More

    ಅಂಗನವಾಡಿ ಕೇಂದ್ರಗಳಿಗೆ ಹೈಟೆಕ್ ಸ್ಪರ್ಶ

    ನಿಪ್ಪಾಣಿ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಆಚರಿಸುತ್ತಿರುವ ಸೇವಾ ಪಾಕ್ಷಿಕ ಅಭಿಯಾನದಡಿ ಮಹಿಳಾ ಮೋರ್ಚಾ ಸ್ಥಳೀಯ ಗ್ರಾಮೀಣ ಘಟಕದಿಂದ ದತ್ತು ಪಡೆದ ತಾಲೂಕಿನ ನಾಲ್ಕು ಅಂಗನವಾಡಿ ಕೇಂದ್ರಗಳನ್ನು ಹೈಟೆಕ್ ಆಗಿ ಮಾರ್ಪಡಿಸಲಾಗುವುದು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

    ತಾಲೂಕಿನ ಕೋಡಣಿ ಗ್ರಾಪಂನ ಗಾಯಕವಾಡಿ ಗ್ರಾಮದಲ್ಲಿ ಗ್ರಾಮೀಣ ಮಹಿಳಾ ಮೋರ್ಚಾ ಘಟಕದಿಂದ ಅಂಗನವಾಡಿ ದತ್ತು ಪ್ರಕ್ರಿಯೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಗಾಯಕವಾಡಿ ಗ್ರಾಮದ ರಸ್ತೆ, ಚರಂಡಿ, ಕುಡಿಯುವ ನೀರು, ಮಂದಿರದ ಜೀರ್ಣೋದ್ಧಾರ ಸೇರಿ 2.69 ಕೋಟಿ ರೂ.ಅನುದಾನದ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ ಎಂದರು.

    ಮಹಿಳಾ ಮೋರ್ಚಾ ಗ್ರಾಮೀಣ ಘಟಕದ ಅಧ್ಯಕ್ಷೆ ಸರೊಜಿನಿ ಜಮದಾಡೆ ಮಾತನಾಡಿ, ನಗರದಲ್ಲಿ ಎರಡು ಮತ್ತು ಸಿದ್ನಾಳ, ಗಾಯಕವಾಡಿ ಗ್ರಾಮಗಳಲ್ಲಿಯ ತಲಾ ಒಂದು ಹೀಗೆ ತಾಲೂಕಿನ ಒಟ್ಟು ನಾಲ್ಕು ಅಂಗನವಾಡಿ ಕೇಂದ್ರ ದತ್ತು ಪಡೆದುಕೊಂಡಿದ್ದು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾರ್ಗದರ್ಶನದಲ್ಲಿ ಮಾದರಿ ಅಂಗನವಾಡಿ ಕೇಂದ್ರಗಳನ್ನಾಗಿ ಮಾಡಲಾಗುವುದು ಎಂದರು.

    ಸಿಡಿಪಿಒ ಸುಮಿತ್ರಾಡಿ.ಬಿ., ಗ್ರಾಪಂ ಅಧ್ಯಕ್ಷೆ ಲಲಿತಾ ತೋರಣೆ, ಸದಸ್ಯ ರವಿಂದ್ರ ಖೋತ, ವಿಠ್ಠಲ ನಾಯಿಕ, ಶಾಂತಾ ಡೋಣೆ, ಗಣಪತಿ ಖೋತ, ಸಿದ್ದು ನರಾಟೆ, ಸದಾಶಿವ ಬುಧಿಹಾಳೆ, ಪ್ರಕಾಶ ಶಿಂಧೆ, ಅಮಿತ ರಣದಿವೆ, ಉದಯ ನಾಯಿಕ, ಜ್ಞಾನದೇವ ಖವರೆ, ಮೊದಲಾದವರು ಸೇರಿದಂತೆ ಪಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ರಿಜ್ವಾನ್ ಮುಲ್ಲಾ ಸ್ವಾಗತಿಸಿ, ನಿರೂಪಿಸಿದರು. ಸಿದ್ಧಗೌಡ ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts