More

    ಅಂಚೆ ಮತಪತ್ರಗಳ ಮೂಲಕ ಮತದಾನಕ್ಕೆ ಅವಕಾಶ

    ಚಿತ್ರದುರ್ಗ: ಚುನಾವಣಾ ಆಯೋಗ, ಲೋಕಸಭೆ ಚುನಾವಣೆ ಕರ್ತವ್ಯ ನಿರತ ವಿವಿಧ ಕ್ಷೇತ್ರಗಳ ಅಧಿಕಾರಿ,ಸಿಬ್ಬಂದಿಗೆ ಅಂಚೆಮತಪತ್ರಗಳ ಮೂಲಕ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಹೇಳಿದರು.
    ಪೋಸ್ಟಲ್‌ಬ್ಯಾಲಟ್ ಮತದಾನಕ್ಕೆ ಸಂಬಂಧಿಸಿದಂತೆ ಮಂಗಳವಾರ ಎಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು,ಪ್ರತಿ ಮತವೂ ಅಮೂಲ್ಯವಾಗಿದ್ದು,ಮತದಾನದ ಮಹತ್ವ ಕುರಿತು ಸ್ವೀಪ್ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
    ಹೀಗಾಗಿ ಮತದಾನದ ದಿನದಂದು ಕರ್ತವ್ಯದ ಕಾರಣದಿಂದಾಗಿ ಅರ್ಹ ಮತದಾರರು ಮತದಾನದಿಂದ ವಂಚಿತರಾಗಬಾರದೆಂಬ ಉದ್ದೇಶ ದಿಂದ ಆಯೋಗವು ಅಗತ್ಯ ಸೇವೆ ನಿರತ ಬೆಸ್ಕಾಂ,ಬಿಎಸ್‌ಎನ್‌ಎಲ್,ರೈಲ್ವೆ, ದೂರದರ್ಶನ,ಆಕಾಶವಾಣಿ,ಆರೋಗ್ಯಇಲಾಖೆ,ವಿಮಾನಯಾನ, ಸಾರಿಗೆ ಸಂಸ್ಥೆಗಳ ನೌಕರರು,ಅಗ್ನಿಶಾಮಕ ಸೇವೆ, ಮಾನ್ಯತೆ ಹೊಂದಿರುವ ಪತ್ರಕರ್ತರು,ಟ್ರಾಫಿಕ್‌ಪೊಲೀಸ್,ಆಂಬುಲೆನ್ಸ್ ಸೇವೆಯಲ್ಲಿರುವರು, ಕಾರಾಗೃಹ,ಕಂಟ್ರೋಲ್‌ರೂಂ ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮಾಂತರ ಮತ್ತು ನಗರ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ, ಸಿಬ್ಬಂದಿ, ಮತದಾನ ದಿನಕ್ಕೂ ಪೂರ್ವದಲ್ಲಿ ಫೆಸಿಲಿಟೇಶನ್‌ಸೆಂಟರ್ ಅಥವಾ ಪೋಸ್ಟಲ್‌ಬ್ಯಾಲಟ್ ಮೂಲಕ ಮತದಾನ ಮಾಡಬಹುದಾಗಿದೆ.
    ಫೆಸಿಲಿಟೇಶನ್ ಸೆಂಟರ್ ಅಥವಾ ಪೋಸ್ಟಲ್‌ಬ್ಯಾಲಟ್ ಮತದಾನಕ್ಕಾಗಿ ಸಂಬಂಧಿಸಿದ ಇಲಾಖೆಯಿಂದ ನಮೂನೆ 12ಡಿ ಭರ್ತಿ ಮಾಡಿ ಸಂಬಂಧಪಟ್ಟ ಕ್ಷೇತ್ರದ ನೋಡಲ್‌ಅಧಿಕಾರಿಗೆ,ಆಯಾ ಇಲಾಖಾ ಅಧಿಕಾರಿಗಳು ಸಲ್ಲಿಸಬೇಕು. 12ಡಿ ನಮೂನೆ ಒಮ್ಮೆ ಸಲ್ಲಿಸಿದವರು ಫೆಸಿಲಿಟೇಶನ್ ಸೆಂಟರ್ ಅಥವಾ ಪೋಸ್ಟಲ್‌ಬ್ಯಾಲಟ್ ಮೂಲಕವೇ ಮತದಾನ ಮಾಡಬೇಕು,ಅವರಿಗೆ ಮತಗಟ್ಟೆಗೆ ತೆರಳಿ ಮತದಾನಕ್ಕೆ ಅವಕಾಶ ಇರದೆಂದು ಎಡಿಸಿ ಹೇಳಿದರು.
    ಮನೆ ಬಾಗಿಲಲ್ಲೇ ಮತದಾನಕ್ಕೆ ವ್ಯವಸ್ಥೆ
    ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ತೊಂದರೆ ಇರುವಂತಹ ಅಂಗವಿಕಲರು,85 ವರ್ಷ ಮೀರಿದ ವಯೋವೃದ್ಧರ ಮನೆ,ಮನೆಗೆ ತೆರಳಿ,ಮತದಾನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ನಿಗದಿತ ನಮೂನೆಯನ್ನು ಆಯಾ ಬೂತ್‌ಮಟ್ಟದ ಅಧಿಕಾರಿಗಳ ಮೂಲಕ ತಲುಪಿಸಿ,ಮತದಾನ ದಿನಕ್ಕೂ ಪೂರ್ವದಲ್ಲೇ ಮನೆ,ಮನೆಗೆ ಚುನಾವಣಾ ಸಿಬ್ಬಂದಿ ತೆರಳಿ,ಮತದಾನ ಪಡೆಯುವರೆಂದರು.
    ಬ್ಯಾಲಟ್‌ನೋಡಲ್ ಅಧಿಕಾರಿ,ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ಬಿ. ಬೀರಲದಿನ್ನಿ,ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಬಸವನಗೌಡ ಮೇಟಿಪಾಟೀಲ್,ಚುನಾವಣಾ ಶಿರೇಸ್ತದಾರ್ ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts