More

    ಬೆಂಗಳೂರಿನ ಕರೊನಾ ಸೋಂಕಿತೆಗೆ ಆರ್‌ಸಿಬಿ ಆಟಗಾರ ಚಾಹಲ್ ನೆರವು

    ನವದೆಹಲಿ: ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬೆಂಗಳೂರಿನ ಕರೊನಾ ಸೋಂಕಿತೆಯೊಬ್ಬರಿಗೆ ಚಿಕಿತ್ಸೆಗೆ 2 ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಆನ್‌ಲೈನ್ ಕ್ರೌಡ್‌ಫಂಡಿಂಗ್ ವೇದಿಕೆ ‘ಕೆಟ್ಟೋ’ದಲ್ಲಿ ಸೋಂಕಿತೆ ಅಮುದಾ ಚಿಕಿತ್ಸೆಗೆ ಒಟ್ಟು 4 ಲಕ್ಷ ರೂ. ಸಂಗ್ರಹವಾಗಿದ್ದು, ಈ ಪೈಕಿ ಅರ್ಧದಷ್ಟು ಮೊತ್ತವನ್ನು ಚಾಹಲ್ ಅವರೇ ನೀಡಿದ್ದಾರೆ.

    ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವೆಂಟಿಲೇಟರ್ ನೆರವಿನೊಂದಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮುದಾ ಅವರಿಗೆ ಚಾಹಲ್ ತಲಾ 1 ಲಕ್ಷ ರೂ.ನಂತೆ 2 ಬಾರಿ ನೆರವು ನೀಡಿದ್ದಾರೆ. ಅಮುದಾ ಕುಟುಂಬ ಇದುವರೆಗೆ 4 ಲಕ್ಷ ರೂ. ಸಂಗ್ರಹಿಸಿದ್ದು, ಇನ್ನೂ ಹೆಚ್ಚಿನ ನೆರವಿನ ಅಗತ್ಯ ಇದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಭಾರತ ವಿರುದ್ಧದ ಸೋಲಿಗೆ ನೆಪ ಹೇಳಿ ಟ್ರೋಲಾದ ಆಸೀಸ್ ನಾಯಕ ಟಿಮ್ ಪೇನ್!

    ಚಾಹಲ್ ಕುಟುಂಬವೂ ಸದ್ಯ ಕರೊನಾ ಸೋಂಕಿನಿಂದ ಬಳಲುತ್ತಿದೆ. ಅವರ ತಂದೆ-ತಾಯಿ ಇಬ್ಬರೂ ಸೋಂಕಿತರಾಗಿದ್ದು, ಈ ಪೈಕಿ ತಂದೆ ಗಂಭೀರ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಮುನ್ನ ಮಾರ್ಚ್‌ನಲ್ಲಿ ಅವರ ಅತ್ತೆ ಕೂಡ ಸೋಂಕಿತೆಯಾಗಿದ್ದರು.

    ಚಾಹಲ್ ಈ ಮುನ್ನ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ ದಂಪತಿಯ ಕರೊನಾ ಹೋರಾಟದ ನಿಧಿ ಸಂಗ್ರಹ ಅಭಿಯಾನಕ್ಕೆ 95 ಸಾವಿರ ರೂ. ದೇಣಿಗೆ ನೀಡಿದ್ದರು. ಕೊಹ್ಲಿ-ಅನುಷ್ಕಾ ದಂಪತಿ ಕೂಡ ‘ಕೆಟ್ಟೋ’ ಮೂಲಕವೇ ಇದುವರೆಗೆ ಸುಮಾರು 11 ಕೋಟಿ ರೂ. ಸಂಗ್ರಹಿಸಿ ಕರೊನಾ ಹೋರಾಟಕ್ಕೆ ನೀಡಿದೆ.

    ಗೋವಾಗೆ ತೆರಳುತ್ತಿದ್ದ ಪೃಥ್ವಿ ಷಾ ಮತ್ತು ಸ್ನೇಹಿತರನ್ನು ತಡೆದ ಪೊಲೀಸರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts