More

    ಅಂಚೆಯಣ್ಣಂದಿರಿಗೆ ಸನ್ಮಾನ

    ಧಾರವಾಡ: ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ನಗರದ ರಂಗಾಯಣದಲ್ಲಿ ಕನ್ನಡ ಕಲ್ಪವೃಕ್ಷ ಮತ್ತು ಭಾವನೆಗಳ ಕಿಂದರಿಜೋಗಿ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು. ಪ್ರೇಮಿಗಳ ದಿನಕ್ಕೆ ಪರ್ಯಾಯವಾಗಿ ದೇಶಪ್ರೇಮಿಗಳ ದಿನವೆಂದು ಆಚರಿಸಿ 80ಕ್ಕೂ ಹೆಚ್ಚು ಪೋಸ್ಟ್ ಮನ್​ಗಳಿಗೆ ಜಾಕೆಟ್ ನೀಡಿ ಸನ್ಮಾನಿಸಲಾಯಿತು.

    ಲೇಖಕರು, ಪ್ರಕಾಶಕರನ್ನು ಸೇರಿಸಿ ಕನ್ನಡದ ಓದು ಹೆಚ್ಚಿಸಲು ಇರಬಹುದಾದ ಸಮಸ್ಯೆಗಳ ನಿವಾರಣೆಗಾಗಿ ಪ್ರಯತ್ನಿಸುವ ವೇದಿಕೆ ಕನ್ನಡ ಕಲ್ಪವೃಕ್ಷ ಕಾರ್ಯಕ್ರಮವನ್ನು ಹಿರಿಯ ಪ್ರಕಾಶಕ ಹಾಗೂ ಮನೋಹರ ಗ್ರಂಥಮಾಲಾ ಸಂಪಾದಕ ಡಾ. ರಮಾಕಾಂತ ಜೋಶಿ ಉದ್ಘಾಟಿಸಿದರು.

    ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಅಂಚೆಯಣ್ಣಂದಿರು ಭಾವನೆಗಳ ಕಿಂದರಿಜೋಗಿಗಳು. ಅವರು ಹಿಂದೆ ನೇಮಕಾತಿ, ಮನಿಆರ್ಡರ್, ಸುಖ- ದುಃಖದ ಸುದ್ದಿಯನ್ನು ಮನೆಮನೆಗೂ ತಲುಪಿಸುತ್ತ ಬಂದವರು. ಕೋವಿಡ್​ನಂಥ ಸಂಕಷ್ಟದ ಪರಿಸ್ಥಿತಿಯಲ್ಲೂ ಮನೆಮನೆಗೆ ತೆರಳಿ ನೀಡಿದ ಸೇವೆ ಶ್ಲಾಘನೀಯ ಎಂದರು.

    ಸಾಹಿತಿ, ಪ್ರಕಾಶಕ ರೋಹಿತ ಚಕ್ರತೀರ್ಥ, ವಿಕ್ರಮ ವಾರಪತ್ರಿಕೆ ಸಂಪಾದಕ ವೃಷಾಂಕ ಭಟ್, 13 ಪ್ರಕಾಶಕರು, 28 ಲೇಖಕರು, 9 ಪುಸ್ತಕ ಮಳಿಗೆದಾರರು ಭಾಗವಹಿಸಿದ್ದರು.

    ಯುವಾ ಬ್ರಿಗೇಡ್ ರಾಜ್ಯ ಸಂಚಾಲಕ ಕಿರಣರಾಮ್ ವಿಭಾಗ ಸಂಚಾಲಕ ವರ್ಧಮಾನ ತ್ಯಾಗಿ, ಜಿಲ್ಲಾ ಸಂಚಾಲಕ ಚಿದಂಬರ ಶಾಸ್ತ್ರಿ, ಕಾರ್ಯಕರ್ತರಾದ ಪ್ರಜ್ವಲ್, ವಿನಾಯಕ, ಸಿದ್ದು ಪಾಟೀಲ, ಪ್ರತೀಕ, ಸದ್ಗುರು, ಪ್ರಶಾಂತ್, ನಿಂಗರಾಜ, ಪರಶುರಾಮ, ಸಂಜೀವ ದೀಕ್ಷಿತ, ಸಂಗಣ್ಣ ಬೆಳಗಾವಿ, ಶಶಿ ರಾಠೋಡ, ಭವ್ಯ, ಶ್ರೀನಿಧಿ, ಇತರರಿದ್ದರು.

    ಧಾರವಾಡ, ಬೆಂಗಳೂರಲ್ಲಿ ಬರಹಗಾರರ ಕಮ್ಮಟ ಆಯೋಜಿಸಲು ನಿರ್ಣಯ: ಕನ್ನಡ ಕಲ್ಪವೃಕ್ಷ ಕಾರ್ಯಕ್ರಮದ ಅಂಗವಾಗಿ ಲೇಖಕರು, ಪ್ರಕಾಶಕರು ಮತ್ತು ಓದುಗರ ನಡುವೆ ಸಂವಾದ ನಡೆಯಿತು. ಮಿಂಚಿನಬಳ್ಳಿ ಪುಸ್ತಕಗಳು, ಜಡಭರತರ ಸಾಹಿತ್ಯ, ಕೃಷ್ಣಮೂರ್ತಿ ಪುರಾಣಿಕ ಅವರ ಹಾಲುಂಡ ತವರು, ಹೆಳವನಕಟ್ಟೆ ಗಿರಿಯಮ್ಮ, ಅನಕೃ ಅವರ ಮಂಗಳಸೂತ್ರ, ಕಂದಗಲ್ ಹನುಮಂತರಾಯರ ನಾಟಕಗಳು, ತಾಲೂಕು ಮತ್ತು ಹೋಬಳಿ ಮಟ್ಟದ ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಯಿಸುವ ಸಾಹಿತ್ಯಗಳು ಮರುಮುದ್ರಣಗೊಂಡು ಓದುಗರಿಗೆ ಲಭಿಸುವಂತಾಗಬೇಕು ಎಂಬ ಅನಿಸಿಕೆ ವ್ಯಕ್ತವಾಯಿತು. ಧಾರವಾಡ ಮತ್ತು ಬೆಂಗಳೂರು ಭಾಗದಲ್ಲಿ ಬರಹಗಾರರ ಕಮ್ಮಟ ಆಯೋಜಿಸಲು ನಿರ್ಣಯಿಸಲಾಯಿತು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts