More

    ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್​ಫೋನ್

    ಹಾನಗಲ್ಲ: ತಾಲೂಕಿನ 319 ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್​ಫೋನ್ ವಿತರಿಸಲಾಗುತ್ತಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ವಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಸ್ಮಾರ್ಟ್​ಫೋನ್ ಮೂಲಕ ಮಗುವಿನ ದಾಖಲಾತಿ, ಹಾಜರಾತಿ ಹಾಗೂ ಮಗುವಿನ ಎಲ್ಲ ಚಟುವಟಿಕೆ ದಾಖಲಿಸಲಾಗುತ್ತದೆ. ಇದರೊಂದಿಗೆ ಗರ್ಭಿಣಿಯರ ಹಾಗೂ ಬಾಣಂತಿಯರ ದಾಖಲಾತಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರ ಹಾಜರಾತಿ, ಮಕ್ಕಳಿಗೆ ನೀಡುವ ಪೂರಕ ಪೌಷ್ಟಿಕ ಆಹಾರ ಮಾಹಿತಿಯನ್ನು ಪ್ರತಿದಿನ ಅಪ್​ಲೋಡ್ ಮಾಡಲಾಗುತ್ತದೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ತಂತ್ರಾಂಶ ಬಳಸುವ ತರಬೇತಿ ನೀಡಲಾಗಿದೆ. ಇದರೊಂದಿಗೆ ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆ ಮಾಡಿ, ಪೌಷ್ಟಿಕತೆ ಹೆಚ್ಚಿಸುವ, ಮಾತೃವಂದನೆ ಯೋಜನೆಯಡಿ ಮೊದಲ ಹೆರಿಗೆಗೆ 5 ಸಾವಿರ ರೂ.ಮೂರು ಹಂತದಲ್ಲಿ ನೀಡಲಾಗುತ್ತಿದೆ. ತಾಲೂಕಿನಲ್ಲಿ 5860 ಮಹಿಳೆಯರ ಖಾತೆಗೆ 2.93 ಕೋಟಿ ರೂ. ಈವರೆಗೆ ಜಮಾ ಮಾಡಲಾಗಿದೆ ಎಂದರು.

    ತಾಲೂಕಿನ ಗೊಟಗೊಡಿ, ಲಕ್ಮೀಪುರ, ಹರಳಕೊಪ್ಪ, ಹುಲುಗಿನಹಳ್ಳಿ, ಅಜಗುಂಡಿಕೊಪ್ಪ, ಹನುಮನಕೊಪ್ಪ ಹಾಗೂ ಗೆಜ್ಜಿಹಳ್ಳಿ ಗ್ರಾಮದಲ್ಲಿ ತಲಾ 16 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ನೂತನ ಕಟ್ಟಡಗಳ ನಿರ್ವಣ, ಕಾಮನಹಳ್ಳಿ, ಇನಾಂನೀರಲಗಿ, ಮೂಡೂರು, ಜಂಗಿನಕೊಪ್ಪ, ಹನುಮನಕೊಪ್ಪ ಗ್ರಾಮಗಳಲ್ಲಿ ತಲಾ 11 ಲಕ್ಷ ರೂ. ವೆಚ್ಚದಲ್ಲಿ ಪ್ರಾಥಮಿಕ ಶಾಲೆಗಳ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿ, ಅಜಗುಂಡಿಕೊಪ್ಪದಲ್ಲಿ 40 ಲಕ್ಷ ರೂ.ವೆಚ್ಚದಲ್ಲಿ ಆದರ್ಶಗ್ರಾಮ ಯೋಜನೆ, ಹಾಗೂ ತುಂಗಾ ಮೇಲ್ದಂಡೆ ಯೋಜನೆಯಡಿ ಸಿಸಿ ರಸ್ತೆ ಸೇರಿದಂತೆ ಒಟ್ಟು 2 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಂಸದ ಶಿವಕುಮಾರ ಉದಾಸಿ ಭೂಮಿಪೂಜೆ ನೆರವೇರಿಸಿದರು.

    ಸಿಡಿಪಿಒ ಸಂತೋಷಕುಮಾರ, ಪಿಡಬ್ಲುಡಿ ಎಇಇ ಪಿ.ಎಂ. ಶೆಟ್ಟಿಕೇರಿ, ಬಿಜೆಪಿ ತಾಲೂಕು ಅಧ್ಯಕ್ಷ ರಾಜು ಗೌಳಿ, ಎಪಿಎಂಸಿ ಅಧ್ಯಕ್ಷ ಸಿದ್ದಪ್ಪ ಬಂಗಾರೇರ, ಜಿಪಂ ಮಾಜಿ ಅಧ್ಯಕ್ಷೆ ಕಸ್ತೂರವ್ವ ವಡ್ಡರ, ಮಾಜಿ ಸದಸ್ಯ ರಾಜಣ್ಣ ಪಟ್ಟಣದ, ತಾಲೂಕು ಎಸ್​ಸಿ ಮೋರ್ಚಾ ಅಧ್ಯಕ್ಷ ಮಹೇಶ ಹರಿಜನ, ಕಲ್ಯಾಣಕುಮಾರ ಶೆಟ್ಟರ, ಪ್ರಶಾಂತ ಕಾಮನಹಳ್ಳಿ, ಚಂದ್ರು ಆನವಟ್ಟಿ, ಚಂದ್ರಣ್ಣ ಹರಿಜನ, ಬಿ.ಆರ್. ಪಾಟೀಲ, ರಾಜು ಮಲ್ಲಿಗಾರ, ಚಂದ್ರು ಉಗ್ರಣ್ಣನವರ, ಮಂಜುನಾಥ ಬಸವಂತಕರ, ನಾಗನಗೌಡ ಪಾಟೀಲ, ಮಾಲತೇಶ ಈಳಗೇರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts