More

    ಅಂಗನವಾಡಿ ನೌಕರರಿಂದ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಬೇಡಿಕೆಗಳಿಗೆ ಸ್ಪಂದಿಸದಿರುವ ರಾಜ್ಯ ಬಜೆಟ್ ವಿರೋಧಿಸಿ ಹಾಗೂ ಹೆಚ್ಚುವರಿ ಕೆಲಸಗಳನ್ನು ಬಹಿಷ್ಕರಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು(ಸಿಐಟಿಯು ಸಂಯೋಜಿತ)ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಎದುರು ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು.
    ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಕರೊನಾ ಸಂದರ್ಭದಲ್ಲಿ ಮಕ್ಕಳಿಗೆ, ಮಹಿಳೆಯರ ಅಪೌಷ್ಠಿಕತೆ ತಡೆಯಲು ಹೈಕೋರ್ಟ್ ಎಚ್ಚರಿಕೆ ಕೊಟ್ಟಾಗ ಸರ್ಕಾರದ ಘನತೆ ಕಾಪಾಡಿದ್ದು ಅಂಗನವಾಡಿ ನೌಕರರು ಎಂದರು.
    ಸೇವಾ ಜೇಷ್ಠತೆಯ ಆಧಾರದಲ್ಲಿ 153.25 ಕೋಟಿ, ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿ ನೇಮಕಾತಿ 6.99 ಕೋಟಿ, ಅಂಗನವಾಡಿ ಸಹಾಯಕಿಯರಿಗೆ ಸಂಬಳದ ವ್ಯತ್ಯಾಸ ಮೊತ್ತ 131.42 ಕೋಟಿ, ನಿವೃತ್ತಿ ಸೌಲಭ್ಯ 47.82 ಕೋಟಿ ಸೇರಿದಂತೆ ಒಟ್ಟು 339.38 ಕೋಟಿ ರೂ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಪಾರಸು ಮಾಡಿತ್ತು. ಸೌಲಭ್ಯ ಕಲ್ಪಿಸಿದ್ದರೆ 1.30 ಲಕ್ಷ ಕುಟುಂಬಗಳಿಗೆ ಸಹಾಯವಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಯಾವುದೇ ಅಂಶವನ್ನು ಪರಿಗಣನೆ ಮಾಡದೆ ನೌಕರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
    ಅಂಗನವಾಡಿ ನೌಕರರು 2016 ರಿಂದ ಈವರೆಗೆ 7304 ಜನ ನಿವೃತ್ತರಾಗಿದ್ದರೂ ಇಡಗಂಟು ನೀಡಿಲ್ಲ.ಅಂಗನವಾಡಿ ನೌಕರರು ಮಾ.4ರಂದು ವಿಧಾನಸೌಧ ಚಲೋ ನಡೆಸಿದಾಗ ಸಚಿವೆ ಶಶಿಕಲಾ ಜೊಲ್ಲೆ ಸ್ಥಳಕ್ಕೆ ಆಗಮಿಸಿ ಈ ಬಜೆಟ್‍ನಲ್ಲಿ ಬೇಡಿಕೆ ಪರಿಗಣಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಟೀಕಿಸಿದರು.
    ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ತನಕ ಹೆಚ್ಚುವರಿ ಕೆಲಸಗಳಾದ ಇ-ಸರ್ವೇ, ಆರ್.ಡಿ.ಪಿ.ಆರ್.ನಿಂದ ಕೊಟ್ಟಿರುವ ಸರ್ವೇ, ಬಿಪಿಎಲ್ ಕಾರ್ಡ್, ಆರ್‍ಸಿಎಚ್ ಸರ್ವೇ, ಭಾಗ್ಯಲಕ್ಷ್ಮಿ, ಮಾತೃವಂದನಾ, ಮಾತೃಶ್ರೀ, ಸ್ತ್ರೀ ಶಕ್ತಿ, ಚುನಾವಣಾ ಮುಂತಾದ ಕೆಲಸಗಳನ್ನು ಬಹಿಷ್ಕರಿಸಲಾಗುವುದು.ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯನ್ನು ಕೊಡುವ ತನಕ ಅಡುಗೆ ಮಾಡುವುದಿಲ್ಲ ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.
    ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಕಲ್ಪನಾ, ಕಾರ್ಯದರ್ಶಿ ವಿ.ಮಂಜುಳಾ,ಖಜಾಂಚಿ ಲಕ್ಷ್ಮೀದೇವಮ್ಮ, ಮುಖಂಡರಾದ ಲೋಕೇಶ್ವರಿ,ಅಮರಾವತಿ, ಸರೋಜ, ಪ್ರಮೀಳಾ, ಸೌಭಾಗ್ಯ, ಧನಲಕ್ಷ್ಮೀ, ಗಾಯಿತ್ರಿ ಮುಂತಾದವರು ಇದ್ದರು.

    ಅಂಗನವಾಡಿ ನೌಕರರಿಂದ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts