More

    ಅಂಚೆ ಸೇವಕರ ಹಿತಾಸಕ್ತಿ ಕಾಪಾಡಲು ಬದ್ಧ

    ಚಿಕ್ಕೋಡಿ: ಗ್ರಾಮೀಣ ಅಂಚೆ ಸೇವಕರಿಗೆ ಸರ್ಕಾರದಿಂದ ದೊರಕುವ ಎಲ್ಲ ಸವಲತ್ತು ಒದಗಿಸಿಕೊಡಲಾಗುವುದು. ಜತೆಗೆ ಇಲಾಖೆ ಅಕಾರಿಗಳಿಂದ ಶೋಷಣೆ, ಅನ್ಯಾಯ ಆಗಲು ಅವಕಾಶ ನೀಡುವುದಿಲ್ಲ ಎಂದು ಚಿಕ್ಕೋಡಿ ವಿಭಾಗದ ಪೋಸ್ಟಲ್ ಸೂಪರಿಂಟೆಂಡೆಂಟ್ ಎಂ.ಆರ್.ಕಾಮಗೌಡರ ಹೇಳಿದರು. ಪಟ್ಟಣದ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಭಾನುವಾರ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಚಿಕ್ಕೋಡಿ ವಿಭಾಗದಿಂದ ಹಮ್ಮಿಕೊಂಡಿದ್ದ ದ್ವೆವಾರ್ಷಿಕ ಅವೇಶನ ಉದ್ಘಾಟಿಸಿ ಅವರು ಮಾತನಾಡಿದರು.

    ಚಿಕ್ಕೋಡಿ ವಿಭಾಗದಲ್ಲಿ ಅಂಚೆ ನೌಕರರಿಗೆ ಮಾನವೀಯತೆ ಅಧಾರದಲ್ಲಿ ಸೂಕ್ತ ಸಹಾಯ ಸಲ್ಲಿಸಲಾಗುತ್ತಿದೆ. ನೌಕರರು ಕೂಡ ಇಲಾಖೆಯ ನಿರ್ದೇಶನಗಳನ್ವಯ ಪಾರದರ್ಶಕವಾಗಿ ಸೇವೆ ಸಲ್ಲಿಸಬೇಕು. ಅಕಾರಿಗಳಿಗೆ ಗೌರವ ಕೊಡಬೇಕು. ಇಲಾಖೆಗೆ ವಿಧೇಯರಾಗಿರಬೇಕು. ಕರ್ತವ್ಯ ಮತ್ತು ಹಕ್ಕುಗಳನ್ನು ಸಮಾನವಾಗಿ ಮತ್ತು ಸಮರ್ಥವಾಗಿ ನಿಭಾಯಿಸಬೇಕು. ಸಮಸ್ಯೆ ಗಮನಕ್ಕೆ ತಂದರೆ ಕಾನೂನು ಚೌಕಟ್ಟಿನಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಿದರು.

    ಗ್ರಾಮೀಣ ಅಂಚೆ ಸೇವಕರ ಸಂಘದ ಮುಖ್ಯ ಕಾನೂನು ಸಲಹೆಗಾರ ಎಸ್.ಎಸ್.ಮಂಜುನಾಥ ಮಾತನಾಡಿ, ಅಂಚೆ ಸೇವಕರ ಕಾಯಂಮಾತಿ, ಪಿಂಚಣಿ, ವೈಜ್ಞಾನಿಕವಾದ ವೇತನ ಆಯೋಗ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರಗಳಿಗೆ ನಮ್ಮ ಮೊರೆ ಕೇಳುತ್ತಿಲ್ಲ. ಸರ್ಕಾರ ಗ್ರಾಮೀಣ ಅಂಚೆ ನೌಕರರಿಗೆ ಅನ್ಯಾಯ ಮಾಡುತ್ತಿದೆ. ನ.16 ರಿಂದ ದೆಹಲಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.

    ಸಂಘದ ಬೆಂಗಳೂರು ವಲಯ ಅಧ್ಯಕ್ಷ ಕೆ.ಪ್ರಲ್ಹಾದರಾವ್ ಮಾತನಾಡಿ, ಗ್ರಾಮೀಣ ಅಂಚೆ ಸೇವಕರ ಹಲವು ಬೇಡಿಕೆಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಲಾಗಿದೆ. ಯಾರೂ ನಮಗೆ ಭಿಕ್ಷೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಸಂಘದ ಬೆಂಗಳೂರು ವಲಯ ಕಾರ್ಯದರ್ಶಿ ಕೆ.ಎಸ್.ರುದ್ರೇಶ, ಕೇಂದ್ರ ಸರ್ಕಾರದಿಂದ ಗ್ರಾಮೀಣ ಅಂಚೆ ನೌಕರರಿಗೆ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು. ಚಿಕ್ಕೋಡಿ ಉಪ ಅಂಚೆ ಅೀಕ್ಷಕ ಆರ್.ಕೆ.ಉಮರಾಣಿ, ಸಂಘದ ಉತ್ತರ ಕರ್ನಾಟಕ ವಲಯ ಕಾರ್ಯದರ್ಶಿ ಅಶೋಕ ಮನಗೂಳಿ ಮಾತನಾಡಿದರು. ಸಂಘದ ಬೆಂಗಳೂರು ವಲಯ ಕಾರ್ಯಾಧ್ಯಕ್ಷ ಬಿ.ಎಲ್.ಹೂಗಾರ, ಚಿಕ್ಕೋಡಿ ಅಂಚೆ ನಿರೀಕ್ಷಕ ಸೋಮಶೇಖರ ಸಾರಾಪುರೆ, ಅಥಣಿ ಅಂಚೆ ಅೀಕ್ಷಕ ಮಲ್ಲಿಕಾರ್ಜುನ ಕಾಳಶೆಟ್ಟಿ, ಎಐಸಿಇಯು ಗ್ರುಪ್ ಸಿ ಕಾರ್ಯದರ್ಶಿ ದರ್ಶನ ಉಪಾಧ್ಯೆ, ವಿ.ಎಸ್.ಲೇಲೆ, ಎಂ.ಎಲ್.ಮಾನೆ, ಎಂ.ಪೊ.ಮೊಳವಾಡೆ, ಸಿ.ಎಸ್.ಮೋರೆ, ಎಲ್.ಎಸ್.ಮೋಳೆ, ಯು.ಎ.ಪೋತದಾರ, ಆರ್.ಎಸ್.ಕೋಷ್ಟಿ, ಎಸ್.ಬಿ.ನಾಯ್ಕರ, ಆರ್.ವೈ.ಪಾಟೀಲ, ಸಿ.ಎಸ್.ಕುಂಬಾರ, ಯು.ಎ.ಪಾಟೀಲ, ಉತ್ತಮ ವಾಡೇಕರ, ಎ.ಎಸ್.ಕುಂಬಾರ, ರಾಮಾ ಆಚಾರ್ಯ, ಎಸ್.ಕೆ.ಘಾಟೆ, ಶಿವಾನಂದ ಕಳಸದ, ನವೀನ್ ಕೆ.ಆರ್., ಬಿ.ಎ.ಹಿರೇಮಠ, ವಿರೂಪಾಕ್ಷಿ ಮಠದ, ಕೆ.ಎಸ್.ಬುರ್ಜೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts