More

    ಅಂಗಡಿ ಕಾಲೇಜ್​ ಪ್ರಾಜೆಕ್ಟ್​ಗೆ ಪ್ರಶಸ್ತಿ

    ಬೆಳಗಾವಿ: ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 45ನೇ ಸರಣಿಯ ವಿದ್ಯಾರ್ಥಿ ಪ್ರಾಜೆಕ್ಟ್​ ಕಾರ್ಯಕ್ರಮ (ಎಸ್​.ಪಿ.ಪಿ.)ದಲ್ಲಿ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದ ಇಲೆಕ್ಟ್ರಿಕಲ್​ ಹಾಗೂ ಇಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್​ ವಿಭಾಗ ವರ್ಷದ ಅತ್ಯುತ್ತಮ ಪ್ರಾಜೆಕ್ಟ್​ ಪ್ರಶಸ್ತಿ ಪಡೆದುಕೊಂಡಿದೆ.

    ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಮತ್ತು ತಾಂತ್ರಿಕ ಮಂಡಳಿ ಸಹಯೋಗದಲ್ಲಿ ಈಚೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಜರುಗಿದ ಎಸ್​.ಪಿ.ಪಿ.ಯಲ್ಲಿ ಅಂಗಡಿ ಕಾಲೇಜಿನ ವಿದ್ಯಾರ್ಥಿಗಳು ಮಂಡಿಸಿದ್ದ ಡಿಸೈನ್​ ಮೋಡಿಫಿಕೇಶನ್​ ಇನ್​ ಸೋಲಾರ್​ ಸ್ಟೀಲ್​ ಇನ್​ಕಾರ್ಪೋರೇಶನ್​ ಆಫ್​ ಫೇಸ್​ ಚೆಂಜಿಂಗ್​ ಮೆಟೆರಿಯಲ್​ ಟು ಇನ್​ಕ್ರೀಸ್​ ಎಫಿಸಿಯನ್ಸಿ ಆಫ್​ ಸ್ಟೆಪ್​ ಸೋಲಾರ್​ ಸ್ಟೀಲ್​ ಎಂಬ ವಿಷಯಕ್ಕೆ ಅತ್ಯತ್ತಮ ಪ್ರಾಜೆಕ್ಟ್​ ಪ್ರಶಸ್ತಿ ಲಭಿಸಿದೆ.

    ಈ ಸಂಶೋಧನೆ ಆಧಾರಿತ ಪ್ರಾಜೆಕ್ಟ್​ಅನ್ನು ಪೊ. ಕಾಂತೇಶ ಡಿ.ಸಿ.ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಪವನಕುಮಾರ ರಾಠೋಡ, ಮಹೇಶ ಪಾಟೀಲ ಮತ್ತು ದರ್ಶನ ಕೋರಿಗೆರಿ ಅಭಿವೃದ್ಧಿಪಡಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯೆ ಹಾಗೂ ಸಂಸದೆ ಮಂಗಲ ಸುರೇಶ ಅಂಗಡಿ, ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ.ಆನಂದ ದೇಶಪಾಂಡೆ, ವಿಭಾಗದ ಮುಖ್ಯಸ್ಥ ಪೊ.ಅನಿಲಕುಮಾರ ಕೋರಿಶೆಟ್ಟಿ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts