More

    ಹೊರಬಿತ್ತು ದೇಶಿಯವಾಗಿ ಸಿದ್ಧವಾಗಿರುವ 2ನೇ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದಿನ ಹೆಸರು

    ನವದೆಹಲಿ: ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ದೇಶದ 2ನೇ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದಿನ ಹೆಸರು ಇದೀಗ ಬಹಿರಂಗಗೊಂಡಿದೆ. ಅಹಮದಾಬಾದ್​ ಮೂಲದ ಝೈಡಸ್​ ಕ್ಯಾಡಿಲಾ ಹೆಲ್ತ್​ಕೇರ್​ ಕಂಪನಿ ಇದನ್ನು ಸಿದ್ಧಪಡಿಸಿದ್ದು ಇದಕ್ಕೆ ಝೈಕೋವ್​-ಡಿ (ZyCoV-D) ಎಂದು ನಾಮಕರಣ ಮಾಡಿದೆ.

    ಇದರ ಮೊದಲ ಹಂತದ ಕ್ಲಿನಿಕಲ್​ ಟ್ರಯಲ್​ ಮುಗಿದಿದ್ದು, ಝೈಕೋವ್​-ಡಿಯನ್ನು ಮಾನವರ ಮೇಲಿನ ಪ್ರಯೋಗಿಸಲು ಅಗತ್ಯ ಅನುಮತಿ ದೊರೆತಿರುವುದಾಗಿ ಝೈಡಸ್​ ಕ್ಯಾಡಿಲಾ ಹೆಲ್ತ್​ಕೇರ್​ ಶುಕ್ರವಾರ ತಿಳಿಸಿತ್ತು.

    ಝೈಕೋವ್​-ಡಿ ಚುಚ್ಚುಮದ್ದನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿದಾಗ ಅದರಿಂದ ಭಾರಿ ರೋಗನಿರೋಧಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಎಲ್ಲ ರೀತಿಯ ಬಲಿಷ್ಠವಾದ ವೈರಾಣುವನ್ನೂ ನಿಷ್ಕ್ರಿಯಗೊಳಿಸಬಲ್ಲದ್ದಾಗಿದೆ. ತನ್ಮೂಲಕ ಈ ಚುಚ್ಚುಮದ್ದಿನ ರಕ್ಷಣಾತ್ಮಕ ಸಾಮರ್ಥ್ಯ ಸಂಪೂರ್ಣವಾಗಿ ಸಾಬೀತಾಗಿದೆ ಎಂದು ಝೈಡಸ್​ ಸಂಸ್ಥೆ ಹೇಳಿದೆ.

    ಇದನ್ನೂ ಓದಿ: ಮಂಗಳ ಗ್ರಹದ ಬಹುದೊಡ್ಡ ಚಂದ್ರನ ಚಿತ್ರ ರವಾನಿಸಿದ ಮಾಮ್​

    ದೇಶದ ವಿವಿಧೆಡೆಗಳಿಂದ 1 ಸಾವಿರ ಕರೊನಾ ಸೋಂಕಿತರನ್ನು ಬಳಸಿಕೊಂಡು ಝೈಕೋವ್​-ಡಿ ಚುಚ್ಚಮದ್ದನ್ನು ಮಾನವರ ಮೇಲೆ ಪ್ರಯೋಗಿಸಲಾಗುವುದು. ಭಾರತ ಮತ್ತು ಜಾಗತಿಕ ಬೇಡಿಕೆಗಳನ್ನು ಪೂರೈಸಲು ಅಗತ್ಯವಾದ ಸಾಮರ್ಥ್ಯ ಹೆಚ್ಚಳಕ್ಕೂ ನಿರ್ಧರಿಸಲಾಗಿದೆ ಎಂದು ಹೇಳಿದೆ.

    ಮನುಷ್ಯರಿಗೆ ಕೊಡಬೇಕಿರುವ ಡೊಸೇಜ್​ನ ಮೂರು ಪಟ್ಟು ಡೋಸ್​ ಇಂಜೆಕ್ಷನ್​ ಅನ್ನು ಮೊಲಗಳಿಗೆ ಕೊಡಲಾಗಿತ್ತು. ಆದರೂ, ಅವುಗಳ ಪ್ರಾಣಕ್ಕೆ ಏನೊಂದು ಸಮಸ್ಯೆ ಆಗಲಿಲ್ಲ. ಇದನ್ನು ಗಮನಿಸಿದಾಗ, ಪುನರಾವರ್ತಿತ ಡೋಸ್​ ವಿಷಕಾರಿಯಾಗಿ ಪರಿಣಮಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದೆ.

    VIDEO: ಕರೊನಾ ಶಂಕಿತನ ಐಡಿಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts