More

    ವೈಟಿಪಿಎಸ್ ಖಾಸಗೀಕರಣ ಕೈಬಿಡಬೇಕೆಂದು ಒತ್ತಾಯಿಸಿ ಕೈಗಾರಿಕಾ ಪ್ರದೇಶ ಭೂ ಸಂತ್ರಸ್ಥರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯ

    ರಾಯಚೂರು: ಸ್ಥಳೀಯ ವೈಟಿಪಿಎಸ್ ಥರ್ಮಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ಖಾಸಗೀಕರಣ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈ ಬಿಡಬೇಕೆಂದು ಒತ್ತಾಯಿಸಿ ರಾಯಚೂರು ಕೈಗಾರಿಕಾ ಪ್ರದೇಶ ಭೂ ಸಂತ್ರಸ್ಥರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನಗರದ ಡಿಸಿ ಕಚೇರಿ ಸ್ಥಾನಿಕ ಅಧಿಕಾರಿ ಪ್ರಭಾವತಿಗೆ ಮನವಿ ಸಲ್ಲಿಸಿದರು.

    ಜಿಲ್ಲೆಯ ವೈಟಿಪಿಎಸ್ ಕೇಂದ್ರದ ಖಾಸಗೀಕರಣಕ್ಕೆ ವಾಮಮಾರ್ಗದಿಂದ ಅನುಮೋದಿಸಿರುವುದು ಈ ಭಾಗದ ಜನರನ್ನು ವಂಚಿಸಿದಂತಾಗಿದೆ. ಹೈದರಾಬಾದ್ ಮೂಲದ ಪವರ್ ಮೆಕ್ ಕಂಪನಿಗೆ ವೈಟಿಪಿಎಸ್ ಘಟಕದ ನಿರ್ವಹಣೆ ಜವಾಬ್ದಾರಿ ನೀಡುವ ವರದಿಗಳು ಪ್ರಕಟವಾಗಿದ್ದು, ಬಡ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಇಲ್ಲಿಯ ಜನರಿಗೆ ಹಾಗೂ ಭೂಮಿ ಕಳೆದುಕೊಂಡ ಕುಟುಂಬಕ್ಕೆ ಉದ್ಯೋಗದ ಭರವಸೆಯನ್ನು ನೀಡಿ, ಇದೀಗ ಖಾಸಗೀಕರಣಕ್ಕೆ ಮುಂದಾಗಿದ್ದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಕೂಡಲೇ ಮೂರು ವರ್ಷದ ಭೂ ಒಡೆತನ ಅವಧಿಯನ್ನು ಸಡಿಲಿಸಿ ಯಾರ ಹೆಸರಲ್ಲಿ ಅಧಿಸೂಚನೆ ಹೊರಡಿಸಿರುತ್ತಿರೋ ಆ ಕುಟುಂಬಕ್ಕೆ ಒಬ್ಬರಂತೆ ಉದ್ಯೋಗ ನೀಡಬೇಕು, ಮೂರು ಹಂತದ ಸ್ವಾಧೀನದಲ್ಲಿ ಜಂಟಿ ಖಾತೆಯ ಕುಟುಂಬಗಳನ್ನು ಪ್ರತ್ಯೇಕಿಸಿ ಉದ್ಯೋಗಕ್ಕೆ ಪರಿಗಣಿಸಬೇಕು, ಅರ್ಜಿ ಸಲ್ಲಿಸಿರುವವರಿಗೆ ಅಗತ್ಯ ತರಬೇತಿ ಮತ್ತು ಉದ್ಯೋಗದ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

    ಸಂಘದ ಗೌರವಾಧ್ಯಕ್ಷ ಕೆ.ಸತ್ಯನಾರಾಯಣರಾವ್, ಜಿಲ್ಲಾಧ್ಯಕ್ಷ ರಾಮನಗೌಡ ಏಗನೂರು, ಪ್ರ.ಕಾ.ಎಸ್.ಜಿ. ಪ್ರಭು ಮಡಿವಾಳ, ಪದಾಧಿಕಾರಿಗಳಾದ ರವಿಕಾಂತರಡ್ಡಿ, ಟಿ.ಲಿಂಗಾರಡ್ಡಿ, ವಿರೂಪಾಕ್ಷಿಗೌಡ, ಬೀರಪ್ಪ , ಕರಿಯಪ್ಪ ಅಚ್ಚೊಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts