More

    ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆ ಶುರು

    ಕಲಬುರಗಿ: ಕೋವಿಡ್-19 ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಿಭಾಗದ 34 ಆಧಾರ್ ಸೇವಾ ಕೇಂದ್ರಗಳನ್ನು ಪುನಾರಂಭಿಸಲಾಗಿದೆ ಎಂದು ವರಿಷ್ಠ ಅಂಚೆ ಅಧೀಕ್ಷಕ ಬಿ.ಆರ್.ನನಜಗಿ ತಿಳಿಸಿದ್ದಾರೆ.
    ಭಾರತೀಯ ಅಂಚೆ ಇಲಾಖೆ ಹಲವಾರು ಜನಪರ ಸೇವೆ ಹೊರತಂದಿದ್ದು, ಇದರಡಿ ಜನ ಸಾಮಾನ್ಯರಿಗೆ ಆಧಾರ್ ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಕಲಬುರಗಿ: ಪ್ರಧಾನ ಅಂಚೆ ಕಚೇರಿ, ರೈಲ್ವೆ ಸ್ಟೇಷನ್, ಬ್ರಹ್ಮಪುರ, ನೆಹರು ಗಂಜ್, ಜಿಜಿಎಚ್, ಜೆ ಗಂಗಾ, ಜಗತ್ ಅಂಚೆ ಕಚೇರಿ. ಅಫಜಲಪುರ, ಆಳಂದ, ರಟಕಲ್, ಶಹಾಬಾದ್, ವಾಡಿ, ಕುಂಬಾರಪೇಟೆ, ಹುಣಸಗಿ, ಕೆಂಭಾವಿ, ಕಾಳಗಿ, ಸೇಡಂ, ಮುಧೋಳ, ಗೋಟೂರ, ರಾಜಾಪುರ, ಗುರುಮಠಕಲ್, ಶಹಾಪುರ, ಸುರಪುರ, ದೇವಲಗಾಣಗಾಪುರ, ಚಿಮ್ಮನಚೂಡ, ಸುಲೇಪೇಟೆ, ಯಾದಗಿರಿ ರೈಲ್ವೆ ಸ್ಟೇಷನ್, ಬಿ.ಗುಡಿ ಅಂಚೆ ಕಚೇರಿ, ಕೊಳ್ಳುರ, ಭಂಕೂರ, ನಾಗಯಿದಲಾಯಿ, ಯಾದಗಿರಿ ಪ್ರಧಾನ ಅಂಚೆ ಕಚೇರಿ, ಗೋಗಿ ಮತ್ತು ಚಿತ್ತಾಪುರ ಅಂಚೆ ಕಚೇರಿಗಳಲ್ಲಿ ಸೇವೆ ಲಭ್ಯವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts