾನ್ ಸಂಸ್ಥೆ ಕಾರ್ಯದರ್ಶಿ ಚೌಡಪ್ಪ, ಈ ನೆಲ ಈ ಜಲ ಸಂಸ್ಥೆಯ ವೆಂಕಟಾಚಲಪತಿ, ಕೋಂಡರಾನಹಳ್ಳಿ ಗ್ರಾಪಂ ವಾಜಿ ಸದಸ್ಯ ಖಾದ್ರಿಪುರ ಬಾಬು, ಜಯ ಕರ್ನಾಟಕ ಸಂಟನೆ ಅಧ್ಯಕ್ಷ ತ್ಯಾಗರಾಜ್, ಗ್ರಾಪಂ ಸದಸ್ಯ ನಿರಂಜನ್, ಮನ್ವಂತರ ಪ್ರಕಾಶನ ಪ್ರಧಾನ ಸಂಚಾಲಕ ಎಸ್.ಮಂಜುನಾಥ್, ಖಜಾಂಚಿ ಎಸ್.ಎನ್.ಪ್ರಕಾಶ್, ಪರಿಸರ ಪಡೆ ಸಂಚಾಲಕ ಎ.ಬಾಲನ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಅರುಣಮ್ಮ, ಜಿಲ್ಲಾ ಆರ್ಯ ವೇಶ್ಯ ಸವಾಜದ ಮುಖಂಡ ಡಿ.ಟಿ.ಮನೋಹರ್, ಕಾಂಗ್ರೆಸ್ ಮುಖಂಡ ಗಂಗಮ್ಮನಪಾಳ್ಯದ ರಾಮಪ್ಪ ಅಮೂಲ್ಯವಾದ ಸಲಹೆಗಳನ್ನು ನೀಡಿದರು. ವಿವಿಧ ಸಂ ಸಂಸ್ಥೆಗಳಿಂದ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರತಿನಿಧಿಗಳು ಸೇರಿದ್ದರು.

    ಇಂದು ಡಿಸಿ ಬಳಿಗೆ ನಿಯೋಗ: ಜನಪ್ರತಿನಿಧಿಗಳು ಸಮಿತಿ ರಚನೆಗೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಬೇಕು, ಸಮಿತಿಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್ಪಿ, ಡಿಎಫ್‌ಒ, ಪರಿಸರ, ಪ್ರವಾಸೋದ್ಯಮ, ಮುಜರಾಯಿ, ನಗರಸಭೆ, ಸಂಬಂಧಿಸಿದ ಗ್ರಾಪಂ ಪಿಡಿಒ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಹಾಗೂ ಅಂತರಗಂಗೆ ಬೆಟ್ಟ ಸಂರಕ್ಷಣಾ ಸಮಿತಿಯ 15 ಪ್ರತಿನಿಧಿಗಳನ್ನು ಸೇರಿಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಕೋರಿ ವಾ.15ರ ಮಧ್ಯಾಹ್ನ 1 ಗಂಟೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ವಾನಿಸಲಾಯಿತು.

    ಪ್ರಾಧಿಕಾರ ರಚನೆಗೆ ಸಲಹೆ: ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ವಾತನಾಡಿ, ಶತಶೃಂಗ ಪರ್ವತಗಳ ಸಾಲಿನ ಬೆಟ್ಟಗಳ ಸಂರಕ್ಷಣೆಗಾಗಿ ವಿಶೇಷ ಪ್ರಾಧಿಕಾರ ರಚನೆ ಆಗಬೇಕೆಂದು ಪ್ರತಿಪಾದಿಸಿದರಲ್ಲದೆ, ಜನಪ್ರತಿನಿಧಿಗಳನ್ನು ಒಳಗೊಂಡಂತೆ ಸಮಿತಿ ರಚಿಸಿದಾಗ ವಾತ್ರ ಅಧಿಕಾರಿಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.
    ನಗರಸಭೆ ಉಪಾಧ್ಯಕ್ಷ ಪ್ರವೀಣ್ ಗೌಡ ನೀಲಿ ನಕ್ಷೆ ಸಿದ್ಧಪಡಿಸಿ ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts