More

    ಯುವಕರು ರಾಯಣ್ಣನ ಆದರ್ಶ ಪಾಲಿಸಿ- ಸತೀಶ ಜಾರಕಿಹೊಳಿ

    ನೇಸರಗಿ: ಸಂಗೊಳ್ಳಿ, ನಂದಗಡದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕುರುಹುಗಳನ್ನು ರಕ್ಷಿಸಲು ಮುಖ್ಯಮಂತ್ರಿ ಮಹತ್ವಪೂರ್ಣ ಕಾರ್ಯ ಯೋಜನೆ ರೂಪಿಸಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

    ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣನ ಶೌರ್ಯ ಸದಾ ಸ್ಮರಿಸಬೇಕು. ಅವರ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಕೌಲಗುಡ್ಡ ಅಮರೇಶ್ವರ ಮಹಾರಾಜರು, ಮಲ್ಲಪುರ ಗಾಳೇಶ್ವರಮಠದ ಚಿದಾನಂದ ಸ್ವಾಮೀಜಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಯುವಕರಿಗೆ ಆದರ್ಶವಾಗಬೇಕು ಎಂದರು.

    ಜಿಪಂ ಮಾಜಿ ಅಧ್ಯಕ್ಷ ಎಸ್.ಎಫ್. ದೊಡಗೌಡರ, ಜಿಪಂ ಸದಸ್ಯರಾದ ಕೃಷ್ಣಾ ಅನಗೋಳಕರ, ಅನಿಲ ಮೇಕಲಮರಡಿ, ಡಾ. ರಾಜೇಂದ್ರ ಸಣ್ಣಕ್ಕಿ, ಲಕ್ಷ್ಮಣರಾವ್ ಚಿಂಗಳೆ, ಶ್ಯಾಮಸುಂದರ ಶಿಲ್ಲೇದಾರ, ಮಹಾಂತೇಶ ಮೊಹರೆ, ವಿಠ್ಠಲ ಹಂಪಿಹೋಳಿ, ಹಬೀಬ್ ಶಿಲ್ಲೇದಾರ, ಮಹೇಶ ಪೂಜೇರಿ, ಆಶೀಫ್ ಮುಲ್ಲಾ, ಪಿಎಸ್‌ಐ ವೈ.ಎಲ್. ಶಿಗಿಹಳ್ಳಿ, ರಾಮಣ್ಣಗೂಳಿ, ಕಾಶೀಮ ಜಮಾದಾರ, ರಾಜು ಕಡಕೋಳ, ಮಂಜುನಾಥ ಹೊಸಮನಿ, ಅಭಿನಂದನ ಗಡಬಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts