More

    ಉತ್ಸಾಹದಿಂದ ಯುವ ಮತದಾರರು ಮತ ಚಲಾಯಿಸಿ:ತುಷಾರ್​ ಗಿರಿನಾಥ್​ ಕರೆ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ “ನಮ್ಮ ನಡಿಗೆ ಮತಗಟ್ಟೆ ಕಡೆಗೆ’ ಧ್ಯೇಯದೊಂದಿಗೆ ಎಲ್ಲ ಯುವ ಮುತದಾರರು ಉತ್ಸಾಹದಿಂದ ಮತ ಚಲಾಯಿಸಬೇಕೆಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್​ ಗಿರಿನಾಥ್​ ಕರೆ ಕೊಟ್ಟಿದ್ದಾರೆ.

    ಕೇಂದ್ರ ಚುನಾವಣಾ ಆಯೋಗ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸೋಮವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ “ನಮ್ಮ ನಡೆ ಮತಗಟ್ಟೆ ಕಡೆಗೆ’ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಗರದಲ್ಲಿ ಪ್ರತಿ ಬಾರಿ ಚುನಾವಣೆಯಲ್ಲಿಯೂ ಕಡಿಮೆ ಮತದಾನವಾಗುತ್ತಿದೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಗುರಿ ಹಾಕಿಕೊಂಡಿದ್ದೇವೆ. ಮತಗಟ್ಟೆಗಳ ಬಳಿ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಎಲ್ಲರೂ ಒಟ್ಟಾಗಿ ಇತರರನ್ನೂ ಪ್ರೇರೇಪಿಸುವ ಮೂಲಕ ತಪ್ಪದೆ ಮತಗಟ್ಟೆಗಳಲ್ಲಿ ಆಗಮಿಸಿ ಮತ ಚಲಾಯಿಸಬೇಕು. ಕೆವೈಸಿ-ಇಸಿಐ ತಂತ್ರಾಂಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳ ಮಾಹಿತಿ ಸಿಗುತ್ತದೆ. ಹಾಗಾಗಿ, ನಿಮ್ಮ ಕ್ಷೇತ್ರದ ಅಭ್ಯರ್ಥಿ ಬಗ್ಗೆ ತಂತ್ರಾಂಶದಲ್ಲಿ ತಿಳಿದುಕೊಳ್ಳಬಹುದು ಎಂದು ಹೇಳಿದರು.

    ಚುನಾವಣಾ ರಾಯಬಾರಿ, ಹಿರಿಯ ನಟ ರಮೇಶ್​ ಅರವಿಂದ್​ ಮಾತನಾಡಿ,ಒಂದು ಇಟ್ಟಿಗೆಯಿಂದ ಕಟ್ಟಡ ಕಟ್ಟಲು ಸಾಧ್ಯವಿಲ್ಲ. ಸಾವಿರಾರು ಇಟ್ಟಿಗೆಗಳು ಸೇರಿದರೆ ಮಾತ್ರ ಕಟ್ಟಡ ನಿರ್ಮಿಸಬಹುದು. ಅದೇರೀತಿ ಪ್ರತಿ ಮತದಾರ ಒಂದೊಂದು ಇಟ್ಟಿಗೆ ಇದ್ದಂತೆ. ಎಲ್ಲರೂ ಒಟ್ಟಾಗಿ ಸೇರಿದರೆ ಮಾತ್ರ ಉತ್ತಮ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಯುವ ಮತದಾರರಿಂದ ಸಾಧ್ಯ. ಹಾಗಾಗಿ, ನಿಮ್ಮ ಸ್ವವಿವೇಚನೆಯಿಂದ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಸಲಹೆ ನೀಡಿದರು.

    ಚಿತ್ರದುರ್ಗ: ಸಚಿವ ಜಮೀರ್ ಅಹಮ್ಮದ್​ ಖಾನ್​ಗೆ ಹಠಾತ್ ಎದೆನೋವು

    ಹಲವು ಪ್ರಶ್ನೆ ಕೇಳಿದ ವಿದ್ಯಾರ್ಥಿಗಳು
    ಎಲ್ಲರಿಗೂ ಮತದಾನ ಕಡ್ಡಾಯವೆಂದು ಯಾಕೆ ಮಾಡಿಲ್ಲ, ಉತ್ತಮ ಅಭ್ಯರ್ಥಿ ಎಂದರೆ ಯಾರು, ನಾವು ಹೇಗೆ ಆಯ್ಕೆ ಮಾಡಬೇಕು, ಗುಮಾಸ್ತನಾಗಬೇಕಾದರೂ ವಿದ್ಯಾರ್ಹತೆ ಅಗತ್ಯವಿರುತ್ತದೆ. ಆದರೆ,ರಾಜಕೀಯ ಪ್ರತಿನಿಧಿಗಳಿಗೆ ಯಾಕೆ ಆ ನಿಯಮವಿಲ್ಲ, ನೋಟಾದಿಂದ ಏನು ಪ್ರಯೋಜನವಿದೆ, ಇವಿಎಂ ಯಂತ್ರವನ್ನು ನಾವು ಎಷ್ಟು ಬಾರಿ ಒತ್ತಬಹುದು ಸೇರಿ ಇತ್ಯಾದಿ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿದರು. ಬೆಂಗಳೂರು ನಗರ ವಿವಿ, ಮಹಾರಾಣಿ ಕಾಲೇಜು, ನೃಪತುಂಗಾ ವಿವಿ, ಆರ್​.ವಿ. ಕಾಲೇಜು, ಎಸ್​ಜೆಆರ್​ಸಿ ಕಾಲೇಜು ಸೇರಿ ವಿವಿಧ ಕಾಲೇಜುಗಳಿಂದ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗೃತಿ ಅಭಿಯಾನದಲ್ಲಿ ಭಾಗಿಯಾಗಿದ್ದರು. ವಿದ್ಯಾರ್ಥಿಗಳಿಗೆ ಮತದಾನ ಪ್ರತಿಜ್ಱ ಧಿ ಬೋಧಿಸಲಾಯಿತು. ಜಿಲ್ಲಾ ಸ್ವೀಪ್​ ಸಮಿತಿ ಅಧ್ಯ ಕಾಂತರಾಜು, ಬೆಂಗಳೂರು ನಗರ ವಿವಿ ಕುಲಪತಿ ಪೊ.ಲಿಂಗರಾಜು ಗಾಂಧಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್​ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts