More

    ಅಂಗನವಾಡಿ ನೌಕರರ ಬೇಡಿಕೆ ಈಡೇರಿಕೆ ಶೀಘ್ರ

    ನಿಪ್ಪಾಣಿ: ಕೋವಿಡ್-19 ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಕಾರ್ಯ ಅವಿಸ್ಮರಣೀಯವಾಗಿದೆ. ಕರೊನಾ ನಿಯಂತ್ರಣ ನಂತರ ಅಂಗನವಾಡಿ ಕಾರ್ಯಕರ್ತೆಯರ ಬಾಕಿ ಬೇಡಿಕೆ ಈಡೇರಿಸುವಲ್ಲಿ ಹಾಗೂ ಪರಿಹಾರ ಕಲ್ಪಿಸುವಲ್ಲಿ ಹಂತಹಂತವಾಗಿ ಪ್ರಯತ್ನಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದ್ದಾರೆ.

    ಸ್ಥಳೀಯ ನಗರಸಭೆ ಆವರಣದಲ್ಲಿ ಸೋಮವಾರ ಜೊಲ್ಲೆ ಉದ್ಯೋಗ ಸಮೂಹ ಹಾಗೂ ಬಿಜೆಪಿ ಪಕ್ಷದ ಸಂಯುಕ್ತಾಶ್ರಯದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಕರೊನಾ ತಪಾಸಣೆ ಕಿಟ್, ಹೋಂ ಐಸೊಲೇಶನ್‌ನಲ್ಲಿರುವ ಅಗತ್ಯವಿರುವವರಿಗೆ ವಿತರಿಸಲು ಕೋವಿಡ್-19 ಮಾತ್ರೆಗಳ ಕಿಟ್ ವಿತರಿಸಿ ಅವರು ಮಾತನಾಡಿದರು.

    ಜೀವದ ಹಂಗು ತೊರೆದು ಜನರ ಆರೋಗ್ಯ ಸಂರಕ್ಷಣಾ ಕಾಯಕವನ್ನು ಮುಂದುವರಿಸಿದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ. ಮಕ್ಕಳು ಪಾಲಕರ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದ ಇಂತಹ ಸನ್ನಿವೇಶದಲ್ಲಿ ರಾಷ್ಟ್ರಕರ್ಮ ಹಾಗೂ ಏಕತಾ ೌಂಡೇಷನ್ ಸದಸ್ಯರು ಸೋಂಕಿತರ ಮೃತದೇಹಗಳ ಅಂತ್ಯಸಂಸ್ಕಾರ ನಡೆಸುವ ಮೂಲಕ ಪುಣ್ಯದ ಕಾಯಕ ಮಾಡುತ್ತಿದ್ದಾರೆ ಎಂದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೀಮಾ ಗುಂಜಾಳ, ಸಿಡಿಪಿಒ ಸುಮಿತ್ರಾ ಡಿ.ಬಿ., ಪೌರಾಯುಕ್ತ ಮಹಾವೀರ ಬೋರಣ್ಣವರ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡಿ, ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts