More

    ಕರೊನಾ ಲಸಿಕೆ ಬಗ್ಗೆ ‘ಹೇಟ್ ಸ್ಪೀಚ್’ : ಯೂಟ್ಯೂಬರ್ ಅಬು ಫೈಸಲ್ ಬಂಧನ

    ಹೈದರಾಬಾದ್: ಕರೊನಾ ಲಸಿಕೆಯ ಬಗ್ಗೆ ಅವೈಜ್ನಾನಿಕ ಮಾತುಗಳನ್ನಾಡಿ ‘ಹೇಟ್​ ಸ್ಪೀಚ್’ ಮಾಡಿ ಯೂಟ್ಯೂಬ್ ವೀಡಿಯೋ ಮಾಡಿದ್ದ ಎನ್ನಲಾದ ಅಬು ಫೈಸಲ್​ಅನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ದುಬೈನಿಂದ ಹೈದರಾಬಾದಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2020ರ ಮೇ ತಿಂಗಳಲ್ಲಿ ಅಬು ಫೈಸಲ್ ತಾನು ನಡೆಸುವ ‘ಅಬು ಫೈಸಲ್ ಧಮಾಕಾ’ ಎನ್ನುವ ಯುಟ್ಯೂಬ್ ಚಾನೆಲ್​ನಲ್ಲಿ ಕರೊನಾ ಲಸಿಕೆ ಬಗ್ಗೆ ವೀಡಿಯೋ ಪ್ರಕಟಿಸಿದ್ದ. ಕರೊನಾ ಲಸಿಕೆಯು ಜನಸಂಖ್ಯೆ ನಿಯಂತ್ರಿಸಲು ಒಂದು ಮಾರ್ಗವಾಗಿದೆ ಎಂದು ಅವೈಜ್ನಾನಿಕ ಮಾತುಗಳನ್ನಾಡಿದ್ದ ಫೈಸಲ್, ಲಸಿಕೆ ತೆಗೆದುಕೊಳ್ಳಬೇಡಿ ಎಂದು ಮುಸಲ್ಮಾನರಿಗೆ ಕರೆ ನೀಡಿದ್ದ. ಈ ಬಗ್ಗೆ ತನಗೆ ‘ಗೋರಕ್ಷಣೆಗೆ ಸಂಬಂಧಿಸಿದ ಗುಂಪುಗಳಿಂದ ಮಾಹಿತಿ ಸಿಕ್ಕಿದೆ’ ಎಂದು ಹೇಳಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ

    ಫೈಸಲ್​ನ ಈ ವೀಡಿಯೋ ಹೇಟ್​ ಸ್ಪೀಚ್​ ರೀತಿಯದ್ದಾಗಿದೆ ಎಂದು ಇಮ್ರಾನ್ ಖಾನ್ ಎಂಬುವರು ಬಾಂಬೆ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆ ನಂತರ ಕೋರ್ಟ್ ಆದೇಶಾನುಸಾರವಾಗಿ ಆ ವೀಡಿಯೋವನ್ನು ತೆಗೆದುಹಾಕಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಹೈದರಾಬಾದ್ ಪೊಲೀಸರು, ಕೋಮುಸೌಹಾರ್ದವನ್ನು ಕೆಡಿಸುವ ಪ್ರಯತ್ನ ಮಾಡಿದ್ದಾನೆಂದು ಆತನ ವಿರುದ್ಧ ಸುಯೊ ಮೋಟೋ ಕೇಸು ದಾಖಲಿಸಿದ್ದರು. ಮೂಲತಃ ಹೈದರಾಬಾದಿನ ಬರ್ಕಸ್ ಪ್ರದೇಶದ ನಿವಾಸಿಯಾದ ಅಬು ಫೈಸಲ್ ಆಗ ದುಬೈನಲ್ಲಿ ವಾಸಿಸುತ್ತಿದ್ದ. ಮತ್ತೆ ಜೂನ್ 4, 2020 ಕ್ಕೆ ಅದೇ ರೀತಿಯ ಮತ್ತೊಂದು ವೀಡಿಯೋವನ್ನು ಆತ ಮಾಡಿದಾಗ, ಪೊಲೀಸರು ಅವನ ವಿರುದ್ಧ ವಾರೆಂಟ್ ಜಾರಿ ಮಾಡಿದ್ದರು ಎನ್ನಲಾಗಿದೆ.

    ಶುಕ್ರವಾರ (ಫೆಬ್ರವರಿ 26) ಫೈಸಲ್ ಹೈದರಾಬಾದಿನ ವಿಮಾನ ನಿಲ್ದಾಣ ತಲುಪಿದಾಗ, ಬ್ಯೂರೋ ಆಫ್ ಇಮ್ಮಿಗ್ರೇಷನ್ ಅಧಿಕಾರಿಗಳು ಬಂಧಿಸಿದರು. ನಂತರ ಹೈದರಾಬಾದ್ ಸೆಂಟ್ರಲ್ ಕ್ರೈಂ ಸ್ಟೇಷನ್ ಪೊಲೀಸರು ಆತನನ್ನು ಕರೆದುಕೊಂಡು ಹೋಗಿ ನಂಪಲ್ಲಿ ಕೋರ್ಟ್ ಮುಂದೆ ಹಾಜರುಪಡಿಸಿದರು. ನ್ಯಾಯಾಲಯವು ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸ್ ಜಂಟಿ ಕಮಿಷನರ್ ಅವಿನಾಶ್ ಮೊಹಂತಿ ತಿಳಿಸಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    2ನೇ ಹಂತದ ಕರೊನಾ ಲಸಿಕೆ ಅಭಿಯಾನ : ಇಲ್ಲಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ

    ಪಿಎನ್​ಬಿ ಹಗರಣ : ನೀರವ್ ಮೋದಿಯನ್ನು ಭಾರತಕ್ಕೆ ಒಪ್ಪಿಸಲು ಇಂಗ್ಲೆಂಡ್ ಕೋರ್ಟ್ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts