More

    6 ತಿಂಗಳುಗಳಲ್ಲಿ 60% ಏರಿಕೆ ಕಂಡ ಝೊಮಾಟೊ ಷೇರು: ರೂ. 158ರಿಂದ 265 ತಲುಪಬಹುದು ಎನ್ನುತ್ತಾರೆ ತಜ್ಞರು

    ಮುಂಬೈ: ಆಹಾರ ವಿತರಣಾ ವೇದಿಕೆಯಾದ ಝೊಮಾಟೊ (Zomato) ಷೇರುಗಳ ಬೆಲೆ ಕಳೆದ 6 ತಿಂಗಳಲ್ಲಿ 60 ಪ್ರತಿಶತದಷ್ಟು ಏರಿಕೆ ಕಂಡಿದೆ. ತಜ್ಞರ ಪ್ರಕಾರ ಈ ಕಂಪನಿಯ ಷೇರುಗಳು ಇನ್ನೂ ಏರುಗತಿಯಲ್ಲಿವೆ. ಮಾರ್ಚ್ 4, 2024 ರಂದು, ಈ ಷೇರುಗಳ ಬೆಲೆ ದಾಖಲೆಯ ಗರಿಷ್ಠ ಮಟ್ಟವಾದ ರೂ 175.50 ತಲುಪಿತ್ತು. ಈ ವರ್ಷ ಇಲ್ಲಿಯವರೆಗೆ, ಕಂಪನಿಯ ಷೇರುಗಳ ಬೆಲೆ ಶೇಕಡಾ 28 ರಷ್ಟು ಏರಿಕೆ ಕಂಡಿದೆ.

    ಮಂಗಳವಾರ ಕಂಪನಿಯ ಷೇರುಗಳ ಬೆಲೆ 158.20 ರೂ. ಇದ್ದುದು ಕೆಲ ಸಮಯದ ನಂತರ 161.45 ರೂ.ಗೆ ತಲುಪಿತ್ತು. ಆದರೆ, ಮಾರುಕಟ್ಟೆ ಮುಕ್ತಾಯದ ವೇಳೆಗೆ ಷೇರುಗಳ ಬೆಲೆ 158 ರೂ.ಗೆ ಕುಸಿದಿತ್ತು.

    ಮುಂದಿನ ದಿನಗಳಲ್ಲಿ ಕಂಪನಿಯ ಷೇರುಗಳ ಬೆಲೆ 265 ರೂ.ಗಳ ಮಟ್ಟಕ್ಕೆ ಏರಬಹುದು ಎಂದು ಪ್ರೋಗ್ರೇಸ್ಸಿವ್​ ಷೇರು ಕಂಪನಿ ನಿರ್ದೇಶಕ ಆದಿತ್ಯ ಗಗ್ಗರ್ ಹೇಳುತ್ತಾರೆ. ಮುಂದಿನ ದಿನಗಳಲ್ಲಿಯೂ ಈ ಏರುಪೇರು ಮುಂದುವರಿಯಲಿದೆ ಎನ್ನುತ್ತಾರೆ ಅವರು.

    Tips2trades ಸಂಸ್ಥೆಯ ಅಭಿಜೀತ್ ಅವರು, ಝೊಮಾಟೊ ಷೇರುಗಳ ವ್ಯಾಪಾರದ ಮಾದರಿಯು ಬುಲಿಶ್ ಆಗಿ ಕಂಡುಬರುತ್ತಿಲ್ಲ ಎಂದು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಷೇರು 144 ರೂ.ಗಿಂತ ಕಡಿಮೆಯಾದರೆ, ನಂತರ ರೂ.128ರ ಮಟ್ಟಕ್ಕೆ ಕುಸಿಯಬಹುದು ಎನ್ನುತ್ತಾರೆ.

    ಡಿಸೆಂಬರ್ ತ್ರೈಮಾಸಿಕವು Zomato ಗೆ ತುಂಬಾ ಉತ್ತಮವಾಗಿತ್ತು. ಈ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ 138 ಕೋಟಿ ರೂ. ತಲುಪಿತು. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಕಂಪನಿಯು 347 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.

    12000% ಲಾಭ ನೀಡಿದ ಮಲ್ಟಿಬ್ಯಾಗರ್ ಸ್ಟಾಕ್: ಈಗ ಒಂದೇ ದಿನದಲ್ಲಿ 20% ಏರಿಕೆ

    7 ಕಂಪನಿಗಳಿಂದ ಹೂಡಿಕೆದಾರರಿಗೆ ಉಡುಗೊರೆ: ಬೋನಸ್​ ಷೇರು, ಡಿವಿಡೆಂಡ್​ ನೀಡಲು ಸಜ್ಜು

    ಹೊರಕ್ಕೆ ಹರಿದ ವಿದೇಶಿ ನಿಧಿ: ಶೇಕಡಾ 1ರಷ್ಟು ಕುಸಿದ ಷೇರು ಸೂಚ್ಯಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts